Bigg Boss OTT ಸೋಷಿಯಲ್‌ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್‌ಗೌಡ ಒರಿಜಿನಲ್ ಹೆಸ್ರು ಬಹಿರಂಗ

Published : Aug 07, 2022, 05:12 PM IST
Bigg Boss OTT ಸೋಷಿಯಲ್‌ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್‌ಗೌಡ ಒರಿಜಿನಲ್ ಹೆಸ್ರು ಬಹಿರಂಗ

ಸಾರಾಂಶ

ಟಿಕ್‌ ಟಾಕ್‌ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್‌ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರ ಒರಿಜಿನಲ್ ಹೆಸರು ಬಹಿರಂಗವಾಗಿದೆ. ಹಾಗಾದ್ರೆ ಸೋನು ಗೌಡ ನಿಜವಾದ ಹೆಸರು ಏನು ಎನ್ನುವುದನ್ನು ತಿಳಿದುಕೊಳ್ಳಿ...

ಕನ್ನಡ ಜನಪ್ರಿಯ ಶೋ ಬಿಗ್‌ ಬಾಸ್ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ನಿನ್ನೆ (ಆ.06) ಅಧಿಕೃತವಾಗಿ ಬಿಗ್‌ಬಾಸ್‌ಗೆ ಚಾಲನೆ ಸಿಕ್ಕಿದೆ. ಇನ್ನು ಒಟ್ಟು 16 ಕಂಟೆಸ್ಟೆಂಟ್‌ಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ.

ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇನ್ನುಳಿಂದತೆ 15 ಸ್ಪರ್ಧಿಗಳುಸೋಷಿಯಲ್ ಮೀಡಿಯಾ, ಹಿರಿತೆರೆ-ಕಿರುತೆರೆ ಮೂಲದವರಾಗಿದ್ದಾರೆ. ಅದರಲ್ಲೂ ಎರಡನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಸೋಷಿಯಲ್ ಮೀಡಿಯಾ ಹುಡುಗಿ.  ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ.ಅಂತಾನೇ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಬೆಡಗಿಯ ಅಸಲಿ ಹೆಸರೇ ಬೇರೆ ಇದೆ.  

ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ; ಸೋನು ಶ್ರೀನಿವಾಸ್ ವಿರುದ್ಧ ಮುಗಿಬಿದ್ದ ನೆಟ್ಟಿಗರು

ಸೋನು ಗೌಡ ಅಸಲಿ ಹೆಸರು ಬಹಿರಂಗ
ಟಿಕ್ ಟಾಕ್‌, ರೀಲ್ಸ್‌ ಮೂಲಕ ಅಸಂಖ್ಯಾತ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಅವರ ಅಸಲಿ ಹೆಸರು ಬೇರೆನೇ ಇದೆ. ಬಹುತೇಕ ಅವರನ್ನ ಸೋನು ಶ್ರೀನಿವಾಸ್ ಗೌಡ ಅಂತಾನೇ ಕರೆಯುತ್ತಿದ್ರು. ಅಲ್ಲದೇ ಸ್ವತಃ ಅವರೇ ಎಲ್ಲೂ ತಮ್ಮ ನಿಜವಾದ ಹೆಸರು ರಿವಿಲ್ ಮಾಡಿರಲಿಲ್ಲ. ಇದೀಗ ಬಿಗ್‌ಬಾಸ್‌ ಪ್ರವೇಶ ಮಾಡುವ ವೇಳೆ ತಮ್ಮ ಅಸಲಿ ಹೆಸರು ಬಹಿರಂಗಪಡಿಸಿದ್ದಾರೆ.

ಹೌದು...  ಬಿಗ್‌ಬಾಸ್‌  ಮನೆಗೆ ಎರಡನೇ ಕಂಟೆಸ್ಟೆಂಟ್ ಆಗಿ ಪ್ರವೇಶ ಮಾಡಿರುವ ಸೋನು ಶ್ರೀನಿವಾಸ್ ಗೌಡ, ಕಿಚ್ಚ ಸುದೀಪ್ ಮುಂದೆ ತಮ್ಮ ಒರಿನಿಲ್ ಹೆಸರು ಬಹಿರಂಗಒಡಿಸಿದ್ದಾರೆ. ಅಂದಹಾಗೇ ಸೋನು ಶ್ರೀನಿವಾಸ್ ಗೌಡ ಅವರ ನಿಜವಾದ ಹೆಸರು ಶಾಂಭವಿ ಶ್ರೀನಿವಾಸ ಗೌಡ.

ಯೆಸ್‌......ಸೋಷಿಯಲ್ ಮೀಡಿಯಾದಲ್ಲಿ ಶಾಂಭವಿ ಗೌಡ ಬದಲಾಗಿ ಸೋನು ಗೌಡ ಎಂದು ನೀಡಿದ್ದರಿಂದ ಅದೇ ಹೆಸರು ಫೇಮಸ್ ಆಯಿತು ಎಂದಿದ್ದಾರೆ. ಮೂಲತಃ ಮಂಡ್ಯದರಾದ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೀರೋಯಿನ್ ಆಗಬೇಕೆಂಬ ಕನಸು ಹೊತ್ತುಕೊಂಡಿದ್ದ ಶಾಂಭವಿ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದಾರೆ.

ಸೋಷಿಯಲ್‌ ಮೀಡಿಯಾ ಬೆಡಗಿಗೆ ಕಿಡಿ
ಸೋಷಿಯಲ್ ಮೀಡಿಯಾ ಮೂಲಕವೇ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್‌ ಗೌಡಗೆ ಇದೀಗ ಅದೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಬಿಗ್‌ಬಾಸ್‌ನಲ್ಲಿ ಸೋನುಗೌಡಗೆ ಅವಕಾಶ ನೀಡಿದ್ಯಾಕೆ? ಅರ್ಹತೆ ಏನಿದೆ? ಅಂತೆಲ್ಲಾ ಕಮೆಂಟ್ಸ್‌ಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಇತ್ತೀಚೆಗೆ ಸೋನು ಗೌಡ ಅವರ ಅಶ್ಲೀಲ ಚಿತ್ರಗಳು ವೈರಲ್ ಆಗಿರುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ-ಬಿಸಿ ಚರ್ಚೆಗಳು ಆಗುತ್ತಿವೆ.

ಸೋನು ಶ್ರೀನಿವಾಸ್ ಗೌಡ ಅವರನ್ನ ಮೊದಲ ವಾರದಲ್ಲಿ ಬಿಗ್‌ಬಾಸ್‌ ಮನೆಯಿಂದ ಎಲಿಮೀನೆಟ್ ಮಾಡಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?