
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರಸು' ಧಾರಾವಾಹಿ ತಂಡ ಹೈದರಾಬಾದ್‌ನಲ್ಲಿ ಚಿತ್ರೀಕರಣ ಅರಂಭಿಸಿದೆ. ತಂಡದ ಸದಸ್ಯರು ಚಿತ್ರೀಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ.
ನಟಿ ಸುಪ್ರೀತಾ ಸತ್ಯನಾರಾಯಣ್‌ಗೆ ಕೊರೋನಾ ಪಾಸಿಟಿವ್; ಗೌಪ್ಯವಾಗಿಡಲು ಕಾರಣ ಇಷ್ಟೆ!
ಕೆಲವು ದಿನಗಳ ಹಿಂದೆ ನಟಿ ಸುಪ್ರೀತಾಗೆ ಕೊರೋನಾ ಸೊಂಕು ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚೇತರಿಸಿಕೊಂಡ ನಂತರ ಚಿತ್ರೀಕರಣದಲ್ಲಿ ಭಾಗಿಯಾಗುವ ಬಗ್ಗೆ ಈ ಹಿಂದೆ ಸುಪ್ರೀತಾ ಮಾಹಿತಿ ನೀಡಿದ್ದರು. 'ನಾನು ಕೊರೊನಾದಿಂದ ಸಂಪೂರ್ಣ ಗುಣಮುಖಳಾಗಿರುವೆ. ನನ್ನ ತಂಡ ಹೈದರಾಬಾದ್‌ನಲ್ಲಿ ಚಿತ್ರೀಕರಣಕ್ಕೆ ರೆಡಿ ಆಗುವಂತೆ ಸೂಚಿಸಿದೆ. ನಮ್ಮ ಆರೋಗ್ಯನೂ ಕಾಪಾಡಿಕೊಳ್ಳಬೇಕು, ಹಾಗೆಯೇ ನಮ್ಮ ಕೆಲಸವೂ ಮುಂದುವರೆಸಿಕೊಂಡು ಹೋಗಬೇಕು,' ಎಂದು ಸುಪ್ರೀತಾ ಹೇಳಿದ್ದರು.
150 ಸಂಚಿಕೆಗಳನ್ನು ಪೂರೈಸಿರುವ ಸರಸು ಧಾರಾವಾಹಿಯಲ್ಲಿ ಸುಪ್ರೀತಾಗೆ ಜೋಡಿಯಾಗಿ ಸ್ಕಂದ ಅಶೋಕ್ ನಟಿಸುತ್ತಿದ್ದಾರೆ. ಚಿತ್ರೀಕರಣ ಸುಸೂತ್ರವಾಗಿ ನಡೆಯುತ್ತಿದ್ದು, ಹೊಸ ಸಂಚಿಕೆಗಳು ಪ್ರಸಾರವಾಗುತ್ತಿವೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಸುಪ್ರೀತಾ ಕಾಣಿಸಿಕೊಂಡರೆ, ಆಭಾರಿ ಸಿರಿವಂತ ಹುಡುಗನಾಗಿ ಸ್ಕಂದ ಮಿಂಚಿದ್ದಾರೆ. ಇವರಿಬ್ಬರ ಆನ್‌ಸ್ಕ್ರೀನ್ ಕಾಂಬಿನೇಷನ್‌ಗೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.