ರವಿ ಬೆಳಗೆರೆ ಅವರ 'ಹೇಳಿ ಹೋಗು ಕಾರಣ' ಧಾರಾವಾಹಿಯಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಸೂರಜ್ ಕಾಣಿಸಿಕೊಳ್ಳುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಯಾರೇ ನೀ ಮೋಹಿನಿ' ಪ್ರಸಾರ ನಿಲ್ಲಿಸಿದ ನಂತರ ನಟ ಸೂರಜ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸೂರಜ್ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಿದ್ದರು. ರವಿ ಬೆಳೆಗೆರೆ ಅವರ ಪುಸ್ತಕ ಈಗ ಧಾರಾವಾಹಿಯಾಗುತ್ತಿದೆ. ಈ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಸೂರಜ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೇಳಿ ಹೋಗು ಕಾರಣ ಪ್ರಸಾರವಾಗಲಿದೆ. ಬಿಡುಗಡೆಯಾಗಿರುವ ಪೋಮೋ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ ಈ ಪ್ರೋಮೋ ಸಖತ್ ವಿಭಿನ್ನವಾಗಿದೆ. ಈ ಕಥೆಯಲ್ಲಿ ಏನೋ ವಿಶೇಷತೆ ಇದೆ ಎಂದು ಪ್ರೋಮೋ ಹೇಳುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
'ರಾಧೆ ಶ್ಯಾಮ': ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಶ್ವಿನಿ ಗೌಡ!ಸೂರಜ್‌ಗೆ ಜೋಡಿಯಾಗಿ ರಕ್ಷಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಕೋರಮಂಗಲ ಅನಿಲ್, ಚೇತನ್ ಆರ್, ಗುರುಪ್ರಸಾದ್ ಅವರ ತಂಡ ಭಾವನಾ ಬೆಳೆಗೆರೆ ಅವರ ಜೊತೆ ಈ ಧಾರಾವಾಹಿ ಚಿತ್ರೀಕರಣ ಆರಭವಾಗುವ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಆಗಲೇ ರವಿ ಬೆಳೆಗೆರೆ ಅವರ ಅಭಿಮಾನಿಗಳು ಪುಳಕಗೊಂಡು, ಧಾರಾವಾಹಿಗೆ ಪರೋಕ್ಷವಾಗಿ ಸಾಥ್ ಕೊಟ್ಟರು. ಶಿವಮೊಗ್ಗ ಹಾಗೂ ಸಕಲೇಶ್ಪುರದಲ್ಲಿ ಧಾರಾವಾಹಿ ಚಿತ್ರೀಕರಣ ಆರಂಭವಾಗಿದೆ.