ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದ ಖ್ಯಾತ ಕಿರುತೆರೆ ನಟಿ ಸಮೀರ್ ಶರ್ಮಾ(44). ತನಿಖೆ ಆರಂಭಿಸಿದ ಪೊಲೀಸರು ಕೊಟ್ಟ ಸುಳಿವು ಏನು?
'ಯೆ ರಿಶ್ತೆ ಹೈ ಪ್ಯಾರ್ ಕೆ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಮೀರ್ ಶರ್ಮಾ ಆಗಸ್ಟ್ 6ರಂದು ತನ್ನ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಟಿ ಮಯೂರಿ ಪತಿ ಆತ್ಮಹತ್ಯೆ: ಕಾರಣ ನಿಗೂಢ
44ವರ್ಷದ ಸಮೀರ್ ತಮ್ಮ ಅಡುಗೆ ಮನೆಯ ಸೀಲಿಂಗ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ದಿನ ಸಮೀರ್ ಮನೆಯಿಂದ ಹೊರಬರದ ಕಾರಣ ಅಪಾರ್ಟ್ಮೆಂಟ್ ವಾಚ್‌ಮ್ಯಾನ್ ರಾತ್ರಿ ವೇಳೆ ವಿಚಾರಿಸಲು ಹೋದಾಗ ಸಮೀರ್ ಬಾಗಿಲು ತೆಗೆಯದ ಕಾರಣ ಗಾಬರಿಗೊಂಡ ವಾಚ್‌ಮ್ಯಾನ್ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಮಾಹಿತಿ ತಿಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣವೇ ಸಮೀರ್ ಮೃತ ದೇಹವನ್ನು ಇಳಿಸಿಕೊಂಡಿದ್ದಾರೆ.
ಸಮೀರ್ ದೇಹವಿದ್ದ ಸ್ಥಿತಿಯನ್ನು ಕಂಡು ಪೊಲೀಸರು ಸಮೀರ್ ಆತ್ಮಹತ್ಯೆ ಮಾಡಿಕೊಂಡು ಎರಡು ದಿನಗಳು ಕಳೆದಿದೆ ಎಂದಿದ್ದಾರೆ. 'ಸಮೀರ್ ದೇಹವನ್ನು ಪ್ರಾಥಮಿಕ ತನಿಖೆಗೆ ನೀಡಲಾಗಿದೆ. ಈಗಾಗಲೇ ಅವರ ಕುಟುಂಬಸ್ಥಿರಗೂ ಮಾಹಿತಿ ನೀಡಲಾಗಿದೆ. ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ' ಎಂದು ಮಲಾಡ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಾರ್ಜ್ ಫರ್ನಾಂಡಿಸ್ ತಿಳಿಸಿದ್ದಾರೆ.
ಬಿಹಾರ ಪೊಲೀಸ್ ಮನವಿಗೆ ಸುಪ್ರೀಂ ಅಸ್ತು: ಸುಶಾಂತ್ ಸಿಂಗ್ ಸಾವಿನ ಪ್ರಕರಣ CBIಗೆ
ಸಮೀರ್ ಕಿರುತೆರೆ ವಾಹಿನಿಯ ಪ್ರಸಿದ್ಧ ನಟ. ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಈಸಿ ಪ್ಯಾರ್ ಕೋ ಕ್ಯಾ ಕಾಮ್, ಲೆಫ್ಟ್ ರೈಟ್ ಲೆಫ್ಟ್ ಹಾಗೂ ಅನೇಕ ಹಿಟ್ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 2020ರ ಫೆಬ್ರವರಿಯಲ್ಲಿ ಮಲಾಡ್ ನಗರದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ ಸಮೀರ್ ಒಬ್ಬಂಟಿಯಾಗಿ ವಾಸವಿದ್ದರು ಎನ್ನಲಾಗಿದೆ. ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರದ ಕಾರಣ ಆತ್ಮಹತ್ಯೆಗೆ ಕಾರಣವೇನೆಂದು ತನಿಖೆಯ ನಂತರ ತಿಳಿಯಬೇಕಿದೆ.