ರೋಹಿಣಿ ಸಿಂಧೂರಿ ಬಯೋಪಿಕ್‌ನಲ್ಲಿ ಬಿಗ್ ಬಾಸ್ ಅಕ್ಷತಾ ಪಾಂಡವಪುರ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಗೆ ಇಲ್ಲಿದೆ ಕ್ಲಾರಿಟಿ...
ಕರ್ನಾಟಕದ ರೆಬೆಲ್ ಆಫೀಸರ್, ಲೇಡಿ ಸಿಂಗಮ್ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಿನಿಮಾ ಮಾಡಬೇಕು ಎಂದು ಕನ್ನಡ ಚಿತ್ರರಂಗದಲ್ಲಿ ಆಗಾಗ ಕೇಳಿ ಬರುತ್ತಿತ್ತು. ಆದರೆ ಮೈಸೂರಿನಿಂದ ವರ್ಗಾವಣೆ ಆದ ನಂತರ ಇದರ ಬಗ್ಗೆ ಗಂಭೀರವಾಗಿ ಕೆಲವು ನಿರ್ದೇಶಕರು ಚಿಂತಿಸಿದ್ದಾರೆ. ನಿರ್ದೇಶಕ ಕೃಷ್ಣ ಸ್ವರ್ಣಚಂದ್ರ ಅವರು ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ರೋಹಿಣಿ ಸಿಂಧೂರಿ ಬಯೋಪಿಕ್‌ನಲ್ಲಿ ಯಾರು ತಾನೇ ಮಾಡಲ್ಲ ಅಂತ ಹೇಳುತ್ತಾರೆ? ನನಗೆ ಕೇಳಿ ಖುಷಿ ಆಯ್ತು. ಲೇಖಕಿ ಸಂಧ್ಯಾರಾಣಿ ಅವರು ರೋಹಿಣಿ ಬಯೋಪಿಕ್‌ಗೆ ನಾನು ಸೂಕ್ತ ಎಂದಾಗ ಖುಷಿಯಾಯ್ತು. ಅವರು ತಮ್ಮ ಕೆಲಸದಿಂದ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದಾರೆ. ಯಾರೋ ಏನೋ ಹೇಳುತ್ತಾರೆ ಎಂದು ನಮಗೆ ಅವರ ಮೇಲಿರುವ ಗೌರವ ಅಥವಾ ಅಭಿಪ್ರಾಯ ಬದಲಾಗುವುದಿಲ್ಲ' ಎಂದು ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮಾತನಾಡಿದ್ದಾರೆ.
'ಕೆಲವರು ರೋಹಿಣಿಗೆ ಅಹಂ ಇದೆ ಅಂತ ಹೇಳುತ್ತಾರೆ. ನಯವಾಗಿ ಮಾತನಾಡದೆ ಕೆಲಸ ಮಾಡುವುದಕ್ಕೆ ಈ ರೀತಿ ಜನರು ಮಾತನಾಡುತ್ತಾರೆ. ಬಯೋಪಿಕ್ ಮಾಡಲು ಎಲ್ಲವೂ ರೆಡಿಯಿದ್ದಾಗ ಮೇಲ್ನೋಟಕ್ಕೆ ನಟಿಸಲು ಆಗೋದಿಲ್ಲ. ವರ್ಷಾನುಗಟ್ಟಲೇ ಇದಕ್ಕೆಲ್ಲ ಸಮಯ ಬೇಕು. ನಡೆ ನುಡಿ ಬದಲಾಗಬೇಕು. ಇದರ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಬರುವವರೆಗೂ ನಾನು ಮಾಡುತ್ತೇನೆ ಎಂದು ಹೇಳಲಾರೆ' ಎಂದಿದ್ದಾರೆ ಅಕ್ಷತಾ.
ರೋಹಿಣಿ ಸಿಂಧೂರಿ ಪಾತ್ರದಲ್ಲಿ ಬಿಗ್ ಬಾಸ್ ಅಕ್ಷತಾ ಪಾಂಡವಪುರ!
'ಪಿಂಕಿ ಎಲ್ಲಿ?' ಚಿತ್ರಕ್ಕೆ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿರುವ ಅಕ್ಷತಾ ಪಾಂಡವಪುರ ಸದ್ಯ ಮದರ್‌ವುಡ್‌ನ ಎಂಜಾಯ್ ಮಾಡುತ್ತಿದ್ದಾರೆ.