ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋ ವಿಜೇತನಾಗಿರುವ ಕೇರಳದ ಬಾಲಕ ಆರ್ವಿಭವ್ ಹಾಡಿರುವ ಕನ್ನಡದ ಭಕ್ತಿಗೀತೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶಾಲ ಹೃದಯವರಾದ ಕನ್ನಡಿಗರು ಪ್ರೀತಿಯಿಂದ ಲೈಕ್ ಒತ್ತಿ, ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಕೇರಳದ ಪೋರ, ಚೋಟಾ ಸಿಂಗರ್ ಆವಿರ್ಭವ್ ತಮ್ಮ ಗಾಯನದಿಂದಲೇ ಫೇಮಸ್. ಖಾಸಗಿ ವಾಹಿನಿ ಸಿಂಗಿಂಗ್ ರಿಯಾಲಿಟಿ ಶೋ ವಿಜೇತನಾಗಿರುವ ಆವಿರ್ಭವ್, ಇದೀಗ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಕನ್ನಡದ ಭಾಗ್ಯ ಲಕ್ಷ್ಮೀ ಹಾಡನ್ನು ಸುಮಧುರವಾಗಿ ಹಾಡಿರುವ ಆವಿರ್ಭವ್ ಧ್ವನಿಗೆ ಕನ್ನಡಿಗರು ಫಿದಾ ಆಗಿದ್ದಾರೆ. ಆಗಸ್ಟ್ 9ರಂದು ಸೋಶಿಯಲ್ ಮೀಡಿಯಾದಲ್ಲಿ ಅಕ್ಕನ ಜೊತೆ ಆವಿರ್ಭವ್ ಈ ಹಾಡನ್ನು ಹಾಡಿದ್ದಾನೆ. ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡು ಕನ್ನಡದ ಜನಪ್ರಿಯ ಭಕ್ತಿಗೀತೆ ಆಗಿದೆ. ಪ್ರತಿ ಶುಕ್ರವಾರ ಬಹುತೇಕ ಹಿಂದೂಗಳ ಮನೆಯಲ್ಲಿ ಈ ಹಾಡನ್ನು ಕೇಳಬಹುದು. ಕಳೆದ ಶುಕ್ರವಾರವಷ್ಟೇ ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗಿತ್ತು. ವರಮಹಾಲಕ್ಷ್ಮಿ ದಿನದಂದೇ ಆವಿರ್ಭವ್ ಮುದ್ದಾಗಿ ಭಕ್ತಿಯಿಂದ ಈ ಹಾಡು ವೈರಲ್ ಆಗಿದೆ.
ಹಾಡು ಕೇಳಿದ ಕನ್ನಡದ ಸಂಗೀತ ಪ್ರೇಮಿಗಳು ಕೇರಳದ ಪೋರನಿಗೆ ಶಹಬ್ಬಾಶ್ ಎಂದು ಹೇಳಿ ವಿಡಿಯೋವನ್ನು ಪ್ರೀತಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಕ್ಕನ ಜೊತೆ ಸಾಂಪ್ರದಾಯಿಕ ಉಡುಪು ಧರಿಸಿ ಅಕ್ಕನ ಜೊತೆ ಕುಳಿತು ಹಾಡು ಹೇಳಿದ್ದಾನೆ. ಈ ವಿಡಿಯೋಗೆ ಸಾವಿರಾರು ಲೈಕ್ಸ್, ನೂರಾರು ಕಮೆಂಟ್‌ಗಳು ಬಂದಿವೆ.
ಆವಿರ್ಭವ್ ಎರಡು ವರ್ಷದ ಮಗುವಾಗಿದ್ದಾಗಿನಿಂದಲೂ ಸಂಗೀತ ಅಭ್ಯಾಸ ಮಾಡಿಕೊಂಡು ಬಂದಿದ್ದಾನೆ. ಅಷ್ಟು ಮಾತ್ರವಲ್ಲದೇ ನಾಲ್ಕು ವರ್ಷವನಿದ್ದಾಗ ತನ್ನ ಹಾಡಿನ ಸಾಮಾರ್ಥ್ಯದಿಂದಲೇ ರಿಯಾಲಿಟಿ ಶೋಗೆ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದನು. ಇದಾದ ಬಳಿಕ ನ್ಯಾಷನಲ್ ಟೆಲಿವಿಷನ್ ಶೋಗೆ ಆಯ್ಕೆಯಾಗಿದ್ದ ಆವಿರ್ಭವ್‌ಗೆ ಹಿಂದಿ ಭಾಷೆಯೇ ಗೊತ್ತಿಲ್ಲ. ಆದರೂ ಹಿಂದಿ ಹಾಡುಗಳನ್ನು ಕಲಿತು ಕಂಠಪಾಟ ಮಾಡಿಕೊಂಡು ಹಾಡುತ್ತಿದ್ದನು. ಸೂಪರ್ ಸ್ಟಾರ್ ಸಿಂಗರ್ ಶೋ ಟ್ರೋಫಿಯನ್ನು ಸಹ ಆವಿರ್ಭವ್ ತನ್ನದಾಗಿಸಿಕೊಂಡಿದ್ದನು. ಆದರೆ ಫಿನಾಲೆಯಲ್ಲಿ ತೀರ್ಪುಗಾರರು ತೆಗೆದುಕೊಂಡು ಒಂದು ನಿರ್ಧಾರದಿಂದ ಆವಿರ್ಭವ್ ಅಭಿಮಾನಿಗಳು ಅಸಮಾಧಾನಗೊಂಡಿದ್ದರು.
