ಕನ್ನಡ ಸೀರಿಯಲ್​ನಲ್ಲೇ ದಾಖಲೆ ಸೃಷ್ಟಿಸಿದ ಮುಕ್ತ ಮುಕ್ತ ಮತ್ತೆ ನೋಡುವ ಅವಕಾಶ- ಇಲ್ಲಿದೆ ಡಿಟೇಲ್ಸ್​

By Suchethana D  |  First Published Aug 16, 2024, 4:53 PM IST

ಕನ್ನಡ ಸೀರಿಯಲ್​ನಲ್ಲೇ ದಾಖಲೆ ಸೃಷ್ಟಿಸಿದ ಟಿ.ಎನ್​.ಸೀತಾರಾಮ್​ ಅವರ ಮುಕ್ತ ಮುಕ್ತ ಧಾರಾವಾಹಿ ಮತ್ತೆ ನೋಡುವ ಅವಕಾಶ ಕಲ್ಪಿಸಲಾಗಿದೆ. ಇಲ್ಲಿದೆ ಡಿಟೇಲ್ಸ್​
 


ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ... ಕೇಳುತ್ತಿದ್ದಂತೆಯೇ 16 ವರ್ಷಗಳ ಹಿಂದೆ ಮನಸ್ಸು ಜಾರುತ್ತದೆ. 2008 ರಿಂದ 2013ರವರೆಗೆ  ಒಟ್ಟು 1,204 ಕಂತುಗಳಷ್ಟು ದೀರ್ಘವಾಗಿ ಮುಕ್ತ ಮುಕ್ತ ಸೀರಿಯಲ್​ ಈ-ಟಿವಿಯಲ್ಲಿ  ಪ್ರಸಾರ ಆಗಿತ್ತು. ಕನ್ನಡ ಸೀರಿಯಲ್​ ಮಟ್ಟಿಗೆ ಇದೊಂದು ದಾಖಲೆಯೇ. ಅದಕ್ಕೂ ಮುಂಚೆ ಬಂದ 'ಮುಕ್ತ' ಸೀರಿಯಲ್​ನ ಮುಂದುವರಿದ ಭಾಗದಂತೆ ಮೂಡಿಬಂದ 'ಮುಕ್ತಮುಕ್ತ' ರೂಪುಗೊಂಡಿತ್ತು. ಇದಕ್ಕೆ ಕಾರಣ, ಅದರಲ್ಲಿದ್ದ ವಾಸ್ತವಿಕ ಚಿತ್ರಣಗಳು. ನೀತಿಗೆಟ್ಟ ರಾಜಕಾರಣ, ಅಕ್ರಮ ಭೂ ಒತ್ತುವರಿ, ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ, ವಿಶೇಷ ಆರ್ಥಿಕ ವಲಯ, ರಾಜಕಾರಣಿ ಹಾಗೂ ಉದ್ಯಮಿಗಳ ಸಂಬಂಧ... ಹೀಗೆ ಹಲವು  ವಸ್ತುಗಳೇ ಈ ಕಥೆಯನ್ನು ಅಷ್ಟೂ ವರ್ಷ ಜನರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದದ್ದು.  

ಅದಕ್ಕಿಂತಲೂ ಹೆಚ್ಚಾಗಿ, ಟಿ.ಎನ್​.ಸೀತಾರಾಮ್​ ಅವರ ಕೋರ್ಟ್​ ದೃಶ್ಯಗಳು ಈ ಸೀರಿಯಲ್​ಗೆ ಮತ್ತಷ್ಟು ಕಳೆಕೊಟ್ಟಿದ್ದಂತೂ ಸುಳ್ಳಲ್ಲ. ಹಾಗೆ ನೋಡಿದರೆ ಸೀತಾರಾಮ್​ ಅವರ ಸೀರಿಯಲ್​ಗಳಲ್ಲಿ ಕೋರ್ಟ್​ ದೃಶ್ಯಗಳು ಸರ್ವೇ ಸಾಮಾನ್ಯ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಇದೊಂದು ಮಾರ್ಗವೂ ಹೌದು. ಆದರೂ ಕೊನೆಯವರೆಗೂ ಸೀರಿಯಲ್​ ಕುತೂಹಲ ಇಟ್ಟುಕೊಂಡು ಅಪಾರ ಪ್ರೇಕ್ಷಕರ ವರ್ಗವನ್ನು ಪಡೆದಿತ್ತು. 2008ರಿಂದ ಆರಂಭವಾದ ಸೀರಿಯಲ್​ 2013ರಲ್ಲಿ ಮುಕ್ತಾಯಗೊಂಡಿತ್ತು.  ಸಿ.ಎಸ್​.ಪಿ ಪಾತ್ರದಲ್ಲಿ ಖುದ್ದು ಟಿ.ಎನ್​ ಸೀತಾರಾಮ್ ಸೇರಿದಂತೆ ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಇತರ ಪಾತ್ರವರ್ಗಗಳು ಸೀರಿಯಲ್​ ಪ್ರೇಮಿಗಳಲ್ಲಿ ಇಂದಿಗೂ ಹಚ್ಚ ಹಸಿರೇ.

