ಸ್ಯಾಂಡಲ್ವುಡ್ ನಟ, ರ‍್ಯಾಪರ್ ಚಂದನ್ ಶೆಟ್ಟಿ ಈಗ ಬ್ಯಾಚ್ಯುಲರ್. ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದಿರುವ ಚಂದನ್ ಈಗ ಚಿತ್ರನ್ನ ಮಾಡೋದ್ರಲ್ಲಿ ಬ್ಯುಸಿ. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿವೇದಿತಾ ಗೌಡ (Nivedita Gowda) ಗೆ ವಿಚ್ಛೇದನ ನೀಡಿದ ನಂತ್ರ ರ‍್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಸಖತ್ ಸದ್ದು ಮಾಡ್ತಿದ್ದಾರೆ. ಅವರ ನಾನಾ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಗ ಕಿರಿಕ್ ಕೀರ್ತಿ (Kirik Kirti) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಶೆಟ್ಟಿ ರೀಲ್ಸ್ ವೈರಲ್ ಆಗಿದೆ. ರಾತ್ರಿ ಉಳಿದ ಅನ್ನ.. ಬೆಳಿಗ್ಗೆ ಪರಮಾನ್ನ ಎಂದು ಶೀರ್ಷಿಕೆ ಹಾಕಿ, ಕಿರಿಕ್ ಕೀರ್ತಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಅಡುಗೆ ಮಾಡ್ತಿರೋದನ್ನು ನೀವು ನೋಡ್ಬಹುದು. ಕೀರ್ತಿ, ಏನು ಮಾಡ್ತಿದ್ದೀರಿ ಎಂದು ಕೇಳ್ತಾರೆ. ಚಂದನ್ ಹೇಳುವ ಮೊದಲೇ ಕೀರ್ತಿ, ಚಿತ್ರಾನ್ನ ಎನ್ನುವುದಲ್ಲದೆ ಬ್ಯಾಚ್ಯುಲರ್ ಚಿತ್ರಾನ್ನ ಎನ್ನುತ್ತಾರೆ. ಅದಕ್ಕೆ ನಗುವ ಚಂದನ್, ಒಗ್ಗರಣೆಗೆ ಅನ್ನ ಹಾಕಿ ಚಿತ್ರಾನ್ನ ಮಾಡ್ತಾರೆ.
'ಲಕ್ಷ್ಮಿ ನಿವಾಸ' ಸೀರಿಯಲ್ ಭಾವನಾಳ ನಿಜವಾದ ಮಗಳು ಖುಷಿ ಅಲ್ಲ ಅವೀರಾ; ಈಕೆ ಕೂಡ ಸೆಲೆಬ್ರಿಟಿ ಕಿಡ್!
ಕಿರಿಕ್ ಕೀರ್ತಿ ಈ ವಿಡಿಯೋಕ್ಕೆ ಬಳಕೆದಾರರು ಲೈಕ್ ಒತ್ತಿದ್ದಾರೆ. ಅನೇಕರು ಕಮೆಂಟ್ ಮಾಡಿದ್ದಾರೆ. ಚಂದನ್ ಅವರಿಗೆ ಫುಲ್ ಸ್ವಾತಂತ್ರ್ಯ ಸಿಕ್ಕಿದೆ. ಹೆಂಗ್ ಬೇಕಾದ್ರೂ ಊಟ ಮಾಡ್ಬಹುದು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವಿಚ್ಛೇದಿತರದ್ದೇ ಒಂದು ಸಂಘ ಓಪನ್ ಆದ್ರೂ ಅಚ್ಚರಿ ಇಲ್ಲ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
ಬ್ಯಾಚ್ಯುಲರ್ ಚಿತ್ರಾನ್ನ ಅಂದ್ರೆ ಬೆಸ್ಟ್. ಅದ್ರಲ್ಲಿ ಪ್ರೀತಿ, ಮಮತೆ, ಸ್ನೇಹ ಎಲ್ಲ ಬೆರೆತಿರುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಬಳಕೆದಾರರೊಬ್ಬರು ಹಾರ್ದಿಕ್ ಪಾಂಡ್ಯರನ್ನು ಕರೆದುಕೊಳ್ವಂತೆ ಸಲಹೆ ನೀಡಿದ್ರೆ ಇನ್ನೊಬ್ಬರು ಅಪ್ಪು ಸರ್, ರಾತ್ರಿ ಉಳಿದ ಅನ್ನದಲ್ಲಿ ಚಿತ್ರಾನ್ನ ಹೇಗೆ ಮಾಡ್ಬೇಕು ಅಂತ ಹೇಳಿದಾರೆ. ತಿಳ್ಕೊಳ್ಳಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಚಂದನ್ ಕಲ್ಬೆರಿಕೆ ಬ್ಯಾಚ್ಯುಲರ್, ನಾವು ಪೂರಾ ಬ್ಯಾಚ್ಯುಲರ್ ಅಂದ್ರೆ, ನಿಮ್ಮನ್ನು ನೋಡಿದ್ರೆ ಬೇಸರವಾಗುತ್ತೆ, ಎಷ್ಟು ಸ್ವಾತಂತ್ರ್ಯ ಸಿಕ್ಕಿದೆ ನಿಮಗೆ ಅಂತ ಇನ್ನೊಬ್ಬರು ಚಂದನ್ ನೋಡಿ ಹೊಟ್ಟೆ ಉರಿದುಕೊಂಡಿದ್ದಾರೆ. ಬಳಕೆದಾರರೊಬ್ಬರು, ಚಿತ್ರಾಹ್ನಕ್ಕೆ ಈರುಳ್ಳಿ ಹಾಕೇ ಇಲ್ಲ ಅಂದ್ರೆ ಮತ್ತೊಬ್ಬರು ಸ್ವಾತಂತ್ರ್ಯನ ಫುಲ್ ಎಂಜಾಯ್ ಮಾಡಿ ಅಂತ ಸಲಹೆ ನೀಡಿದ್ದಾರೆ.
