ಯೂನಿಫಾರ್ಮ್ ಧರಿಸಿ ದರ್ಶನ್ ಹಾಡಿಗೆ ವೈಷ್ಣವಿ - ಗಗನ್ ಸ್ಟೆಪ್ಸ್, ಬೇಗ ಮದುವೆ ಆಗಿ ಎಂದ ಫ್ಯಾನ್ಸ್

Published : Sep 28, 2024, 10:20 AM ISTUpdated : Sep 28, 2024, 01:05 PM IST
ಯೂನಿಫಾರ್ಮ್ ಧರಿಸಿ  ದರ್ಶನ್ ಹಾಡಿಗೆ  ವೈಷ್ಣವಿ - ಗಗನ್ ಸ್ಟೆಪ್ಸ್, ಬೇಗ ಮದುವೆ ಆಗಿ ಎಂದ ಫ್ಯಾನ್ಸ್

ಸಾರಾಂಶ

ಸೀತಾರಾಮ ಸೀರಿಯಲ್ ಆಕ್ಟರ್ಸ್, ಧಾರಾವಾಹಿ ಮಾತ್ರವಲ್ಲ ರೀಲ್ಸ್ ಮಾಡೋದ್ರಲ್ಲೂ ಬ್ಯೂಸಿ ಇದ್ದಾರೆ. ಈಗ ಅವರ ಯೂನಿಫಾರ್ಮ್ ಡಾನ್ಸ್ ವೈರಲ್ ಆಗಿದೆ. ದರ್ಶನ್ ಹಾಡಿಗೆ ವೈಷ್ಣವಿ, ಗಗನ್ ಜೊತೆ ವಿಶ್ವ, ಸಾಧನ ಕೂಡ ಸ್ಟೆಪ್ ಹಾಕಿದ್ದಾರೆ.   

ಝೀ ಕನ್ನಡ ಸೀರಿಯಲ್ ಸೀತಾರಾಮ (Zee Kannada Serial Seetha Raama) ಫೇಮ್ ನ ಸೀತಾ ಹಾಗೂ ರಾಮನ ಸ್ಟೈಲ್ ಬದಲಾಗಿದೆ. ಸೀರೆಯುಡುತ್ತಿದ್ದ ನಟಿ ವೈಷ್ಣವಿ (actress Vaishnavi), ಸ್ಕೂಲ್ ಯೂನಿಫಾರ್ಮ್ ಹಾಕಿದ್ದಾರೆ. ಬರೀ ವೈಶೂ ಮಾತ್ರವಲ್ಲ ರಾಮ್ ಕೂಡ ಸ್ಕೂಲಿಗೆ ಹೋಗೋ ಹುಡುಗನ ರೀತಿ ಯೂನಿಫಾರ್ಮ್ ಧರಿಸಿ, ಸಖತ್ ಡಾನ್ಸ್ ಮಾಡಿದ್ದಾರೆ. ಸ್ಯಾಂಡಲ್ವುಡ್ ನಟ ದರ್ಶನ್ (Sandalwood Darshan) ಜೈಲಿಗೆ ಹೋದ್ಮೇಲೆ ಅವರ ಹಾಡಿಗೆ ಸ್ಟೆಪ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಈ ಲೀಸ್ಟ್ ನಲ್ಲಿ ವೈಷ್ಣವಿ ಕೂಡ ಸೇರಿದ್ದಾರೆ. ವೈಷ್ಣವಿ ಹಾಗೂ ನಟ ಗಗನ್ (Actor Gagan), ದರ್ಶನ್ ಅಭಿನಯದ ಸೂಪರ್ ಹಿಟ್ ಸಾಂಗ್, ಸಖತ್ತಾಗವ್ಳೆ, ಸುಮ್ನೆ ನಗ್ತಾಳೆ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ವೈಷ್ಣವಿ ಹಾಗೂ ಗಗನ್ ಜೊತೆ ವಿಶ್ವ ಮತ್ತು ಸಾಧನಾ ಕೂಡ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಪೋಸ್ಟ್ ಮಾಡಿರುವ ವೈಷ್ಣವಿ ಇದು ಫನ್ ಅಂತ ಶೀರ್ಷಿಕೆ ಹಾಕಿದ್ದಾರೆ. ವೈಷ್ಣವಿ ಹಾಗೂ ಸಾಧನಾ, ಬಿಳಿ ಶರ್ಟ್, ನೀಲಿ ಸ್ಕರ್ಟ್ ಧರಿಸಿ, ಟೈ ಹಾಕಿದ್ದಾರೆ. ಎರಡು ಜಡೆ ಹಾಕಿಕೊಂಡು, ಸ್ಕೂಲಿಗೆ ಹೋಗುವ ಹುಡುಗಿಯರಂತೆ ಮಿಂಚುತ್ತಿದ್ದಾರೆ. ಇನ್ನು ಗಗನ್ ಹಾಗೂ ವಿಶ್ವ ಕಡಿಮೆ ಏನಿಲ್ಲ. ಚಡ್ಡಿ, ಶರ್ಟ್ ಮೇಲೆ ಟೈ ಧರಿಸಿ, ಸಖತ್ ಆಗಿ ಕುಣಿದಿದ್ದಾರೆ. 

