ಆ್ಯಂಕರ್​ ಅಕುಲ್ ಬಾಲಾಜಿ ಕಂಡು ಅನುಶ್ರೀಗೆ ಏನೋ ಆಯ್ತಂತೆ! ಪಸಂದಾಗೈತೆ ಹಾಡಿಗೆ ಮೋಡಿ ಮಾಡಿದ ಜೋಡಿ

Published : Dec 29, 2023, 09:16 PM ISTUpdated : Dec 29, 2023, 09:17 PM IST
ಆ್ಯಂಕರ್​ ಅಕುಲ್ ಬಾಲಾಜಿ ಕಂಡು ಅನುಶ್ರೀಗೆ ಏನೋ ಆಯ್ತಂತೆ! ಪಸಂದಾಗೈತೆ ಹಾಡಿಗೆ ಮೋಡಿ ಮಾಡಿದ ಜೋಡಿ

ಸಾರಾಂಶ

ಪಸಂದಾಗೈತೆ ಹಾಡಿಗೆ ಆ್ಯಂಕರ್​ ಗಳಾದ ಅನುಶ್ರೀ ಮತ್ತು ಅಕುಲ್‌ ಬಾಲಾಜಿ ಸಕತ್‌ ಸ್ಟೆಪ್‌ ಹಾಕಿದ್ದಾರೆ. ವಿಡಿಯೋ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.   

ಆ್ಯಂಕರ್​ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್​ ಮಾಡುವಲ್ಲಿ ಅನುಶ್ರೀ ಸಕತ್​ ಫೇಮಸ್​.   ಮಂಗಳೂರು ಮೂಲದ ಅನುಶ್ರೀ, ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ETV ಯಲ್ಲಿ ಶುರು ಮಾಡಿದ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಇವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ತಂದು ಕೊಟ್ಟಿತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ‘ಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಈ ಚಿತ್ರದಲ್ಲಿ,  NAK ಮೀಡಿಯಾದಿಂದ Best debut Actress ಅವಾರ್ಡ್ ಪಡೆದರು. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ. 

ಇನ್ನು ಅಕುಲ್‌ ಬಾಲಾಜಿ ಕೂಡ ಆ್ಯಂಕರ್​ ನಿಂಗ್‌ನಲ್ಲಿ ಸಕತ್‌ ಫೇಮಸ್‌. ಅಗಥ, ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ತೆರೆಕಂಡ `ಮಿಲನ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿಕೊಟ್ಟಿರುವ ಅಕುಲ್‌ ಅವರು,  2008 ರಲ್ಲಿ ತೆರೆಕಂಡ `ಆತ್ಮೀಯ’ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ.  ವಾಸ್ತವ, ನೆರಮು, ಬನ್ನಿ, ಮೈನ, ಪ್ಯಾರ್ಗೆ ಆಗ್ಬಿಟ್ಟೈತೆ, ಲೂಸ್ಗಳು, ಕ್ರೇಜಿಸ್ಟಾರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್​ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...
 
ಅದೇ ಇನ್ನೊಂದೆಡೆ, ಹಿಂದೊಮ್ಮೆ  ಅನುಶ್ರೀ ಕೂಡ ತಮ್ಮ ನೆಚ್ಚಿನ ಆ್ಯಂಕರ್​  ಅಕುಲ್‌ ಎಂದು ಹೇಳಿದ್ದರು. ಇದೀಗ ಇಬ್ಬರೂ ಸೇರಿ : ಪಸಂದಾಗೈತೆ ಹಾಡಿಗೆ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. ಡ್ಯಾನ್ಸ್‌ ಮಾಡುವಲ್ಲಿ ಅನುಶ್ರೀ ಎತ್ತಿದ ಕೈ ಎಂದು ಈಗಾಗಲೇ ಟಿ.ವಿ ನೋಡುಗರಿಗೆ ತಿಳಿದದ್ದೇ. ಅದರೆ ಅಕುಲ್ ಕೂಡ ಶಾಸ್ತ್ರೀಯ ನೃತ್ಯ ಕಲಾವಿದರು ಎನ್ನುವುದು ಕೆಲವೇ ಮಂದಿಗೆ ತಿಳಿದಿದೆ. ಅವರು ತಮ್ಮ 16ನೇ ವಯಸ್ಸಿನಲ್ಲಿ  ಉಷಾ ದಾತಾರ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ. ನಂತರ ‘ನಾಟ್ಯ ಎಸ್ಟಿಮ್ ಡ್ಯಾನ್ಸ್ ಕಂಪೆನಿ’ಗೆ ಸೇರಿಕೊಂಡು ಖ್ಯಾತ ಕತಕ್‌ ಕಲಾವಿದೆ ಮಾಯಾ ರಾವ್ ಅವರಿಂದ ಕತಕ್ ನೃತ್ಯ ಕಲಿತಿದ್ದಾರೆ.  ಮಹೇಶ್ ದತ್ತಾಣಿ ಅವರಿಂದ ನಟನಾ ತರಬೇತಿ ಪಡೆದಿದ್ದಾರೆ. 

ಇದೀಗ ಇಬ್ಬರು ಆ್ಯಂಕರ್​  ಜೋಡಿ ಸಕತ್‌ ಸ್ಟೆಪ್‌ ಹಾಕಿದ್ದು, ಅದನ್ನು ಜೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ. ಅಕುಲ್ ಕಂಡಾಗ ಅನುಶ್ರೀಗೆ ಆಗೈತಂತೆ ಶ್ಯಾನೆ ಪಿರೂತಿ ಎನ್ನುವ ಶೀರ್ಷಿಕೆ ಕೊಟ್ಟು ಇದನ್ನು ಶೇರ್‌ ಮಾಡಿಕೊಂಡಿದೆ. ಇವರಿಬ್ಬರ ಸ್ಟೆಪ್‌ಗೆ ಫ್ಯಾನ್ಸ್‌ ಫಿದಾ ಆಗಿದೆ. ಹಾರ್ಟ್‌ ಇಮೋಜಿಗಳಿಂದ ಕಮೆಂಟ್‌ ಬಾಕ್ಸ್‌ ತುಂಬಿ ಹೋಗಿದೆ.

'ಯೇ ಮೆಮೊರಿ ಹೈ, ಕ್ಯಾ ಬೇಕಾಗ್ತಾ ಹೈ?' ಪಂಜಾಬ್​ ಗಾಯಕನ ಜೊತೆ ಏನಮ್ಮಾ ಅನುಶ್ರೀ ಇದು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?