ನಿವೇದಿತಾಗೆ ವಿಚ್ಛೇದನ ನೀಡಿದ ನಂತ್ರ ಜನರು ಚಂದನ್ ಶೆಟ್ಟಿ ಮೇಲಿನ ಪ್ರೀತಿಯನ್ನು ಒಂದಿಷ್ಟು ಹೆಚ್ಚು ಮಾಡಿದಂತಿದೆ. ಚಂದನ್ ಶೆಟ್ಟಿ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ. ನಿವೇದಿತಾ ಗೌಡ ಏನೇ ಮಾಡಿದ್ರೂ ಕಾಲೆಳೆಯುವ ಜನರು, ಚಂದನ್ ಸಪೋರ್ಟ್ ಮಾಡ್ತಿದ್ದಾರೆ. ಇದಕ್ಕೆ ಚಂದನ್ ವರ್ತನೆ ಕೂಡ ಕಾರಣ ಅಂದ್ರೆ ತಪ್ಪಾಗೋದಿಲ್ಲ. ಚಂದನ್, ಯಾವುದೇ ಗಲಾಟೆ ಇಲ್ಲದೆ ನಿವೇದಿತಾ ಗೌಡರಿಗೆ ವಿಚ್ಛೇದನ ನೀಡಿದ್ದಲ್ಲದೆ, ಅವರನ್ನು ಈಗ್ಲೂ ಗೌರವದಿಂದ ನೋಡ್ತಿದ್ದಾರೆ.
ಸದ್ಯ ಚಂದನ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಒಂದಿಷ್ಟು ರೀಲ್ಸ್ ಮಾಡ್ತಾ ಲೈಫ್ ನಲ್ಲಿ ರಿಲ್ಯಾಕ್ಸ್ ಆಗೋ ಪ್ರಯತ್ನ ನಡೆಸುತ್ತಿದ್ದಾರೆ. ನಿನ್ನೆಯಷ್ಟೆ ಹಿಂದಿ ಹಾಡಿಗೆ ಚಂದನ್ ರೀಲ್ಸ್ ಮಾಡಿದ್ರು. ಇದನ್ನು ನೋಡಿದ ಅಭಿಮಾನಿಗಳು, ಏನಾದ್ರೂ ಖುಷಿ ಸುದ್ದಿ ಇದ್ಯಾ ಸರ್ ಅಂತ ಕೇಳಿದ್ರು. ಸಹೋದರಿ ಜೊತೆ ರಕ್ಷಾಬಂಧನ ಆಚರಿಸಿಕೊಂಡಿರುವ ಚಂದನ್ ಅದ್ರ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್
ನಿವೇದಿತಾ ಗೌಡ ಜೊತೆ ಮದುವೆ ಆದ್ಮೇಲೆ ಚಂದನ್, ನಿವೇದಿತಾ ರೀಲ್ಸ್ ನಲ್ಲಿ ಕಾಣಿಸಿಕೊಳ್ತಿದ್ದರು. ಅವರೇ ಒಂಟಿಯಾಗಿ ರೀಲ್ಸ್ ಮಾಡಿದ್ದು ಬಹಳ ಅಪರೂಪ. ಆದ್ರೆ ನಿವೇದಿತಾರಿಂದ ಬೇರೆ ಆದ್ಮೇಲೆ ರೀಲ್ಸ್ ಮಾಡೋಕೆ ಚಂದನ್ ಸಮಯ ನೀಡ್ತಿದ್ದಾರೆ. ಚಂದನ್ ಮತ್ತೆ ಮದುವೆ ಆಗ್ತಾರೆ, ಶೀರ್ಘವೇ ಈ ಸುದ್ದಿ ನೀಡ್ತಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳದ್ದು. ಆದ್ರೆ ಚಂದನ್ ತಮ್ಮ ಫ್ಯೂಚರ್ ಗೆ ಹೆಚ್ಚು ಆಧ್ಯತೆ ನೀಡಿದಂತೆ ಕಾಣ್ತಿದೆ.