ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್​.. ಕಂಟ್ರೋಲ್​ ಅಂತಿದ್ದಾರೆ ಫ್ಯಾನ್ಸ್​!

Published : Dec 29, 2023, 09:39 PM IST
ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್​.. ಕಂಟ್ರೋಲ್​ ಅಂತಿದ್ದಾರೆ  ಫ್ಯಾನ್ಸ್​!

ಸಾರಾಂಶ

ಶ್ರೀರಸ್ತು ಶುಭಮಸ್ತು ಪೂರ್ಣಿ ಅರ್ಥಾತ್​ ಲಾವಣ್ಯ ಅವರು ರಿಯಲ್​ ಪತಿ ಶಶಿ ಜೊತೆ ಸಕತ್​ ರೊಮ್ಯಾನ್ಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗುತ್ತಿದೆ.  

ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೋ ನನ್ನನ್ನ... ಹಾಡಿಗೆ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಅರ್ಥಾತ್​ ಲಾವಣ್ಯ ಪತಿ ಶಶಿಯ ಜೊತೆ ರೊಮ್ಯಾನ್ಸ್​ ಮಾಡುವ ವಿಡಿಯೋ ವೈರಲ್​  ಆಗಿದ್ದು, ಅಭಿಮಾನಿಗಳು ಕಂಟ್ರೋಲ್​ ಕಂಟ್ರೋಲ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು  ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಕೆಲವು ವಾರಗಳಿಂದ ವಿವಿಧ ರೀತಿಯಲ್ಲಿ ಜೋಡಿ ನಂಬರ್‌ 1 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದೆ ಈ ಜೋಡಿ.

ಕೆಲ ದಿನಗಳ ಹಿಂದೆ ಶಶಿ ಮತ್ತು ಲಾವಣ್ಯ ದಂಪತಿ ಜೋಡಿ ನಂಬರ್​ 1  ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದರು. ನಂತರ ರಾಗಿ ಹೊಲದಲ್ಲಿ ಜೋಡಿ ಡ್ಯಾನ್ಸ್​ ಮಾಡಿತ್ತು.  ರಾಗಿ ಹೊಲದಾಗೆ ಕಾಲಿ ಗುಡಿಸಲು ಹಾಡಿಗೆ ಸಕತ್​ ರೊಮ್ಯಾಂಟಿಕ್​ ಮೂಡ್​ನಲ್ಲಿ ಜೋಡಿ ಕಂಡು ಬಂದಿತ್ತು. ಅಣ್ಣಯ್ಯ ಚಿತ್ರದ ಈ ಹಾಡಿಗೆ ಶಶಿ ಮತ್ತು ಲಾವಣ್ಯ ದಂಪತಿ ಹೆಜ್ಜೆ ಹಾಕಿದ್ದು, ಫ್ಯಾನ್ಸ್​ ಭೇಷ್​ ಭೇಷ್​ ಎಂದಿದ್ದರು. ಇದೀಗ ಈ ಜೋಡಿ ಸಕತ್​ ರೊಮ್ಯಾನ್ಸ್​ ಮಾಡಿದ್ದು, ಈ ರೊಮ್ಯಾನ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದರೆ, ಕೆಲವರು ಇಂಥದ್ದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೇಕಾ ಅಂತನೂ ಕೇಳ್ತಿದ್ದಾರೆ. ಮಕ್ಕಳು ಸೋಷಿಯಲ್​  ಮೀಡಿಯಾ ನೋಡುತ್ತಾರೆ. ದಯವಿಟ್ಟು ಇಷ್ಟು ಹಾಟ್​ ಆಗಿ ಕಾಣಿಸಿಕೊಳ್ಬೇಡಿ ಎಂದು ಕೆಲವರು ಹೇಳಿದರೆ, ಈ ಮಾತನ್ನು ಮೊದಲು ಎಲ್ಲಾ ಪ್ರದರ್ಶನ ಮಾಡುವ ನಟಿಯರಿಗೆ ಹೇಳಿ ಎಂದು ಶಶಿ-ಲಾವಣ್ಯ ಫ್ಯಾನ್ಸ್​ ಗರಂ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ದಯವಿಟ್ಟು ಕಂಟ್ರೋಲ್​ ಮಾಡಿಕೊಳ್ಳಿ ನಿಮ್ಮ ಪ್ರೀತಿನ್ನಾ ಎಂದು ಹಲವರು ಕಾಲೆಳೆಯುತ್ತಿದ್ದಾರೆ. 

'ರಾಗಿ ಹೊಲದಾಗೆ...' ಶ್ರೀರಸ್ತು ಶುಭಮಸ್ತು ಪೂರ್ಣಿಯ ರೊಮ್ಯಾನ್ಸ್​: ಶಶಿ-ಲಾವಣ್ಯ ಜೋಡಿಗೆ ಫ್ಯಾನ್ಸ್​ ಚಪ್ಪಾಳೆ

ಅಂದಹಾಗೆ   ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.  ಈ ಹಿಂದಿನ ಜೋಡಿ ನಂಬರ್​ 1 ಎಪಿಸೋಡ್​ನಲ್ಲಿ  ಜೀ ಕನ್ನಡ ವಾಹಿನಿ ಶಶಿ ಅವರಿಗೆ  ಅವರ ತಾಯಿಯ ಫೋಟೋವನ್ನೂ ಸೇರಿಸಿ ಫ್ಯಾಮಿಲಿ ಫೋಟೋವನ್ನು ಉಡುಗೊರೆಯಾಗಿ ನೀಡಿ ಸರ್​ಪ್ರೈಸ್​ ನೀಡಿತ್ತು. ತಮ್ಮ ನಿಧನರಾದ ತಾಯಿಯ ಸೀರೆಯನ್ನು ಪತ್ನಿಗೆ ಕೊಟ್ಟು ಸರ್​ಪ್ರೈಸ್​ ಮಾಡಿದ್ದರು. ಶಶಿ. ಇದೇ ವೇಳೆ, ಲಾವಣ್ಯ ಹುಟ್ಟಿನ ರಹಸ್ಯವನ್ನು ಅವರ ತಂದೆ ಬಿಚ್ಚಿಟ್ಟಿದ್ದರು. 

  ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಅದಕ್ಕೂ ಮೊದಲ ಎಪಿಸೋಡ್‌ಗಳಲ್ಲಿ ಶಶಿ-ಲಾವಣ್ಯ ಜೋಡಿ ತಮ್ಮ ಹಲವು ಪರ್ಸನಲ್‌ ವಿಷಯಗಳನ್ನು ಶೇರ್‌ ಮಾಡಿಕೊಂಡಿತ್ತು. ಮದುವೆ ಮತ್ತು ಫಸ್ಟ್​ನೈಟ್​ ಬಗ್ಗೆ ಶಶಿ ಅವರು ಮಾತನಾಡಿದ್ದರು.  ಫಸ್ಟ್ ನೈಟ್‌ನಲ್ಲಿ ಈಕೆಯ  ಕಸಿನ್ಸ್  ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು,  ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು.  ಅದೇ ರೀತಿ  ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ  ಬೇಸರ ವ್ಯಕ್ತಪಡಿಸಿದ್ದರು.  

ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!