ಹಿಂದಿ Indian Idol ಸ್ಟೇಜ್ ಮೇಲೆ ದಿಯಾ ಹೆಗಡೆ; ಸದ್ಯದಲ್ಲೇ ಸೋನಿ ಟಿವಿಯಲ್ಲಿ ಕನ್ನಡದ ಕಂಪು!
ಸೂಪರ್ ಸ್ಟಾರ್ ಸಿಂಗರ್ ಶೋ ಆರಂಭಗೊಂಡ ಮೊದಲ ದಿನದಿಂದಲೂ ಆವಿರ್ಭವ್ ಎಲ್ಲಾ ತೀರ್ಪುಗಾರರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದನು. ಬಹುತೇಕ ಹಿಂದಿ ರಿಯಾಲಿಟಿ ಶೋಗಳಲ್ಲಿ ಭಾರತದ ದಕ್ಷಿಣ ಭಾಗದ ಸ್ಪರ್ಧಿಗಳು ಗೆಲ್ಲುವುದು ತುಂಬಾ ವಿರಳ. ದಕ್ಷಿಣ ಭಾರತದಲ್ಲಿ ಹಿಂದಿ ವಾಹಿನಿ ವೀಕ್ಷಕರ ಸಂಖ್ಯೆ ಕಡಿಮೆ ಇರೋ ಕಾರಣ, ವೋಟ್ ಬರಲ್ಲ ಎಂಬ ಮಾತಿದೆ. ಆದರೂ ಆವಿರ್ಭವ್ ಎಲ್ಲಾ ಭಾಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದನು. ಆದರೆ ಕೊನೆ ಕ್ಷಣದಲ್ಲಿ ಮತ್ತೋರ್ವ ಸ್ಪರ್ಧಿ ಅಥರ್ವ್‌ಗೂ ಮೊದಲ ಸ್ಥಾನ ನೀಡಲಾಯ್ತು.
ರಿಯಾಲಿಟಿ ಶೋ ವಿನ್ನರ್ ಪಟ್ಟ ಅಲಂಕರಿಸಿದ ಬಳಿಕ ಮಾತನಾಡಿದ್ದ ಆವಿರ್ಭವ್, ಮೊದಲ ಸ್ಥಾನ ಗಳಿಸಿರೋದಕ್ಕೆ ಸಂತಸವಾಗುತ್ತಿದೆ. ನನ್ನ ಪೋಷಕರು ಸಹ ತುಂಬಾ ಖುಷಿಯಾಗಿದ್ದಾರೆ. ಮುಂದೆಯೂ ನನ್ನ ಸಂಗೀತಾಭ್ಯಾಸ ಮುಂದುವರಿಸಿ, ಖ್ಯಾತ ಗಾಯಕ ಅರ್ಜಿತ್ ಸಿಂಗ್ ರೀತಿ ದೊಡ್ಡ ಸಿಂಗರ್ ಆಗಬೇಕೆಂಬ ಆಸೆ ಇದೆ. ಈ ರಿಯಾಲಿಟಿ ಶೋಗಾಗಿ ಗೆಳಯರನ ಜೊತೆ ಆಟ ಆಡೋದನ್ನು ಮಿಸ್ ಮಾಡಿಕೊಂಡಿದ್ದೇನೆ. ನಮ್ಮ ಜಡ್ಜ್ ಮತ್ತು ಕ್ಯಾಪ್ಟನ್ ಜೊತೆ ಒಳ್ಳೆಯ ಸಮಯ ಕಳೆದಿದ್ದೇನೆ. ಕ್ಯಾಪ್ಟನ್ ನನಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡುತ್ತಿದ್ದರು. ಹಾಗಾಗಿ ನಾನು ಉತ್ತಮವಾಗಿ ಹಾಡಲು ಸಾಧ್ಯವಾಯ್ತು. ಎಲ್ಲಾ ಕ್ಯಾಪ್ಟನ್‌ಗಳು ನನಗೆ ಇಷ್ಟ ಎಂದು ಆವಿರ್ಭವ್ ಹೇಳಿದ್ದಾನೆ.
ಸೂಪರ್ ಸ್ಟಾರ್ ಸಿಂಗರ್ ಶೋಗೆ ಇಬ್ಬರು ವಿನ್ನರ್; ದಕ್ಷಿಣ ಭಾರತದ ಪ್ರತಿಭೆಗೆ ಮೋಸವಾಯ್ತಾ?