ಕಿರುತೆರೆಯಲ್ಲಿ 'ಸತ್ಯ' ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ಗೌತಮಿ ಜಾಧವ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅವರು ತಮ್ಮಸ್ವಂತ ಬ್ರಾಂಡ್‌ನಲ್ಲಿ ಹೇರ್ ಆಯಿಲ್ ಒಂದನ್ನು ಹೊರತಂದಿದ್ದು, ಅದಕ್ಕೆ 'ವನ ತೈಲಂ' ಎಂದು ಹೆಸರಿಟ್ದಟಿದ್ದಾರೆ. ಈ ಪ್ರಾಡಕ್ಟ್ ಪರಿಚಯವನ್ನು ಕೂಡ ಗೌತಮಿ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕವೇ ಮಾಡಿದ್ದಾರೆ.
ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಹಲವು ನಟಿಯರಲ್ಲಿ ಒಬ್ಬರಾದ ಗೌತಮಿ ಜಾಧವ್, ಇದೀಗ ಹೊಸದೊಂದು ಹೆಜ್ಜೆ ಹಾಕಿದ್ದಾರೆ. ಟಿವಿಯಲ್ಲಿ 'ಸತ್ಯ' ಸೀರಿಯಲ್ ಮೂಲಕ ವೀಕ್ಷಕರಿಗೆ ಮೋಡಿ ಮಾಡುತ್ತಿರುವ ಗೌತಮಿ, ತಮ್ಮದಲ್ಲದ ಕ್ಷೇತ್ರಕ್ಕೆ ಕಾಲಿಟ್ಟು ಸತ್ವಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಬಹುದು. ಹೌದು, ಗೌತಮಿ ಆರ್ಗ್ಯಾನಿಕ್ ಇನ್‌ಗ್ರೀಡಿಯಂಟ್ಸ್ ಬಳಕೆಗೆ ಒತ್ತುಕೊಟ್ಟಿದ್ದು, ತಮ್ಮದೇ ಹೊಸ 'ಹೇರ್ ಆಯಿಲ್' ಒಂದನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದ್ದಾರೆ.
ನ್ಯಾಚುರಲ್ ಹೇರ್ ಆಯಿಲ್ ಸ್ವಂತ ಬ್ರಾಂಡ್ ಮಾಡಿಕೊಂಡಿರುವ ಗೌತಮಿ, ಅದಕ್ಕೆ 'ವನ ತೈಲಂ' ಎಂದು ಹೆಸರು ಕೊಟ್ಟಿದ್ದಾರೆ. ಈ ವನ ತೈಲಂ ಹೇರ್ ಆಯಿಲ್ ನಿಸರ್ಗಸಹಜವಾದ ಹತ್ತುಹಲವು ಪದಾರ್ಥಗಳನ್ನು ಒಳಗೊಂಡಿದ್ದು, 'ಇಕೋ ಫ್ರೆಂಡ್ಲಿ' ಎಂದಿದ್ದಾರೆ ಗೌತಮಿ. ಇತ್ತೀಚೆಗೆ ತಮಗೆ ಪರಿಸರದ ಬಗ್ಗೆ ವಿಪರೀತ ಕಾಳಜಿ ಉಂಟಾಗಿದ್ದು ತಮ್ಮ ಯೋಚನೆಗಳೆಲ್ಲ ಅದೇ ದಿಕ್ಕಿನಲ್ಲಿ ಹರಿಯುತ್ತಿದ್ದು, 'ಈ ಹೇರ್ ಆಯಿಲ್ ಅದರದೇ ಒಂದು ಭಾಗವಾಗಿ ಹೊರಬಂದಿದೆ' ಎಂದಿದ್ದಾರೆ.
ಕಂದನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಬಬ್ಲಿ ಗರ್ಲ್ ತೇಜಸ್ವಿನಿ: ಫೋಟೋ ಶೇರ್ ಮಾಡಿ ಮಾಹಿತಿ
ಸತ್ಯ ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ಗೌತಮಿ ಜಾಧವ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅವರು ತಮ್ಮ ಹೊಸ ಹೇರ್ ಆಯಿಲ್ ಬ್ರಾಂಡ್ 'ವನ ತೈಲಂ'ದ ಪರಿಚಯವನ್ನು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕವೇ ಮಾಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಗೌತಮಿ ತಮ್ಮ ಕೂದಲೆಣ್ಣೆ ಬಗ್ಗೆ 'ಇದು ಯಾವುದೇ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಒಳಗೊಂಡಿಲ್ಲ. ಸೊಂಪಾದ, ದಟ್ಟವಾದ ಮತ್ತು ಕಪ್ಪಾದ ಕೂದಲನ್ನು ಪಡೆಯಲು ನಾನು ಮಾಡಿರುವ ಈ ಹೇರ್ ಆಯಿಲ್ ಬಳಸಿ' ಎಂದು ಕರೆ ಕೊಟ್ಟಿದ್ದಾರೆ.
Bigg Boss Season 10: ಕನ್ನಡತಿಯ ಹರ್ಷ-ಭುವಿ ದೊಡ್ಮನೆಯಲ್ಲಿ ಇರ್ತಾರಾ?
ಒಟ್ಟಿನಲ್ಲಿ, ಕಿರುತೆರೆ ಮೂಲಕ ಸುದ್ದಿಯಲ್ಲಿದ್ದ ನಟಿ ಗೌತಮಿ ಇದೀಗ ಸ್ವಂತ ಹೇರ್ ಆಯಿಲ್ ತಯಾರಿಸಿ ಮಾರುಕಟ್ಟೆ ಪ್ರವೇಶಿಸುವ ಮೂಲಕ ಇನ್ನೊಂದು ದಾರಿಯಲ್ಲೂ ಸದ್ದು ಮಾಡತೊಡಗಿದ್ದಾರೆ. ಭವಿಷ್ಯದಲ್ಲಿ ಗೌತಮಿ ಬ್ರಾಂಡ್ ಹೇರ್ ಆಯಿಲ್ ಅದೆಷ್ಟು ಸಂಚಲನ ಸೃಷ್ಟಿ ಮಾಡಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ!