ತುಳಸಿ ಗರ್ಭಿಣಿ: ಆಗಿದ್ದೇ ಬೇರೆ- ತಿಳಿದುಕೊಂಡದ್ದೇ ಬೇರೆ; ಸೀರಿಯಲ್​ಗೆ ಇದೇನಿದು ಟ್ವಿಸ್ಟ್​?

By Suchethana D  |  First Published Sep 17, 2024, 11:38 AM IST

ತುಳಸಿ ಗರ್ಭಿಣಿಯಾಗಿದ್ದಾಳೆ. ಈ ವಿಷಯವನ್ನು ಗಂಡ ಮಾಧವ್​ಗೆ ತಿಳಿಸೋಣ ಎಂದರೆ ಸಮರ್ಥ್​ ಅಡ್ಡಿಯಾಗುತ್ತಿದ್ದಾನೆ. ಅಮ್ಮನ ಬಗ್ಗೆ ಸಮರ್ಥ್​ ತಿಳಿದುಕೊಂಡಿರುವುದೇ ಬೇರೆ. ಫುಲ್​ ಕನ್​ಫ್ಯೂಸ್​ನಲ್ಲಿ ಇದೆ ಈ ಸಂಸಾರ. ಮುಂದೇನು?
 


ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಯಾವ ಪ್ರೇಕ್ಷಕರೂ, ಯಾವ ನೆಟ್ಟಿಗರೂ ಊಹಿಸಲಾಗದ ಟ್ವಿಸ್ಟ್​ ಸಿಕ್ಕಿದೆ. ಅವಿ ಮತ್ತು ಅಭಿ ಇಬ್ಬರೂ ಅಮ್ಮ ಎಂದು ಸ್ವೀಕರಿಸಿದ ತುಳಸಿ, ಎಲ್ಲರ ಬಾಯಲ್ಲೂ ತುಳಸಿ ಅಮ್ಮ ಎಂದೇ ಕರೆಸಿಕೊಳ್ಳುತ್ತಿರುವ ಈ ಅಮ್ಮಾ, ಇನ್ನೇನು ಅಜ್ಜಿಯಾಗುವ ಕನಸು ಕಾಣುತ್ತಿರುವ ತುಳಸಿ ಅಮ್ಮಾ... ಮತ್ತೊಮ್ಮೆ ಅಮ್ಮಾ  ಆಗ್ತಿದ್ದಾಳೆ! ಹೌದು. ಯಾರ ಊಹೆಗೂ ನಿಲುಕದ ಟ್ವಿಸ್ಟ್​ ಅನ್ನು ಈ ಸೀರಿಯಲ್​ಗೆ ನೀಡಲಾಗಿದೆ. ಒಂದೆಡೆ ಅವಿ ಮತ್ತು ಅಭಿ ಮತ್ತೊಂದೆಡೆ ಸಮರ್ಥ್​, ಹೀಗೆ ಮೂವರು ಮಕ್ಕಳ ನಡುವೆ ಪ್ರೀತಿಯ ವಿಷಯದಲ್ಲಿ ಜಟಾಪಟಿ ಏರ್ಪಡಿಸಿದ್ದ ತುಳಸಿ ಅಮ್ಮಾ, ಈಗ ಮತ್ತೊಂದು ಮಗುವಿನ ತಾಯಿಯಾಗುತ್ತಿದ್ದಾಳೆ. 

