ಮಾ.7ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 6ಕ್ಕೆ 'ಮದುಮಗಳು' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹುಟ್ಟಿದ ಕೂಡಲೇ ಅಮ್ಮನಿಂದ ಬೇರಾದ ಹುಡುಗಿ, ಅಮ್ಮ ಸಾಕಿದ್ದ ಹುಡುಗನ ಪ್ರೇಯಸಿಯಾಗುತ್ತಾಳೆ.
ಮಾ.7ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 6ಕ್ಕೆ 'ಮದುಮಗಳು' (Madumagalu) ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹುಟ್ಟಿದ ಕೂಡಲೇ ಅಮ್ಮನಿಂದ ಬೇರಾದ ಹುಡುಗಿ, ಅಮ್ಮ ಸಾಕಿದ್ದ ಹುಡುಗನ ಪ್ರೇಯಸಿಯಾಗುತ್ತಾಳೆ. ಇವಳು ಮಗಳೆಂಬ ಅರಿವಿಲ್ಲದೇ ಇವಳನ್ನು ದ್ವೇಷಿಸುವ ಅಮ್ಮ ಹಾಗೂ ಸೊಸೆಯಾಗಿ ಮನೆ ಸೇರುವ ಮಗಳ ಕತೆ ಈ ಸೀರಿಯಲ್‌ನದು. ಕಿರುತೆರೆಯ ಜನಪ್ರಿಯ ನಟಿ ಸಿರಿಜಾ, ರಕ್ಷಿತಾ, ಭವೀಶ್ ಮುಖ್ಯಪಾತ್ರಗಳಲ್ಲಿದ್ದಾರೆ. ಹಿಂದೆ 'ಕಾವ್ಯಾಂಜಲಿ' (Kavyanjali) ಎಂಬ ಜನಪ್ರಿಯ ಸೀರಿಯಲ್ ಮಾಡಿದ್ದ ತಂಡವೇ ಈ ಧಾರವಾಹಿಯ ಉಸ್ತುವಾರಿ ವಹಿಸಿಕೊಂಡಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿಯು ತನ್ನ ಮನೆಗೆ ಮಗಳಾಗುವ ಬದಲು ಸೊಸೆಯಾಗಿ ಮನೆ ಸೇರುವಂತಹ ಕಥೆಯೇ ಈ ಮದುಮಗಳು. ದೊಡ್ಡ ಮನೆತನದ, ಜವಾಬ್ದಾರಿಯುತ, ದಿಟ್ಟ, ಪರಿಪೂರ್ಣ ಸೊಸೆ ಈ ಕಥೆಯ ಮದುವಂತಿ. ಇವಳು ಹೆಣ್ಣು ಮಗುವಿಗೆ ಜನ್ಮ ಕೊಟ್ಟು, ಆ ಮಗುವಿನ ಬದಲಿಗೆ, ಕಾರಣಾಂತರಗಳಿಂದ ಬೇರೆಯವರ ಗಂಡು ಮಗುವನ್ನು ತನ್ನ ಮಡಿಲಿನಲ್ಲಿ ಬೆಳೆಸುತ್ತಾಳೆ. ತಾನು ಜನ್ಮ ಕೊಟ್ಟ ಹೆಣ್ಣು ಮಗು 24 ವರ್ಷಗಳ ನಂತರ ಎದುರಾದಾಗ, ತನ್ನ ಎಲ್ಲಾ ಗುಣಗಳನ್ನು ಅವಳಲ್ಲಿ ಕಂಡು ಆಶ್ಚರ್ಯಚಕಿತಳಾಗುವುದಂತು ಸುಳ್ಳಲ್ಲ. ತಪ್ಪನ್ನು ಎತ್ತಿ ತೋರಿಸುವ ನಮ್ಮ ಕಥಾನಾಯಕಿ ಗ್ರೀಷ್ಮಾ, ತನ್ನ ತಾಯಿ ಎಂಬ ಅರಿವಿಲ್ಲದೆ ಮದುವಂತಿಯನ್ನು ತರಾಟೆ ತೆಗೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ.
undefined
ಅಂತ್ಯವಾಗುತ್ತಿದೆ ಕಾವ್ಯಾಂಜಲಿ ಧಾರಾವಾಹಿ; ನಟ Darshan ತಿಳಿಸಿದ ಕಾರಣವಿದು!
