Ratha Saptami Kannada Serial: ಶ್ರೀಮಂತ್‌ ಎನ್ನೋ ಜಿಪುಣನ ಜೊತೆ ಉದಾರ ಮನೋಭಾವದ ಸಪ್ತಮಿ ಕಲ್ಯಾಣ ಆಗೋಯ್ತು

Published : Dec 04, 2025, 12:33 PM IST
ratha saptami serial kannada

ಸಾರಾಂಶ

Ratha Saptami Kannada Serial: ಉದಯ ಟಿವಿಯಲ್ಲಿ ಹೊಸದಾಗಿ ಸೀರಿಯಲ್‌ ಪ್ರಸಾರ ಆಗಲಿದೆ. ಈಗಾಗಲೇ ಕನ್ನಡದಲ್ಲಿ ವಿಧ ವಿಧದ ಕಥೆಗಳು ಪ್ರಸಾರ ಆಗುತ್ತಿದ್ದು, ಈ ಸಾಲಿಗೆ ರಥಸಪ್ತಮಿ ಕೂಡ ಸೇರಿದೆ. ಇದರ ವಿಶೇಷತೆ ಏನು?

ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಪ್ರಸಾರ ಆಗಲಿದೆ. ಈಗ ಉದಯ ವಾಹಿನಿಯಲ್ಲಿ ರಥಸಪ್ತಮಿ ಧಾರಾವಾಹಿ ಪ್ರಸಾರ ಆಗಲಿದೆ. ಡಿಸೆಂಬರ್ 8, ಸೋಮವಾರದಿಂದ ಶನಿವಾರದವರೆಗೆ ಸಂಜೆ 6ಕ್ಕೆ ಈ ಸೀರಿಯಲ್‌ ಪ್ರಸಾರ ಆಗಲಿದೆ.

ಯಾವಾಗ ಪ್ರಸಾರ ಆಗಲಿದೆ?

ಈಗ ಹೊಸ ಧಾರಾವಾಹಿ ʼರಥಸಪ್ತಮಿʼ ಪ್ರಸಾರ ಆಗಲು ರೆಡಿಯಾಗಿದೆ. ಡಿಸೆಂಬರ್ 8 ರಿಂದ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6 ಗಂಟೆಗೆ ʼರಥಸಪ್ತಮಿʼ ಪ್ರಸಾರ ಆಗಲಿದೆಯಂತೆ.

ರಂಗಭೂಮಿ ಹಿನ್ನಲೆಯುಳ್ಳ ನಟ ಹಾಗೂ ನಿರ್ದೇಶಕ ಆಗಿರುವ ಪೂರ್ಣಚಂದ್ರ ತೇಜಸ್ವಿ ಅವರು ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೀವನ್ ಅವರು ಹೀರೋ ಆಗಿದ್ದು, ಮೌಲ್ಯಾ ಗೌಡ ಅವರು ಹೀರೋಯಿನ್‌ ಆಗಿದ್ದಾರೆ. ನಾಗೇಶ್ ಮಯ್ಯ, ಸುನಿಲ್, ವಂದನ, ಪುಷ್ಪಾ ಬೆಳವಾಡಿ, ಭೂಮಿಕಾ, ಪ್ರಮೀಳಾ, ಮಧುಸೂದನ್, ಸುಮೋಕ್ಷ, ನೀನಾಸಂ ಪ್ರದೀಪ್, ಅಥರ್ವ, ಚಂದನ ಅವರು ನಟಿಸಿದ್ದಾರೆ.

ಛಾಯಾಗ್ರಹಣ ಕೃಷ್ಣ, ವಿಶಾಲ್ ವಿನಾಯಕ್ ಸಂಕಲನ ಇದೆ. ಅಂದಹಾಗೆ ಈ ಧಾರಾವಾಹಿಯ ಆರಂಭದ ಎಪಿಸೋಡ್‌ಗಳಲ್ಲಿ ಹಿರಿಯ ನಟ ಉಮೇಶ್ ನಟಿಸಿದ್ದಾರೆ. ಇದು ಅವರ ಕೊನೆಯ ಧಾರಾವಾಹಿ ಆಗಿರಲಿದೆ.

ಈ ಧಾರಾವಾಹಿ ಕಥೆ ಏನು?

ಸಪ್ತಮಿ ನಿಸ್ವಾರ್ಥ, ಉದಾರ ಮನೋಭಾವದವಳು ಅಷ್ಟೇ ಅಲ್ಲದೆ ಪದವಿ ಮುಗಿಸಿದ್ದು, ಅಪ್ಪನ ಮುದ್ದಿನ ಮಗಳು. ಇವಳ ದಾನಗುಣ ಮಲತಾಯಿಗೆ ಇಷ್ಟವಾಗುವುದಿಲ್ಲ. ಇವಳಿಗೆ ಶ್ರೀಮಂತ್ ಅನ್ನೋ ಒಬ್ಬ ಜಿಪುಣನ ಜೊತೆ ಮದುವೆ ಫಿಕ್ಸ್‌ ಆಗುವುದು. ಶ್ರೀಮಂತ್‌ಗೆ ಅವನ ಚಿಕ್ಕಪ್ಪನಿಂದ ಮೋಸವಾಗಿದ್ದರಿಂದ ಯಾರನ್ನೂ ನಂಬದೆ ಪೈಸೆ ಪೈಸೆಗೂ ಲೆಕ್ಕ ಇಡುತ್ತಿದ್ದನು. ಮನೆಯಲ್ಲಿಯೇ ಈತನನ್ನು ಕಂಜೂಸ್ ಕುಮಾರ ಅಂತ ಕರೆಯುತ್ತಿರುತ್ತಾರೆ.

ಇವನ ಸರ್ಕಾರಿ ಸಂಬಳದಿಂದ ಕುಟುಂಬದ ಐದು ಜನರ ಬದುಕು ನಡೆಯುವುದು. ಎರಡೂ ಕುಟುಂಬಗಳು ಹೇಳುವ ಸುಳ್ಳುಗಳಿಂದ ಸಪ್ತಮಿ ಮತ್ತು ಶ್ರೀಮಂತ್ ಪ್ರೀತಿ ಮಾಡಿ, ಮದುವೆ ಕೂಡ ಆಗ್ತಾರೆ. ಕುಟುಂಬವೇ ಸರ್ವಸ್ವ ಅಂತ ನಂಬಿರೋ ಸಪ್ತಮಿಗೆ ಆ ಕುಟುಂಬವನ್ನು ಭೂಮಿಗೆ ಭಾರ ಎನ್ನುವ ಥರ ನೋಡುವ ಶ್ರೀಮಂತನ ಜೊತೆ ಬದುಕುವ ಅನಿವಾರ್ಯತೆ ಬರುವುದು. ಈ ವ್ಯತ್ಯಾಸ-ವೈಶಿಷ್ಟ್ಯ-ಸಂಘರ್ಷಗಳ ನಡುವೆ ಇಬ್ಬರ ಬದುಕು ಹೇಗೆ ಸಾಗುತ್ತದೆ? ಸ್ಟೋರಿ ಬ್ರೀವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹ್ಯಾರಿಸ್ ನಿರ್ಮಾಣ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!