
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅಶ್ವಿನಿ ಗೌಡ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಅಶ್ವಿನಿ ಕಿರುತೆರೆ ವೀಕ್ಷಕರ ಮನಸ್ಸಿಗೆ ಸದಾ ಹತ್ತಿರವಾಗುತ್ತಾರೆ, ಹೀಗಾಗಿ ಅವರ ಕಮ್ ಬ್ಯಾಕ್ ವಿಚಾರವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
'ರಾಧೆ ಶ್ಯಾಮ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನನ್ನ ಹೊಸ ಪ್ರಾಜೆಕ್ಟ್. ನಿಮ್ಮ ಆಶೀರ್ವಾದ ಬೇಕಿದೆ'ಎಂದು ಪ್ರೋಮೋ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೆ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಇಂದು ಸಂಜೆ ( ಸೆಪ್ಟೆಂಬರ್ 6) 6.30 ಧಾರಾವಾಹಿ ಪ್ರಸಾರವಾಗಲಿದೆ.
ಶಿವ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ತಾನ್ವಿ ರಾವ್ ಹಾಗೂ ಅನೂಪ್ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಮಾ ದೇವಿ ಪಾತ್ರದಲ್ಲಿ ಅಶ್ವಿನಿ ಮಿಂಚಲಿದ್ದಾರೆ. ತನ್ನ ಸುತ್ತಲಿರುವ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಹೆಣ್ಣು, ತಪ್ಪು ಅಂತ ಬಂದರೆ ತನ್ನ ಸ್ವಂತ ಮಕ್ಕಳನ್ನು ಕ್ಷಮಿಸುವುದಿಲ್ಲ ಅಂತ ಗುಣವುಳ್ಳ ಪಾತ್ರ ಇದಾಗಿರುತ್ತದೆ. ಲವಲವಿಕೆ, ಕಾವೇರಿ ಹಾಗೂ ಮಹಾಪರ್ವ ಧಾರಾವಾಹಿಗಳಲ್ಲಿ ನಟಿಸಿರುವ ಅಶ್ವಿನಿ ಒಡೆಯಾ ಹಾಗೂ ರಾಮರಾಜ್ಯ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.