ಸ್ಟಾರ್‌ ಸುವರ್ಣದಲ್ಲಿ ಸಾಧಕಿಯರ 'ಕಿಚನ್‌ ದರ್ಬಾರ್‌'!

Kannadaprabha News   | Asianet News
Published : Mar 02, 2020, 02:47 PM IST
ಸ್ಟಾರ್‌ ಸುವರ್ಣದಲ್ಲಿ ಸಾಧಕಿಯರ 'ಕಿಚನ್‌ ದರ್ಬಾರ್‌'!

ಸಾರಾಂಶ

ಮಹಿಳಾ ದಿನಾಚರಣೆ ಅಂಗವಾಗಿ ಸ್ಟಾರ್‌ ಸುವರ್ಣ ವಾಹಿನಿ ಕಿರುತೆರೆ ವೀಕ್ಷಕರಿಗೆ ವಿಶೇಷ ಕಾರ್ಯಕ್ರಮ ನೀಡಲು ಮುಂದಾಗಿದೆ. ಮಾ 2ರಿಂದ ಮಾ.9ರವರೆಗೆ ‘ಕಿಚನ್‌ ದರ್ಬಾರ್‌’ ಕಾರ್ಯಕ್ರಮಕ್ಕೆ ವಿಶೇಷ ಮಹಿಳಾ ಸಾಧಕಿಯರನ್ನು ಆಹ್ವಾನಿಸಿದೆ.

‘ಸ್ಟಾರ್‌ ಸುವರ್ಣ’ ಅಡುಗೆ ಮನೆಯಲ್ಲಿ ಅವರೆಲ್ಲ ತಮ್ಮ ಅಡುಗೆ ಕೈ ರುಚಿ ತೋರಿಸಲಿದ್ದಾರೆ. ಸಾಧಕಿಯರ ಕಿಚನ್‌ ದರ್ಬಾರ್‌ ಕಾರ್ಯಕ್ರಮ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಮೂಡಿಬರಲಿದೆ.

ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!

ಮಾ.2ಕ್ಕೆ ಹಿರಿಯ ನಟಿ ವನಿತಾ ವಾಸು ಅತಿಥಿಯಾಗಿ ಬರಲಿದ್ದಾರೆ. ಮಾ.3 ಕ್ಕೆ ಡಿಸಿಪಿ ಇಶಾ ಪಂತ್‌, ಮಾ.4ಕ್ಕೆ ರಾಯಚೂರಿನ ರೈತ ಮಹಿಳೆ ಕವಿತಾ ಉಮಾಶಂಕರ್‌ ಭಾಗವಹಿಸುತ್ತಿದ್ದಾರೆ. ಮುಂದೆ ಹೆಸರಾಂತ ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಮಾಜಿ ಶಾಸಕಿ ಬಿ.ಟಿ.ಲಲಿತಾ ನಾಯಕ್‌ ಹಾಗೂ ಬಿಎಂಟಿಸಿ ಮೊದಲ ಮಹಿಳಾ ಬಸ್‌ ಚಾಲಕಿ ಪ್ರೇಮಾ ಅತಿಥಿಯಾಗಿ ಪಾಲ್ಗೊಳಲಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'!

ಮಾ. 8 ಮತ್ತು 9 ರಂದು ಎರಡು ದಿನಗಳ ಕಾಲ ಇಸ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಲೇಖಕಿ ಸುಧಾಮೂರ್ತಿ ಭಾಗವಹಿಸಿ ತಮ್ಮ ಅಡುಗೆ ಕೈ ಚಳಕ ತೋರಿಸಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