ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್​: ಉಫ್​ ನಿದ್ದೆಗೆಡಿಸ್ತೀರಾ ಎಂದ ಫ್ಯಾನ್ಸ್​

By Suvarna News  |  First Published Aug 28, 2023, 8:15 PM IST

ಸದಾ ಒಂದಿಲ್ಲೊಂದು ರೀಲ್ಸ್​, ಫೋಟೋ ಮಾಡುವ ಮೂಲಕ ಫ್ಯಾನ್ಸ್​ ಗಮನ ಸೆಳೆಯುತ್ತಿರುವ ನಟಿ ನಿವೇದಿತಾ ಗೌಡ ಇದೀಗ ಹೊಸ ಹೊಸ ಔಟ್​ಫಿಟ್​ನಿಂದ ಕಂಗೊಳಿಸುತ್ತಿದ್ದಾರೆ.
 


ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್ ಆಗಿರುವ ಬಿಗ್​ಬಾಸ್​ ಸ್ಪರ್ಧಿ ನಿವೇದಿತಾ ಗೌಡ, ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡುತ್ತಿರುತ್ತಾರೆ.  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.     ಬಾರ್ಬಿ ಡಾಲ್ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ಹೊಸಹೊಸ ಬಟ್ಟೆ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ ನಿಮ್ಮಿ. ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ನೀವು ಹೀಗೆಲ್ಲಾ ವಿಡಿಯೋ ಹಾಕ್ತಿದ್ರೆ ನಮಗೆ ನಿದ್ದೆ ಬರಲ್ಲ ಎಂದು ಯುವಕರು ಕಮೆಂಟ್​ ಮಾಡ್ತಿದ್ದಾರೆ. ನಿಮ್ಮ ಫೋಟೋ , ವಿಡಿಯೋ ಕ್ಲಿಪ್ ನೋಡದೆ ಮನಸ್ಸಿಗೆ ನೆಮ್ಮದಿ ಇರಲ್ಲ ನಿವೇದಿತಾ .. ಬಾಂಬ್ ನೀವು ಏನೇ ಹೇಳಿ ಎಂದಿದ್ದರೆ, ಇನ್ನೋರ್ವ ಫ್ಯಾನ್​ ನಿಮ್ಮ ಬೆಳವಣಿಗೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ.

Tap to resize

Latest Videos

ಸಾಂಪ್ರದಾಯಿಕ ಬಟ್ಟೆಯಾಯ್ತು, ಈಗ ಪಾಪ್​ ಡ್ಯಾನ್ಸ​ಲ್ಲಿ ನಿವೇದಿತಾ ಗೌಡ ರೀಲ್ಸ್​- ಬಾಕಿ ಏನಿದೆ ಎಂದ ಫ್ಯಾನ್ಸ್​!

ಕಳೆದ ಆಗಸ್ಟ್​ 15ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಹೊಸ ಕಾನ್​ಸೆಪ್ಟ್​ನಲ್ಲಿ ವಿಡಿಯೋ ಮಾಡೋಣ ಅಂದುಕೊಂಡಿದ್ದೇನೆ ಎಂದು ಎರಡು ದಿನಗಳ ಹಿಂದೆ ವಿಡಿಯೋ ಮೂಲಕ ತಿಳಿಸಿದ್ದ  ನಿವೇದಿತಾ ಗೌಡ, ಅದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​  ಮಾಡಿಕೊಂಡಿದ್ದರು. ಹಲವಾರು ರೀತಿಯ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಡ್ರೆಸ್​ನೊಂದಿಗೆ ಕಂಗೊಳಿಸಿದ್ದ ನಟಿ ನನಗೆ ಈಗ  ಯಾವ ರೀತಿ ಫೀಲ್​ ಆಗ್ತಿದೆ ಎಂದರೆ 200 ಔಟ್​ಫಿಟ್​ ಹಾಕಿದ ಹಾಗೆ ಫೀಲ್​ ಆಗ್ತಿದೆ ಎಂದಿದ್ದರು. ಆಗಸ್ಟ್​ 15ಕ್ಕೆ ಯೂಟ್ಯೂಬ್​ನಲ್ಲಿ ಹೊಸ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಯೂಟ್ಯೂಬ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ವಂದೇ ಮಾತರಂ (Vande Mataram) ಹಾಡಿನ ಹಿನ್ನೆಲೆಯಲ್ಲಿ ನಟಿ ಕಂಗೊಳಿಸಿದ್ದರು. ಹಲವಾರು ರಾಜ್ಯಗಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಭಾರತದ ಸಂಪ್ರದಾಯವನ್ನು ಸಾರುವ ವಿಡಿಯೋ ಮಾಡಿದ್ದರು.  ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಇಂದಿಗೂ ಆ ವಿಡಿಯೋಕ್ಕೆ ಥಹರೇವಾಗಿ ಕಮೆಂಟ್​ಗಳ ಸುರಿಮಳೆಯಾಗಿತ್ತು. 

ಅದಾದ ಬಳಿಕ,  ಪಾಪ್​ ಹಾಡಿಗೆ ಡ್ಯಾನ್ಸ್​ ಮಾಡಿರುವ ನಿವೇದಿತಾ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಪಾಪ್​ ಡ್ರೆಸ್​ ಹಾಕಿಕೊಂಡು ಡ್ಯಾನ್ಸ್​ ಮಾಡಿದ್ದು, ಇದಕ್ಕೆ ಹಾರ್ಟ್​ ಎಮೋಜಿಗಳ ಸುರಿಮಳೆಯಾಗಿದೆ. ನೀವು ಏನು ಮಾಡಿದರೂ ಚೆನ್ನಾ ಎನ್ನುತ್ತಿದ್ದಾರೆ ಫ್ಯಾನ್ಸ್​. ಹಿನ್ನೆಲೆಯಲ್ಲಿ ಬೆಲೆ ಬಾಳುವ ಸಂಗೀತದ ಇನ್​ಸ್ಟ್ರುಮೆಂಟ್​ ಇರುವುದನ್ನು ನೋಡಿದ ಕಮೆಂಟಿಗರು, ನೀವು ಡ್ಯಾನ್ಸ್​ ಮಾಡುವ ಪರಿಗೆ ಅದನ್ನೆಲ್ಲಾ ಹಾಳು ಮಾಡಿಬಿಟ್ಟರೆ ಎನ್ನುವ ಭಯ ಎಂದು ಕಾಲೆಳೆದಿದ್ದರು.  ಇದರ ಜೊತೆಗೆ ಸ್ವೀಟ್​, ಹಾಟ್​, ಬಬ್ಲಿ... ಹೀಗೆ ಹಲವಾರು ಹೆಸರುಗಳಿಂದ ನಟಿಯನ್ನು ಕರೆದಿದ್ದರು. ಇದೀಗ ಮತ್ತೊಂದು ವಿಡಿಯೋದೊಂದಿಗೆ ನಟಿ ಕಾಣಿಸಿಕೊಂಡಿದ್ದಾರೆ. 
 

click me!