ಆದರೆ ಇದರ ನಡುವೆಯೇ ಇದೀಗ ಇನ್ನೊಂದು ಟ್ವಿಸ್ಟ್​ ಸೀರಿಯಲ್​ಗೆ ಸಿಕ್ಕಿದೆ. ಅದೇನೆಂದರೆ, ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಸಮರ್ಥ್​ ಒಪ್ಪಿಕೊಂಡಿದ್ದಾನೆ ಎಂದು ತುಳಸಿ ತಿಳಿದುಕೊಂಡಿದ್ದಾಳೆ. ಏಕೆಂದರೆ, ಸಮರ್ಥ್​ ತನ್ನ ಅಮ್ಮನಿಗೆ ಸಮಾಧಾನಪಡಿಸಿ ಆಗಿದ್ದು ಆಯ್ತು, ನಿಮ್ಮ ಜೊತೆ ನಾನಿದ್ದೇನೆ. ಭಯಪಡಬೇಡಿ ಎನ್ನುತ್ತಲೇ ಆಕೆಯ ಕೈಹಿಡಿದು ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಂದ ಮಾತ್ರಕ್ಕೆ ತಾಯಿ ಗರ್ಭಿಣಿ ಎನ್ನುವ ವಿಷಯವನ್ನು ಆತ ಒಪ್ಪಿಕೊಂಡಿದ್ದಾನೆ ಅಂತಲ್ಲ. ಅಷ್ಟಕ್ಕೂ ತಮ್ಮಮಕ್ಕಳ ನಿರೀಕ್ಷೆಯಲ್ಲಿರುವ ಮಕ್ಕಳು, ಅಮ್ಮ ಗರ್ಭಿಣಿ ಎನ್ನುವ ವಿಷಯವನ್ನು ಬಹುತೇಕ ಯಾವ ಮಕ್ಕಳೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸತ್ಯವೇ. ಆದರೆ ಇಲ್ಲಿ ಆದದ್ದೇ ಬೇರೆ. ಅದೇನೆಂದರೆ, ಆಸ್ಪತ್ರೆಯ ನರ್ಸ್​​ಗಳು ಮಾಡಿರುವ ಎಡವಟ್ಟಿನಿಂದ ತುಳಸಿಗೆ ಬ್ರೇನ್​ ಟ್ಯೂಮರ್​ ಎಂದು ಸಮರ್ಥ್​ ತಿಳಿದುಕೊಂಡಿದ್ದಾನೆ!

Tap to resize

Latest Videos

ತುಳಸಿ ಗರ್ಭಿಣಿ: ಕೆಟ್ಟ ಕಮೆಂಟಿಗೆ ಹೆದರಿ ಕಮೆಂಟ್ ಆಫ್​ ಮಾಡಿದ ವಾಹಿನಿ: ಆದ್ರೂ ಬಿಡ್ತಿಲ್ಲ ನೆಟ್ಟಿಗರು!

ಈಗ ತಾನೇ ಆಸ್ಪತ್ರೆಗೆ ಅಡ್ಮಿಟ್​ ಆಗಿರುವ ಪೇಷಂಟ್​ ಬಗ್ಗೆ ನರ್ಸ್​ಗಳು ಮಾತನಾಡಿಕೊಳ್ಳುತ್ತಿದ್ದರು. ಅವರು ಉಳಿಯುವುದು ಇನ್ನು ಮೂರೇ ತಿಂಗಳು, ತುಂಬಾ ಚೆನ್ನಾಗಿ ನೋಡಿಕೊಂಡರೆ ಸ್ವಲ್ಪ ವರ್ಷ ಬದುಕುತ್ತಾರೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಸಮರ್ಥ್​ ಅದು ತುಳಸಿಯೇ ಎಂದುಕೊಂಡು ಬಿಟ್ಟಿದ್ದಾನೆ. ಆ ಬಗ್ಗೆ ನರ್ಸ್​ಗೆ ಆತ ಕೇಳಿದಾಗ, ಅವರೂ ಕನ್​ಫ್ಯೂಸ್​ ಮಾಡಿಕೊಂಡು ಅವರು ಬದುಕೋ ಛಾನ್ಸ್​ ತುಂಬಾ ಕಡಿಮೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಹೆಚ್ಚು ವರ್ಷ ಬದುಕುತ್ತಾರೆ ಎಂದರು. ಇದನ್ನು ಕೇಳಿ ಆಕಾಶವೇ ಕಳಚಿಬಿದ್ದ ಅನುಭವ ಸಮರ್ಥ್​ಗೆ. ಆದ್ದರಿಂದ ಆತ ತನ್ನ ತಾಯಿಯನ್ನು ಜೋಪಾನ ಮಾಡುವ ಜವಾಬ್ದಾರಿ ಹೊತ್ತಿದ್ದಾನೆ. ಅಮ್ಮ-ಮಗನ ನಡುವೆ ಮಾತುಕತೆ ನಡೆದಿದೆ. ತನ್ನ ತಾಯಿಗೆ ಬ್ರೇನ್​ ಟ್ಯೂಮರ್ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮರ್ಥ್​ ಮಾತನಾಡಿದ್ದರೆ, ಅವನಿಗೆ ತಾನು ಗರ್ಭಿಣಿ ಎನ್ನುವ ವಿಷಯ ತಿಳಿದಿದ್ದರೂ ಆತ ಅದನ್ನು ಒಪ್ಪಿಕೊಂಡಿದ್ದಾನೆ ಎಂದು ತುಳಸಿ ಎಂದುಕೊಂಡಿದ್ದಾಳೆ.

