ಮೆಗಾಸ್ಟಾರ್ 'ವಿಶ್ವಂಬರ' ಲುಕ್ ನೋಡಿ ಫ್ಯಾನ್ಸ್ ಥ್ರಿಲ್; ತ್ರಿಷಾ ಓಕೆ, ಜಾಹ್ನವಿ ಕಪೂರ್‌ ಯಾಕೆ ಅಂತಿದಾರಲ್ಲ!

By Shriram Bhat  |  First Published Jan 17, 2024, 2:01 PM IST

ವಿಶ್ವಂಭರ ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.


ವಾಲ್ಟೇರ್ ವೀರಯ್ಯ ಸಿನಿಮಾ ಮೂಲಕ ಕಳೆದ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆ ಬಾಡೂಟ ಬಡಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಈ ವರ್ಷ ವಿಶ್ವಂಭರ ಟೈಟಲ್ ಟೀಸರ್ ಮೂಲಕ ಸುಗ್ಗಿ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಚಿರು ನಟಿಸುತ್ತಿರುವ 156ನೇ ಸಿನಿಮಾದ ಟೈಟಲ್ ಟೀಸರ್ ಸಂಕ್ರಾಂತಿ ವಿಶೇಷವಾಗಿ ನಿನ್ನೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್, ಜಾಹ್ನವಿ ಕಪೂರ್, ಚಿರಂಜೀವಿ, ತ್ರಿಷಾ ಕೃಷ್ಣನ್, ರಾಣಾ ದಗ್ಗುಬಾಟಿ ಹಾಗೂ ವಿನಾಯಕನ್ ನಟಿಸಿದ್ದಾರೆ. ಮಲ್ಲಿಡಿ ವಿಸಿಷ್ಠ ನಿರ್ದೇಶನ ಈ ಚಿತ್ರಕ್ಕಿದೆ.

ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾದ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವಂಭರ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು 'ಬಿಂಬಿಸಾರ' ಖ್ಯಾತಿಯ ವಸಿಷ್ಠ (Mallidi Vasishta)ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

Tap to resize

Latest Videos

ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರದಲ್ಲಿ 'ಭಿಮಾವರಂ ದೊರೆಬಾಬು' ಪಾತ್ರದಲ್ಲಿ ನಟಿಸುತ್ತಿದ್ದು, ಜಾಹ್ನವಿ ಕಪೂರ್ ಚಿರಂಜೀವಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ತ್ರಿಷಾ ಕೃಷ್ಣನ್ ಸಿಬಿಐ ಆಫೀಸರ್ ರೋಲ್‌ನಲ್ಲಿ ಮಿಂಚಿದ್ದು, ರಾಣಾ ದಗ್ಗುಬಾಟಿ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಅಂದಹಾಗೆ, ನಟಿ ಶ್ರೀದೇವಿ ಚಿರಂಜೀವಿ ಜತೆ ಅದೆಷ್ಟೋ ಸಿನಿಮಾಗಳಲ್ಲಿ ಡ್ಯುಯೆಟ್ ಹಾಡಿದ್ದರೆ, ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಮೆಗಾಸ್ಟಾರ್ ಚಿರಂಜೀವಿ ಜತೆ 'ಮಗಳ' ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಡ್ತಿರೋ ತನಿಷಾಗೆ ಜೈ; ಟ್ಯಾಗ್‌ಲೈನ್ ಫೋಟೋ ಭಾರೀ ಟ್ರೆಂಡಿಂಗ್!
 
ವಿಶ್ವಂಭರ ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನಕಾರರು. ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ನಾಗಭೂಷಣ್ ಈಗ ವಿದ್ಯಾಪತಿ; ಸಂಕ್ರಾಂತಿ ಹಬ್ಬಕ್ಕೆ ಡಾಲಿ ಪಿಕ್ಚರ್ಸ್ ಹೊಸ ಸಿನಿಮಾ ಘೋಷಣೆ

click me!