ಮಕ್ಕಳು ಬೇಕಾ- ಕಟ್ಟಿಕೊಂಡವಳೇ ಸಾಕಾ? ಇಬ್ಬರ ನಡುವೆ ಸಿಲುಕಿರುವಾಗ ಆಯ್ಕೆ ಯಾವುದು?

By Suvarna News  |  First Published Jan 15, 2024, 1:07 PM IST

ಮಗಳಿಗೆ ಅಪಘಾತವಾಗಿರುವ ಸುದ್ದಿ ತಿಳಿದು ತಾಂಡವ್​ ಓಡಿ ಬಂದಿದ್ದಾನೆ.  ಆದರೆ ಆತನ ಅಮ್ಮ ಮನೆಯೊಳಕ್ಕೆ ಬಿಡುತ್ತಿಲ್ಲ. ಮುಂದೆ? 
 


 ಯಾರ್ರಿ ನೀವು? ನೀವು ಯಾರೆಂದು ಗೊತ್ತಿಲ್ಲ, ದಾರಿ ತಪ್ಪಿ ಇಲ್ಲಿಗೆ ಬಂದ್ರಾ... ಎನ್ನುತ್ತಲೇ ಮಗ ತಾಂಡವ್​ನನ್ನು ತಿವಿಯುತ್ತಿದ್ದಾಳೆ ಕುಸುಮಾ. ಕರುಳ ಕುಡಿಯನ್ನೇ ದೂರ ಮಾಡಿಕೊಂಡು, ಕಟ್ಟಿಕೊಂಡಿರುವ ಪತ್ನಿ, ಹೆತ್ತ ಅಮ್ಮನನ್ನೇ ಕಡೆಗಣಿಸಿ ಇಟ್ಟುಕೊಂಡವಳ ಬಳಿಗೆ ಓಡಿದ್ದ, ಆಕೆಯ ಜೊತೆ ಮದುವೆಗೂ ಸಿದ್ಧನಾಗಿದ್ದ ತಾಂಡವ್​ನನ್ನು ಅಮ್ಮ ಕುಸುಮಾ ಪ್ರಶ್ನಿಸಿದ ಪರಿ ಇದು. ಇತ್ತ ಮಗಳು ತನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ತಾನು ಇನ್ನೊಂದು ಮದುವೆಯಾಗಲು ಸಿದ್ಧನಾಗಿದ್ದ ತಾಂಡವ್​ಗೆ ಇದೀಗ ಎಚ್ಚರವಾಗಿದೆ. ಮಗಳ ವಿಷಯದ ಅರಿವೇ ಇಲ್ಲದ ಈ ಅಪ್ಪ, ಈಗ ಮಗಳನನ್ನು ನೋಡಲು ತವಕಿಸುತ್ತಿದ್ದಾನೆ. ಅದರೆ ಅಮ್ಮ ಕುಸುಮಾ ಹಾಗೂ ಅತ್ತೆ ಆತನನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಯಾರ್ರಿ ನೀವು ಎಂದು ಹೆತ್ತ ಮಗನನ್ನೇ ಗದರಿಸುತ್ತಿದ್ದಾಳೆ ಕುಸುಮಾ, ಹಾಗಿದ್ದರೆ ಮುಂದೇನು?

ಇದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನ ಇಂದಿನ ಸಂಚಿಕೆ. ಕಟ್ಟಿಕೊಂಡ ಕುಸುಮಾಳನ್ನು, ಹೆತ್ತ ಮಕ್ಕಳನ್ನು ಬಿಟ್ಟು ಕಟ್ಟಿಕೊಂಡ ಶ್ರೇಷ್ಠಾಳಿಗಾಗಿ ಮನೆ ಬಿಟ್ಟು ಹೋದವ ತಾಂಡವ್​. ಈ ನಡುವೆಯೇ, ಮನೆ ಬಿಟ್ಟು ಹೋಗಿದ್ದ ಅಪ್ಪನನ್ನು ಹುಡುಕಿ ತನ್ವಿ ಹೋದಾಗ ತಾಂಡವ್​ ಬಯ್ದು ಕಳಿಸಿದ್ದ. ಇದೇ ನೋವಲ್ಲಿ ಬಂದ ತನ್ವಿಗೆ ಅಪಘಾತವಾಗಿತ್ತು.  ಮಗಳು ತನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ತಾಂಡವ್​ನಿಂದ ಮಾತ್ರ ಆಕೆಯನ್ನು ಬದುಕಿಸಲು ಸಾಧ್ಯ ಎಂದು ಭಾಗ್ಯಲಕ್ಷ್ಮಿ ಹೇಳಿದ್ದಳು. ಒಂದು ವೇಳೆ ಈ ವಿಷಯವೇನಾದರೂ ತಾಂಡವ್​ಗೆ ತಿಳಿದರೆ ಮದುವೆ ಕ್ಯಾನ್ಸಲ್​ ಮಾಡಿ ಮಗಳನ್ನು ಬದುಕಿಸಲು ಹೋಗುತ್ತಾನೆ ಎಂದು ಅರಿತ ಶ್ರೇಷ್ಠಾ ಸಿಗ್ನಲ್​ ಸಿಗದೇ ಭಾಗ್ಯಳ ಮಾತು ಕೇಳಿದವರ ಹಾಗೆ ಆ್ಯಕ್ಟಿಂಗ್​ ಮಾಡಿದ್ದು, ಕರೆ ಕಟ್​ ಮಾಡಿದ್ದಳು. ಇತ್ತ ರಕ್ತ ಸಿಗದೇ ಹೋದರೆ ತನ್ವಿಯ ಜೀವಕ್ಕೆ ಅಪಾಯ ಅಂದಿದ್ದರು. 