ಒಟ್ಟಿನಲ್ಲಿ, ಈಗ ಸೀರಿಯಲ್​ಗೆ ಸಕತ್​ ಟ್ವಿಸ್ಟ್​ ಸಿಕ್ಕಿದೆ.ಇತ್ತ ತುಳಸಿಯನ್ನು ಹುಡುಕಿ ಮಾಧವ್​, ಅಭಿ, ಅವಿ ಹೋಗಿದ್ದಾರೆ. ತುಳಸಿ ಇರುವ ಆಸ್ಪತ್ರೆ ತಿಳಿಯುವಷ್ಟರಲ್ಲಿ ಅವಳನ್ನು ಸಮರ್ಥ್​  ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮಾಧವ್​ಗೆ ತುಳಸಿ ವಿಷಯ ತಿಳಿಸಬೇಕು ಎನ್ನುವಷ್ಟರಲ್ಲಿಯೇ ಸಮರ್ಥ್​ ಮಧ್ಯೆ ಪ್ರವೇಶಿಸಿದ್ದಾನೆ. ತುಳಸಿಗೆ ಈ ವಿಷಯವನ್ನು ಮಾಧವ್​ಗೆ ಹೇಳಲು ಆತ ಬಿಡಲಿಲ್ಲ. ಒಟ್ಟಿನಲ್ಲಿ ಅಪ್ಪ ಆಗ್ತಿರೋ ಮಾಧವ್​ಗೆ ಅಸಲಿ ವಿಷಯವೇ ಗೊತ್ತಿಲ್ಲ! ಒಟ್ಟಿನಲ್ಲಿ, ತುಳಸಿಯ ಗರ್ಭಧಾರಣೆ ನೆಟ್ಟಿಗರಲ್ಲಿ ಮಾತ್ರವಲ್ಲದೇ ಸೀರಿಯಲ್​ನಲ್ಲಿಯೂ ಸಕತ್​ ಕನ್​ಫ್ಯೂಸ್​ ತಂದಿದೆ. ಅದೇ ಇನ್ನೊಂದೆಡೆ,  ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಒಂದೇ ನಿಮಿಷದಲ್ಲಿ ಸಹಸ್ರಾರು ಮಂದಿ ನೆಗೆಟಿವ್​ ಕಮೆಂಟ್ಸ್​ ಹಾಕಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಇದೊಂದು ಸೀರಿಯಲ್​ ಅನ್ನುವುದನ್ನು ಮರೆತು ಒಂದೇ ಸಮನೆ ಬೈಯುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಿದ್ದಾರೆ. ನಿರ್ದೇಶಕರ ವಿರುದ್ಧವೇ ಗರಂ ಆಗಿದ್ದಾರೆ. ಅಜ್ಜಿಯಾಗುವ ಕಾಲದಲ್ಲಿ ಅಮ್ಮ ಆಗುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೊಂದು ಅಸಹ್ಯ ಎಂದೂ ಹೇಳಿದ್ದಾರೆ ಹಲವರು.  

ಲವ್​ ಮ್ಯಾರೇಜ್​ ಇಷ್ಟ ಎಂದ ಭಾಗ್ಯಲಕ್ಷ್ಮಿ ಪೂಜಾಗೆ ಕನಸಿನ ಹುಡುಗ ಹೀಗಿರ್ಬೇಕಂತೆ ನೋಡಿ...

 

click me!