ಮದುವಂತಿಯ ಮಡಿಲ್ಲಿ ಬೆಳೆದ ಕಥೆಯ ನಾಯಕ ಶಿಶಿರ್, ತನಗೆ ಆಡಂಬರದ ಜೀವನ ಇಷ್ಟವಿಲ್ಲದಿದ್ದರೂ ತನ್ನಮ್ಮನ ಘನತೆಗೆ ತಕ್ಕಂತೆ ಬೆಳೆದಿರುತ್ತಾನೆ. ಹಾಗೆಯೇ ಮದುವಂತಿ ಕೂಡ ತನ್ನ ಮಗನ ಆಸೆಗೆ ಭಂಗ ಬರದಂತೆ ಪೋಷಿಸಿರುತ್ತಾಳೆ. ಈ ಕಥೆಯಲ್ಲಿ ಅಮ್ಮ ಮಗನ ಬಾಂಧವ್ಯ ಅನಾವರಣಗೊಳ್ಳಲಿದೆ. ಕ್ರಮೇಣ ನಮ್ಮ ನಾಯಕಿ ಹಾಗು ನಾಯಕ ಪ್ರೇಮ ಬಂಧಕ್ಕೆ ಸಿಲುಕುತ್ತಾರೆ. ನಾಯಕಿಯನ್ನು ದ್ವೇಷಿಸೊ ನಮ್ಮ ಮದುವಂತಿಯನ್ನು ಎದುರಿಸಿ ತನ್ನ ಮನೆಗೆ ಹೇಗೆ ಸೊಸೆಯಾಗಿ ನೆಲೆವೂರುತ್ತಾಳೆ ಎಂಬುದು ಈ ಧಾರಾವಾಹಿಯ ಕಥಾಹಂದರ.
ಈ ಧಾರಾವಾಹಿ ಬಳಗದಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ (Sirija) ಅವರು ಜವಾಬ್ದಾರಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ ಸುಂದರ್ ವೀಣಾ (Sundar Veena) ಅವರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆ ಧಾರಾವಾಹಿಯ ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ (Rakshita) ಅವರು ಕಾಣಿಸಿಕೊಳ್ಳಲಿದ್ದಾರೆ. ಹೊಸ ಪರಿಚಯ ಭವೀಶ್ (Bhavish) ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಈ ಧಾರಾವಾಹಿಯಲ್ಲಿ ಚಿರಪರಿಚಿತ ತಾರಾ ಬಳಗವಿದೆ.
New Kannada Serial: ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಪ್ರೇಮಕಾವ್ಯ
ನಿರ್ದೇಶಕರಾಗಿ ಆದರ್ಶ್ ಹೆಗ್ಡೆ (Adarsh Hegde), ಛಾಯಾಗ್ರಾಹಕರಾಗಿ ರುದ್ರಮುನಿ ಬೆಳೆಗೆರೆ, ಸಹ-ಛಾಯಗ್ರಾಹಕ ಬಾಲಾಜಿ ರಾವ್ ಈ ತಂಡವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಹಿಟ್ ಸೀರಿಯಲ್ ಕಾವ್ಯಾಂಜಲಿಯ ಜವಾಬ್ದಾರಿಯನ್ನು ನಿರ್ವಹಿಸಿದ ಶಾಕ್ ಸ್ಟುಡಿಯೋಸ್ ಮುಖ್ಯಸ್ಥ ಶಂಕರ್ ವೆಂಕಟರಮಣ್ (Shankar Venkataraman) ಈ ಧಾರಾವಾಹಿ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ. ಮದುಮಗಳು ನನ್ನ ಜೀವನದಲ್ಲಿ ಬಹಳ ಮುಖ್ಯವಾದ ಧಾರಾವಾಹಿಯಾಗಿದ್ದು, ನಿರ್ಮಾಪಕನಾಗಿ ಇದು ನನ್ನ 15 ನೇ ಕಾರ್ಯಕ್ರಮವಾಗಿದೆ. ರೇಖಾ ರಾವ್ ಮೇಡಂ, ಸಿರಿಜಾ ಮೇಡಂ ಮತ್ತು ಶ್ರೀ ಸುಂದರ್ ವೀಣಾ ಅವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ.
ನಾವು ಎರಡು ಪ್ರತಿಭಾವಂತ ಹೊಸ ಮುಖಗಳನ್ನು ಮುಖ್ಯಭೂಮಿಕೆಯಲ್ಲಿ ಪರಿಚಯಿಸುತ್ತಿದ್ದೇವೆ. 'ಕಾವ್ಯಾಂಜಲಿ'ಯಲ್ಲಿ ನಮ್ಮ ಜೊತೆ ಕೆಲಸ ಮಾಡಿದ ತಂತ್ರಜ್ಞರೇ ಈ ಧಾರಾವಾಹಿಗೂ ಇದ್ದಾರೆ. ಈ ಧಾರಾವಾಹಿ ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿರುವುದಂತೂ ಖಚಿತ. ಈ ನಮ್ಮ ಮದುಮಗಳು ಧಾರಾವಾಹಿ ಮೂಲಕ ಉದಯ ವಾಹಿನಿಯೊಂದಿಗೆ (Udaya TV) ಮತ್ತೊಂದು ಯಶಸ್ವಿ ಪ್ರಯಾಣಕ್ಕಾಗಿ ಎದುರುನೋಡುತ್ತಿದ್ದೇನೆ ಎಂದು ನಿರ್ಮಾಪಕರಾದ ಶಂಕರ್ ವೆಂಕಟರಮಣ್ ಹೇಳಿದ್ದಾರೆ.