Tap to resize

Latest Videos

ದೇವಸ್ಥಾನ ಪ್ರವೇಶ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಜನಾಂಗದ ಇಂಟರೆಸ್ಟಿಂಗ್ ವಿಷ್ಯವಿದು!

ಕೊನೆಗೂ ರಕ್ತ ಸಿಕ್ಕು ತನ್ವಿ ಜೀವಾಪಾಯದಿಂದ ಪಾರಾಗಿದ್ದಾಳೆ. ಅತ್ತ ಶ್ರೇಷ್ಠಾಳ ಮನೆಯವರಿಗೂ ತಾಂಡವ್​ ಇದಾಗಲೇ ವಿವಾಹಿತ ಎಂಬ ಅರಿವು ಆಗಿದೆ. ಮಗಳು ಜೀವನ್ಮರಣಗಳ ನಡುವೆ ಹೋರಾಟ ಮಾಡುತ್ತಿರುವುದು ಇದೀಗ ತಾಂಡವ್​ಗೆ ಅರಿವಾಗಿದ್ದು, ಮಗಳನ್ನು ನೋಡಲು ಓಡೋಡಿ ಬಂದಿದ್ದಾನೆ. ಆದರೆ ಮಗಳು ಸಾಯುವ ಸ್ಥಿತಿಯಲ್ಲಿ ಇದ್ದಾಗ ಬರದ ಮಗನನ್ನು ಕಂಡು ಅಮ್ಮ ಕುಸುಮಾ ರೇಗಿ ಹೋಗಿದ್ದಾಳೆ. ಆಗ ಬರದವನು ಈಗೇಕೆ ಬಂದೆ ಎಂದು ಪ್ರಶ್ನಿಸುತ್ತಿದ್ದಾಳೆ. ನೀನು ಯಾರು ಎಂದೇ ಗೊತ್ತಿಲ್ಲ ಎನ್ನುತ್ತಿದ್ದಾಳೆ.

ಆದರೆ ತನ್ನ ಮತ್ತು ಮಗಳ ನಡುವೆ ಅಮ್ಮ ಬಂದರೂ ಮಗಳನ್ನು ನೋಡದೇ ನಾನು ಹೋಗಲ್ಲ ಎಂದು ತಾಂಡವ್​ ಪಟ್ಟು ಹಿಡಿದಿದ್ದಾನೆ. ತಪ್ಪು ತನ್ನದೇ ಇದ್ದರೂ ಆತನ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ. ನನ್ನ ಮತ್ತು ಮಗಳ ನಡುವೆ ಯಾರೇ ಬಂದರೂ ನಾನು ಬಿಡುವುದಿಲ್ಲ, ಮಗಳನ್ನು ನೋಡಿಯೇ ಹೋಗುತ್ತೇನೆ ಎಂದಿದ್ದಾನೆ. ಅತ್ತ ವೈದ್ಯರು ಕೂಡ ತನ್ವಿಗೆ ದೇಹದ ಆಘಾತಕ್ಕಿಂತ ಮಾನಸಿಕ ಆಘಾತವೇ ಹೆಚ್ಚಾಗಿದೆ ಎಂದಿದ್ದಾರೆ. ಹಾಗಿದ್ದರೆ ಮಗಳಿಗಾಗಿಯಾದರೂ ಈ ಅಪ್ಪನ ಮನ ಮಿಡಿಯುವುದೆ? ನಿಜವನ್ನು ತಿಳಿಸದೇ ಅಪಘಾತದ ವಿಷಯವನ್ನು ಮುಚ್ಚಿಟ್ಟ ಶ್ರೇಷ್ಠಾಳ ಕುತಂತ್ರ ಅರಿವಾಗುವುದೇ ಎನ್ನುವುದು ಈಗಿರುವ ಪ್ರಶ್ನೆ. ಈತನಿಗೆ ಮಗಳನ್ನು ನೋಡಲು ಬಿಡಲೇ ಬಾರದು ಎಂದು ಹಲವರು ನೆಟ್ಟಿಗರು ಹೇಳುತ್ತಿದ್ದರೆ, ಆತನಿಗೆ ಸತ್ಯದ ಅರಿವು ಇರಲಿಲ್ಲ. ಈಗ ಅರಿವಾಗಿ ಓಡಿ ಬಂದಿದ್ದಾನೆ. ಮಗಳನ್ನು ನೋಡಲು ಬಿಟ್ಟರೆ ಆ ಮಗಳಿಗೂ ಸಮಾಧಾನ ಎನ್ನುತ್ತಿದ್ದಾರೆ ಇನ್ನು ಕೆಲವರು. 

ಪ್ರಧಾನಿ ಮೋದಿಯ ಕರೆಗೆ ಸ್ಪಂದಿಸಿ ದೇಗುಲದ ಆವರಣ ಸ್ವಚ್ಛಗೊಳಿಸಿದ ನಟ ಜಗ್ಗೇಶ್​ ಹೀಗೊಂದು ಮನವಿ...
 

click me!