
ಖ್ಯಾ ತ ನೃತ್ಯಗಾರ್ತಿ ಪ್ರೊತಿಮಾ ಬೇಡಿ ಅವರ ಆತ್ಮಕತೆ ವೆಬ್ ಸರಣಿಯಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಹಿಂದಿಯಲ್ಲಿ ಈ ವೆಬ್ ಸರಣಿ ಪ್ರಸಾರ ಆಗಲಿದ್ದು, ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಪ್ರೊತಿಮಾ ಬೇಡಿ ಜೀವನವನ್ನು ತೆರೆ ಮೇಲೆ ತರುತ್ತಿದ್ದಾರೆ.
ಈಗಷ್ಟೆ ಇದನ್ನು ಅಧಿಕೃತವಾಗಿ ಘೋಷಣೆ ಮಾಡಿರುವ ಏಕ್ತಾಕಪೂರ್, ತಮ್ಮ ಬಾಲಾಜಿ ಪ್ರೊಡಕ್ಷನ್ ಹೌಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಪ್ರೊತಿಮಾ ಬೇಡಿ ಅವರ ಪುತ್ರಿ ಪೂಜಾ ಬೇಡಿ ಅವರೂ ಈ ವಿಷಯವನ್ನು ಹೇಳಿಕೊಂಡಿದ್ದಾರೆ.
ಶಿಕ್ಷಕರಿಗೆ ಕಿಚ್ಚ ಸುದೀಪ್ ಆರ್ಥಿಕ ನೆರವು..
ಪ್ರೊತಿಮಾ ಬೇಡಿ ರಾಷ್ಟ್ರ ಕಂಡ ಅತ್ಯುತ್ತಮ ಒಡಿಸ್ಸಿ ನೃತ್ಯಗಾರರಲ್ಲಿ ಒಬ್ಬರು. ಅವರು ಜೀವನದುದ್ದಕ್ಕೂ ತನ್ನ ಮನಸು ಒಪ್ಪಿದ್ದನ್ನು ಮಾಡುತ್ತಾ ಬದುಕಿದ ದಿಟ್ಟ ಮಹಿಳೆಯಾಗಿದ್ದರು. ಅವರು ಕಬೀರ್ ಬೇಡಿ ಅವರನ್ನು ಮದುವೆಯಾಗಿದ್ದರು. ಪೂಜಾ ಬೇಡಿ ಅವರ ಮುದ್ದಿನ ಮಗಳು. ಪೂಜಾ ತನ್ನ ತಾಯಿಯ ಆತ್ಮಚರಿತ್ರೆಯನ್ನು ಶೀಘ್ರದಲ್ಲೇ ಸರಣಿಯಾಗಿ ಹೊರತರುತ್ತಿರುವುದಾಗಿ ಬಹಿರಂಗಪಡಿಸಿದ್ದರು.
ತನ್ನ ತಾಯಿಯ ಆತ್ಮಚರಿತ್ರೆಯನ್ನು ಸರಣಿ ಮತ್ತು ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಗುವುದು ಎಂದು ಪೂಜಾ ಬಹಿರಂಗಪಡಿಸಿದ್ದಾರೆ. ಸರಣಿಯ ಹಕ್ಕನ್ನು ಈಗಾಗಲೇ ಖರೀದಿಸಲಾಗಿದೆ. "ಬಾಲಾಜಿ ಟೈಮ್‌ಪಾಸ್‌ನ (ಆತ್ಮಚರಿತ್ರೆ) ಹಕ್ಕುಗಳನ್ನು ಹೊಂದಿದ್ದಾರೆ. ನಾವು ಪ್ರೊತಿಮಾ ಜೀವನದ ಬಗ್ಗೆ ಸರಣಿಯನ್ನು ತಯಾರಿಸುತ್ತಿದ್ದೇವೆ. ಶೀಘ್ರದಲ್ಲೇ, ನನ್ನ ತಾಯಿಯ ಜೀವನದ ಮೇಲೆ ಸಿನಿಮಾ ಏನಾದರೂ ಬರಲಿದೆ ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.