Tap to resize

Latest Videos

ಡಾಕ್ಟರ್​ ಹೆಸರು ಕೇಳ್ತಿದ್ದಂತೆಯೇ ಕೈಕೊಯ್ದುಕೊಂಡ ಸೀತಾ! ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಯ ಗುಟ್ಟು ರಟ್ಟು?
 
ಈ ಸೀರಿಯಲ್​ ನೋಡದ ಇಂದಿನವರಿಗೆ ಅದನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ಕಲ್ಪಿಸಿದ್ದಾರೆ ನಿರ್ದೇಶಕ ಟಿ.ಎನ್​.ಸೀತಾರಾಮ್​ ಅವರು. ಈ ಧಾರಾವಾಹಿಯನ್ನು ಮತ್ತೊಮ್ಮೆ ನೋಡುವ ಆಸೆ ವ್ಯಕ್ತಪಡಿಸಿ ಹಲವಾರು ಮಂದಿ ಅವರಲ್ಲಿ ಕೇಳಿಕೊಂಡಿದ್ದರು. ಆದ್ದರಿಂದ ಅವರ ಮನವಿಗೆ ಸೀತಾರಾಮ್​ ಅವರು ಸ್ಪಂದಿಸಿದ್ದಾರೆ. ಈ ಸೀರಿಯಲ್​ ಪ್ರಸಾರ ಆಗುತ್ತಿದ್ದ ಸಂದರ್ಭದಲ್ಲಿ ಡಿಜಿಟಲ್​ ಮೀಡಿಯಾ ಇಷ್ಟೊಂದು ಆ್ಯಕ್ಟೀವ್​ ಇರದ ಹಿನ್ನೆಲೆಯಲ್ಲಿ ಸೀರಿಯಲ್​ ರೆಕಾರ್ಡಿಂಗ್​ ಸಮಸ್ಯೆಗಳು ಸೆರಿದಂತೆ ತಾಂತ್ರಿಕ ಸಮಸ್ಯೆಗಳು ಇದ್ದವು. ಆದ್ದರಿಂದ ಇದರ ಪ್ರಸಾರಕ್ಕೆ ವಿಳಂಬ ಆಯಿತು ಎನ್ನುತ್ತಲೇ ಸೀರಿಯಲ್​ ಮರುಪ್ರಸಾರದ ಅಪ್​ಡೇಟ್​ ನೀಡಿದ್ದಾರೆ ಟಿ.ಎನ್​.ಸೀತಾರಾಮ್​ ಅವರು.

ಅಂದಹಾಗೆ ಈ ಸೀರಿಯಲ್​ ಯೂಟ್ಯೂಬ್​ನಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್​ 29ರಿಂದ ಗುರುವಾರ, ಶುಕ್ರವಾರ ಪ್ರತಿವಾರ ಎರಡು ಕಂತುಗಳಲ್ಲಿ ಸೀರಿಯಲ್​ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ತಮ್ಮ ತಂಡದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎನ್ನುತ್ತಲೇ ಇದನ್ನು ವೀಕ್ಷಿಸುವಂತೆ ಟಿ.ಎನ್​.ಸೀತಾರಾಮ್​ ಅವರು ತಿಳಿಸಿದ್ದಾರೆ.  
 

ಸತ್ಯ+ ಪಾರು= ಬ್ರಹ್ಮಗಂಟು! ಹಳಸಲು ಕಥೆಯನ್ನೇ ಎಷ್ಟಂತ ಕೊಡ್ತೀರಾ? ಸ್ಟೋರಿನೇ ಸಿಗಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

click me!