ಕಿರುತೆರೆ ವೀಕ್ಷಕರ ಪಾಲಿಗೆ ಈಗ ವಸಂತ ಕಾಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಮತ್ತೆ ವಸಂತ ’ ಹೆಸರಿನ ಹೊಸ ಧಾರಾವಾಹಿ ಮಾರ್ಚ 2 ರಿಂದ ಪ್ರಸಾರವಾಗಲಿದೆ. ಅಣ್ಣಾಜಿ ಅನ್ನೋ ಏರಿಯಾ ಡಾನ್ ಆಶ್ರಯದಲ್ಲಿ ಬೆಳದಿರುವ ವಸಂತ ಹಾಗೂ ತಂದೆ ತಾಯಿಯ ಪ್ರೀತಿಯಲ್ಲಿ ಬೆಳದಿರುವ ಅಪರ್ಣಾಳ ನಡುವೆ ನಡೆಯುವ ಕತೆಯೇ ‘ಮತ್ತೆ ವಸಂತ ’.
ಧಾರಾವಾಹಿಯ ನಾಯಕ ವಸಂತ, ಕಾರು ರಿಪೇರಿ ಮಾಡುವ ಗ್ಯಾರೇಜ್ ನಡೆಸುತ್ತಾ, ಸಣ್ಣ ಪುಟ್ಟಗೂಂಡಾಗಿರಿ ಕೆಲಸ ಮಾಡುತ್ತಿರುತ್ತಾನೆ. ನಾಯಕಿ ಅಪರ್ಣಾ ಫ್ಯಾಷನ್ ಡಿಸೈನರ್ ಆಗಬೇಕೆಂದು ಕನಸು ಕಂಡಿರುವ ಸಾಂಪ್ರದಾಯಸ್ಥ ಮನೆತನದ ಮಗಳು. ವಸಂತ ಅಣ್ಣಾಜಿ ಮೇಲಿನ ಗೌರವಕ್ಕೆ ಗೂಂಡಗಿರಿಯಲ್ಲಿ ತೊಡಗಿರುತ್ತಾನೆ, ಅಪರ್ಣಾಳಿಗೆ ತಮ್ಮನ ಭವಿಷ್ಯ ಮತ್ತು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದೆ ಧ್ಯೇಯವಾಗಿರುತ್ತದೆ. ವಸಂತ ಮುಂಗೋಪಿಯಾಗಿದ್ರೆ, ಅಪರ್ಣಾ ಸಂಯಮ ವ್ಯಕ್ತಿತ್ವ. ಆತ ಬೇಜವಾಬ್ದಾರಿ, ಇವಳು ಮಹತ್ವಾಕಾಂಕ್ಷಿ. ಅವನಿಗೆ ಕರುಣೆಯೇ ಇಲ್ಲ, ಆದರಿವಳು ಮಮತಾಮಯಿ.
ದಾಖಲೆ ನಿರ್ಮಿಸಿದ 'ಸರ್ವಮಂಗಳ ಮಾಂಗಲ್ಯೇ'; ಮುಟ್ಟಿತು 400ನೇ ಕಂತು!
undefined
ಮೊದಲು ಮಾತಾಡಿ ನಂತರ ಯೋಚಿಸುವ ವಸಂತ, ಯಾವುದೇ ಕೆಲಸ ಕೈಗೆತ್ತಿಕೊಂಡರು ಬಹಳ ಶ್ರದ್ಧೆಯಿಂದ ಮಾಡಿ ಮುಗಿಸುವ ಅಪರ್ಣಾ ಇಬ್ಬರದ್ದು ವಿರುದ್ಧ ವ್ಯಕ್ತಿತ್ವ. ವೈರಿಗಳಂತೆ ಭೇಟಿಯಾಗ್ತಾರೆ, ವೈರಿಗಳಂತಿದ್ದವರು ಸ್ನೇಹಿತರಾಗುತ್ತಾರೆ. ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ಘಟಿಸುತ್ತೆ. ಇದು ಕತೆಯಲ್ಲಿ ದೊಡ್ಡ ತಿರುವು ನೀಡುತ್ತೆ. ಜೀವನದುದ್ದಕ್ಕೂ ಸ್ನೇಹಿತರಾಗಿರುತ್ತೀವಿ, ಅಂದುಕೊಂಡವರು ಮದುವೆಯಾಗುವ ಸಂದರ್ಭ ಸೃಷ್ಟಿಯಾಗುತ್ತೆ, ಇಬ್ಬರಿಗೂ ಇಷ್ಟವಿಲ್ಲದಿದ್ದರು ಈ ಮದುವೆಗೆ ಒಪ್ಪುತ್ತಾರೆಯೇ ಎನ್ನುವುದೇ ಪ್ರಶ್ನೆ.
‘ಮತ್ತೆ ವಸಂತ’ ಧಾರಾವಾಹಿಯ ಕತೆ, ಚಿತ್ರಕತೆ ಮತ್ತು ನಿರ್ದೇಶನ ಎಲ್ಲವೂ ವಿಭಿನ್ನವಾಗಿರಲಿದೆ. ಧಾರಾವಾಹಿಯ ಸಂಪೂರ್ಣ ತಂಡ ಮೈಸೂರಿನಲ್ಲಿದ್ದು , ಮೈಸೂರು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಧಾರಾವಾಹಿಯ ಚಿತ್ರೀಕರಣವಾಗುತ್ತಿದೆ. ಗ್ರೀನ್ ಆ್ಯಪಲ… ಸ್ಟುಡಿಯೋಸ್ ‘ಮತ್ತೆ ವಸಂತ’ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ. ಈ ಹಿಂದೆ ಪಲ್ಲವಿ - ಅನುಪಲ್ಲವಿ, ಮಿಲನ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಕಿರುತೆರೆಯ ಅನುಭವಿ ನಿರ್ದೇಶಕ ಮಧುಸೂದನ್, ’ಮತ್ತೆ ವಸಂತ’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!
ಕಿರುತೆಯಲ್ಲದೆ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ವಿವೇಕ್ ಸಿಂಹ, ವಸಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ಅಕ್ಷತಾ ದೇಶಪಾಂಡೆ, ಅಪರ್ಣಾ ಪಾತ್ರದಲ್ಲಿದ್ದಾರೆ. ಉಳಿದಂತೆ ಕೀರ್ತಿ ಬಾನು, ಸ್ಪಂಧನ, ಜಯದೇವ್, ಜಗದೀಶ್ ಮಲ್ನಾಡ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಮತ್ತೆ ವಸಂತ’ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಸ್ರ್ಟಾ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.