ಪಿಳಿ ಪಿಳಿ ಕಣ್ಣು ಬಿಡ್ತಾ ಮುದ್ದಾಗಿದೆ ಪರಿ, ಮಗು ಮುಖ ತೋರಿಸಿದ ಕೃಷ್ಣ – ಮಿಲನಾ ಜೋಡಿಗೆ ಬಹುಪರಾಕ್ ಎಂದ ನೆಟ್ಟಿಗರು

ಇವರ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಫ್ಯಾನ್ಸ್, ಸೀತಾರಾಮನ ಡಾನ್ಸ್ ಇಷ್ಟಪಟ್ಟಿದ್ದಾರೆ.  ದರ್ಶನ್ ಹಾಡು, ಸೂಪರ್ ಹಿಟ್ ಸಾಂಗ್ ಅಂತ ಅನೇಕರು ದರ್ಶನ್ ನೆನಪು ಮಾಡಿಕೊಂಡಿದ್ದಾರೆ. ಬೇಗ ಮದುವೆ ಆಗಿ ಅಂತ ವೈಷ್ಣವಿಗೆ ಅನೇಕರು ಸಲಹೆ ಕೂಡ ನೀಡಿದ್ದಾರೆ. ಈ ರೀಲ್ಸ್ ನೋಡಿದ್ರೆ ಸಿಹಿ ಅಳ್ತಾಳೆ ಎನ್ನುತ್ತಿದ್ದಾರೆ ನೆಟ್ಟಿಗರು.

ವೈಷ್ಣವಿ, ಯೂನಿಫಾರ್ಮ್ ಧರಿಸಿ ಕೆಲ ದಿನಗಳ ಹಿಂದೆ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿದ ಫ್ಯಾನ್ಸ್, 10ನೇ ಕ್ಲಾಸ್ ಹುಡುಗಿ ತರ ಕಾಣ್ತೀರಾ ಅಂತ ಕಮೆಂಟ್ ಮಾಡಿದ್ದರು. ಚೆಲುವಿನ ಚಿತ್ತಾರ 2 ಗೆ ಹೀರೋಯಿನ್, ಬೆಸ್ಟ್ ಫ್ರೆಂಡ್ ಅಮೂಲ್ಯ ಜಾಗಕ್ಕೆ ವೈಷ್ಣವಿ ಎಂದು ಫ್ಯಾನ್ಸ್ ಹೇಳಿದ್ದರು.

ಸೀತಾರಾಮ ಸೀರಿಯಲ್ ತಂಡ ಸಾಕಷ್ಟು ವಿಡಿಯೋಗಳನ್ನು ಮಾಡ್ತಿರುತ್ತದೆ.  ಬ್ಯುಸಿ ಶೆಡ್ಯೂಲ್ ನಲ್ಲೂ ಬಿಡುವು ಮಾಡ್ಕೊಂಡು ಸೀರಿಯಲ್ ಕಲಾವಿದರು ಭಿನ್ನವಾದ ರೀಲ್ಸ್ ಪೋಸ್ಟ್ ಮಾಡ್ತಿರುತ್ತಾರೆ. ಅವರ ರೀಲ್ಸ್ ನೋಡೋಕೆ ಅಭಿಮಾನಿಗಳು ಉತ್ಸುಕರಾಗಿರ್ತಾರೆ. 

ಬಿಗ್ ಬಾಸ್ ಗೆ ಬರ್ತಿನಿ ಒಂದ್ ಅವಕಾಶಕೊಡಿ, ಸುದೀಪ್ ಗೆ ಹುಚ್ಚ ವೆಂಕಟ್ ರಿಕ್ವೆಸ್ಟ್

ವೈಷ್ಣವಿ ಬಗ್ಗೆ ಹೇಳೋದಾದ್ರೆ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಮನೆಮಾತಾದ ವೈಷ್ಣವಿ, ಬಿಗ್ ಬಾಸ್ ಮೂಲಕ ಎಲ್ಲರಿಗೆ ಹತ್ತಿರವಾಗಿದ್ದರು. ಈಗ ಸೀತಾರಾಮ ಸೀರಿಯಲ್ ಮೂಲಕ ಸೀತಾ ಹಾಗೂ ರಾಮನ ಜೋಡಿ ಪ್ರಸಿದ್ಧಿ ಪಡೆದಿದೆ. ವೈಷ್ಣವಿ ಬರೀ ಧಾರಾವಾಹಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅನೇಕ ವಿಡಿಯೋ, ಫೋಟೋಗಳನ್ನು ಅವರು ಹಂಚಿಕೊಳ್ತಿರುತ್ತಾರೆ. ಸಿಹಿ ಹಾಗೂ ಸೀತಾ ಜೋಡಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಗಗನ್ ಜೊತೆ ಸೀತಾ ಮಾಡುವ ರೀಲ್ಸ್ ಗಳನ್ನು ಕೂಡ ಫ್ಯಾನ್ಸ್ ಇಷ್ಟಪಡ್ತಿದ್ದಾರೆ. 

ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಗನ್ ಚಿನ್ನಪ್ಪ ಕಿರುತೆರೆಯ ಪ್ರಸಿದ್ಧ ನಟ. ಮಂಗಳಗೌರಿ ಮದುವೆಯಲ್ಲಿ ರಾಜೀವನಾಗಿದ್ದ ಗಗನ್, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲೆಗ್ಸಾಂಡರ್ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಗಗನ್ ಚಿನ್ನಪ್ಪ ಬಿಗ್ ಬಾಸ್ ಕನ್ನಡದ ಮಿನಿ ಸೀಸನ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಸೀತಾರಾಮದಲ್ಲಿ ಗಗನ್ ಹಾಗೂ ವೈಷ್ಣವಿ ಬಾಂಡಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಗಗನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?