
ಸನ್ ಉದಯ ವಾಹಿನಿಯಲ್ಲಿ ʻಮೈನಾʼ ಧಾರಾವಾಹಿಯಲ್ಲಿ ಹೊಸದೊಂದು ಪ್ರಯೋಗ ಮಾಡಲಾಗಿದ್ದು, ನೈಜವೆನ್ನಿಸುವ ಕಬಡ್ಡಿ ಪಂದ್ಯಗಳನ್ನು ಅಳವಡಿಸಲಾಗಿದೆ. ಈ ವಿಶೇಷ ಸಂಚಿಕೆಗಳ ವಿಶೇಷ ಕಲಾವಿದರಾಗಿ ನಟ ಧನುಷ್ ʻತಾಂಡವ್ʼ ಪಾತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಜೋಡಿಯಾಗಿ ದುರ್ಗಶ್ರೀ ನಟಿಸಿದ್ದಾರೆ.
ಊರಿನ ದೇವಸ್ಥಾನದ ಕಾರ್ಯಕ್ರಮ ಹಿನ್ನೆಲೆಯಲ್ಲಿ ʻಮೈನಾʼ ಧಾರಾವಾಹಿ ಇಬ್ಬರು ನಾಯಕರ ಕುಟುಂಬಗಳ ಪ್ರತಿಷ್ಠೆಗಾಗಿ ಕಬಡ್ಡಿ ಪಂದ್ಯಾವಳಿ ನಡೆಯುತ್ತದೆ. ಅಮ್ಮನೋರಿಗೆ ಕಿರೀಟ ತೊಡಿಸುವ ಅರ್ಹತೆ ಗಳಿಸಿಕೊಳ್ಳಲು ಕಬಡ್ಡಿ ಪಂದ್ಯ ಗೆಲ್ಲಬೇಕು ಎಂಬುದು ಷರತ್ತು ಇರುತತದೆ. ಒಂದು ಕುಟುಂಬದ ತಂಡಕ್ಕೆ ತಾಂಡವ್ ನಾಯಕ, ಮತ್ತೊಂದು ಕುಟುಂಬದ ತಂಡಕ್ಕೆ ಪುಷ್ಪಕ್ ನಾಯಕ. ಆತ್ಮೀಯ ಗೆಳೆಯರೇ ಪರಸ್ಪರ ಕಾದಾಡುವ ಪರಿಸ್ಥಿತಿ. ಈ ನಡುವೆ ದೇವಸ್ಥಾನದಲ್ಲಿ ನಡೆದ ಅನಾಹುತವೊಂದಕ್ಕೆ ಧ್ರುವನನ್ನು ಹೊಣೆಗಾರನನ್ನಾಗಿ ಮಾಡಿ ಛಡಿಯೇಟು ಶಿಕ್ಷೆ ನೀಡಲಾಗುತ್ತದೆ. ಇಷ್ಟಾಗಿಯೂ ಧ್ರುವ ಕಬಡ್ಡಿ ಆಟಕ್ಕೆ ಮಿಂಚಿನ ಪ್ರವೇಶ ಮಾಡುತ್ತಾನೆ. ಅಖಾಡದಲ್ಲಿ ಟ್ವಿಸ್ಟ್ ಎಂಬಂತೆ ಅಂತಿಮವಾಗಿ ಮೈನಾ ಹಾಗೂ ದುರ್ಗಾ ರಣಕಹಳೆ ಊದಿ ಕಬಡ್ಡಿ ಅಖಾಡಕ್ಕೆ ಇಳಿಯುತ್ತಾರೆ. ಇವರು ಏಕೆ ಕಣಕ್ಕಿಳಿದರು? ಪಂದ್ಯಾವಳಿ ಹಿಂದೆ ಏನೇನು ರಾಜಕೀಯ ಕುತಂತ್ರ ನಡೆದವು? ಅಂತಿಮ ಸಮರದಲ್ಲಿ ಗೆಲುವು ಯಾರಿಗೆ? ಗೆಳೆತನ ಹಗೆತನವಾಗದೇ ಹೇಗೆ ಉಳಿಯುತ್ತೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ʻಮೈನಾ- ಧ್ರುವ ತಾಂಡವʼ ವಿಶೇಷ ಸಂಚಿಕೆಗಳಲ್ಲಿದೆ.
ಕೋಮಲ್ ಎಂಟರ್ಪ್ರೈಸಸ್ ನಿರ್ಮಾಣ , ಸಂತೋಷ್ ಗೌಡ ಹಾಸನ ನಿರ್ದೇಶನ, ವಾಲಿ-ದಯಾಕರ್ ಛಾಯಾಗ್ರಹಣ, ಗಿರೀಶ್ ಸಂಭಾಷಣೆಯಲ್ಲಿ ಮೂಡಿಬರುತ್ತಿರುವ ʻಮೈನಾ- ಧ್ರುವ ತಾಂಡವʼದಲ್ಲಿ ಧನುಷ್-ದುರ್ಗಶ್ರೀ ಜೊತೆ ವಿಜಯಲಕ್ಷ್ಮೀ, ಸಿದ್ದಾರ್ಥ, ಅರಾಫತ್ ಷರೀಪ್, ಜೆ.ಎಸ್.ವಾಲಿ, ಕಾರ್ತಿಕ್, ಆಯುಧ್, ಶಿಲ್ಪಾ, ನವ್ಯಾ ಮುಂತಾದವರು ಅಭಿನಯಿಸಿದ್ದಾರೆ. ‘ಮೈನಾʼ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಕ್ಕೆ ಸನ್ ಉದಯಲ್ಲಿ ಪ್ರಸಾರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.