
'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ. ಅಷ್ಟಕ್ಕೂ ಪುಟಾಣಿಗೆ ಧ್ರುತಿ ಎಂದು ಹೆಸರಿಡಲು ಕಾರಣ, ಪುನೀತ್ ರಾಜ್‌ಕುಮಾರ್ ಮೇಲಿನ ಪ್ರೀತಿ. ಹೌದು. ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳ ಹೆಸರು ಕೂಡ ಧ್ರುತಿ. 2021ರ ಅಕ್ಟೋಬರ್‌ನಲ್ಲಿ ಹುಟ್ಟಿರೋ ಈ ಪುಟಾಣಿಗೆ ಈಗ ಹತ್ತಿರ ಹತ್ತಿರ ಎರಡು ವರ್ಷ.
ಈಗ ಮಗಳಿವೆ ಹೇರ್ಕಟ್ (Haircut) ಮಾಡಿಸೋ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ತರ್ಲೆ ಮರಿ ಎಂದು ಶೀರ್ಷಿಕೆ ಕೊಟ್ಟಿರುವ ಅಮೃತಾ ಅವರು, ಪತಿಯ ಜೊತೆ ಮಕ್ಕಳ ಹೇರ್ ಸಲೂನ್ಗೆ ಹೋಗಿದ್ದಾರೆ. ಹೇರ್ಕಟ್ಗೆ ಸಪೋರ್ಟ್ ಮಾಡುತ್ತಾಳೋ, ಇಲ್ಲವೋ ಎಂಬ ಅಳುಕಿನಲ್ಲಿಯೇ ನಟಿ ಹೋಗಿದ್ದಾರೆ. ಸಲೂನ್ನಲ್ಲಿ ಇರುವ ವಿವಿಧ ಆಟಿಕೆಗಳನ್ನು ನೋಡಿ ಖುಷಿ ಪಟ್ಟಿರುವ ಪುಟಾಣಿ ಧ್ರುತಿ, ಅಲ್ಲಿಗೆ ತುಂಟಾಟದಲ್ಲಿ ತೊಡಗಿರುವುದನ್ನು ನೋಡಬಹುದು. ನಂತರ ಹೇರ್ ಕಟ್ ಮಾಡಿಸಿಕೊಳ್ಳುವಾಗಲೂ ತರ್ಲೆ ಮಾಡಿದ್ದಾರೆ. ಮೊದಮೊದಲಿಗೆ ಹೇರ್ಕಟ್ ಮಾಡಿಸಿಕೊಳ್ಳುವಾಗ ಸಾಮಾನ್ಯವಾದ ಮಕ್ಕಳಂತೆಯೇ ಕಣ್ಣೀರು ಹಾಕಿದ್ದಾಳೆ. ನಂತರ ಎಂಜಾಯ್ ಮಾಡಿದ್ದಾಳೆ. ಬಾಬ್ ಕಟ್ ಮಾಡಿಸಿಕೊಂಡ ಖುಷಿಯಲ್ಲಿ ಧ್ರುತಿ ನಗುವುದನ್ನು ಕಾಣಬಹುದು. ಹೇರ್ಕಟ್ ಆದ್ಮೇಲೆ ನಮ್ಮ ಮುದ್ದುಗೊಂಬೆ ಚೆಂದ ಕಾಣಿಸ್ತಾಳೆ ಎಂದಿರೋ ರಾಘವೇಂದ್ರ (Raghavendra) ಅವರು ಇವಳ ಮೇಲೆ ಯಾರ ದೃಷ್ಟಿನೂ ಬೀಳದಿರಲಿ ಎಂದಿದ್ದಾರೆ.
ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಉಫ್ ನಿದ್ದೆಗೆಡಿಸ್ತೀರಾ ಎಂದ ಫ್ಯಾನ್ಸ್
ಹೇರ್ ಕಟ್ ಆದ್ಮೇಲೆ ರಾಘವೇಂದ್ರ ಅವರ ಮನೆಗೆ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ರಾಘವೇಂದ್ರ ಅವರ ಅಮ್ಮ ಹಾಗೂ ಇತರರು ಮಗುವನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಎಷ್ಟು ಮುದ್ದಾಗಿ ಕಾಣುತ್ತಾಳೆ ಎಂದಿದ್ದಾರೆ. ಹೇರ್ ಕಟ್ ಮಾಡಿಸುವುದನ್ನು ಮೊದಲೇ ತಿಳಿಸಿರಲಿಲ್ಲ ಎಂದಿದ್ದ ರಾಘವೇಂದ್ರ ಅವರು ಮನೆಯಲ್ಲಿ ಎಲ್ಲರ ರಿಯಾಕ್ಷನ್ ಹೇಗಿರುತ್ತದೆ ನೋಡೋಣ ಎಂದಿದ್ದರು. ಅದರಂತೆಯೇ ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ.
ಇನ್ನು ಅಮೃತಾ ಅವರ ಕುರಿತು ಹೇಳುವುದಾದರೆ ಕುಲವಧು (Kulavadhu) ಮೂಲಕ ಖ್ಯಾತಿ ಪಡೆದಿದ್ದಾರೆ ಈ ನಟಿ. ತಮ್ಮ ಅದ್ಭುತ ನಟನೆ ಮೂಲಕ ಅದರಲ್ಲಿಯೂ ಹೆಚ್ಚಾಗಿ ನೆಗೆಟಿವ್ ರೋಲ್ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ತಮ್ಮ ಮಗಳ ಜೊತೆಗಿನ ಫೋಟೋಗಳನ್ನು ಸಾಮಾಜಿ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಮ್ಯಾಚಿಂಗ್ ಬಟ್ಟೆ ತೊಟ್ಟು ಗಮನ ಸೆಳೆಯುತ್ತಾರೆ. ಸದ್ಯ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಸಾಧನಾ ಪಾತ್ರ ನಿರ್ವಸುತ್ತಿದ್ದಾರೆ. ತಾವು ವಿಲನ್ ರೋಲ್ ಮಾಡುತ್ತಿರುವುದಕ್ಕೆ ಖುಷಿ ಪಡೋ ಅಮೃತಾ ಅವರು, ವಿಲನ್ ಪಾತ್ರ ನೋಡಿ ಜನ ಬೈದುಕೊಂಡೆ ಇವರ ಅಭಿನಯ ಚೆನ್ನಾಗಿದೆ ಎನ್ನುತ್ತಾರೆ.
ರಿಯಲ್ ಪತ್ನಿಯರ ಜೊತೆ ಹಬ್ಬದ ಮೂಡಲ್ಲಿ 'ಸತ್ಯ' ಸೀರಿಯಲ್ ಕಾರ್ತಿಕ್, ಬಾಮೈದ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.