ಆಕೆನೇ ಫಸ್ಟ್‌ ಆಕೆನೇ ಲಾಸ್ಟ್‌: ಡಿವೋರ್ಸ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸೋಮಣ್ಣ ಮಾಚಿಮಾಡ

By Vaishnavi Chandrashekar  |  First Published Aug 9, 2022, 3:14 PM IST

ಸದಾ ನಗು ನಗುತ್ತಿರುವ ಸೋಮಣ್ಣ ಮಾಚಿಮಾಡ ಬಿಗ್ ಬಾಸ್‌ ಶೋನಲ್ಲಿ ಅಳುತ್ತಿರುವುದನ್ನು ನೋಡಿ ಬೇಸರ ಮಾಡಿಕೊಂಡ ನೆಟ್ಟಿಗರು....


ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಓಟಿಟಿ ಸೀಸನ್ 1ರಲ್ಲಿ ಕನ್ನಡ ಜನಪ್ರಿಯ ಪತ್ರಕರ್ತ ಸೋಮಣ್ಣ ಮಾಚಿಮಾಡ ಸ್ಪರ್ಧಿಸುತ್ತಿದ್ದಾರೆ. ಇಷ್ಟು ದಿನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದವರು ಈಗ ಅವರೇ ಸೆಲೆಬ್ರಿಟಿಯಾಗಿರುವುದನ್ನು ನೋಡುತ್ತಿರುವ ನೆಟ್ಟಿಗರು ಶಾಕ್ ಆಗಿದ್ದಾರೆ. ಮಾತಿನಲ್ಲಿ ನೇರ, ಮೃಧು ಸ್ವಭಾವದ ಸೋಮಣ್ಣ ಯಾರೊಂದಿಗೂ ತಮ್ಮ ಜೀವನದ ಪರ್ಸನಲ್ ವಿಚಾರವನ್ನು ಹಂಚಿಕೊಂಡಿರಲಿಲ್ಲ ಮೊದಲ ಬಾರಿಗೆ ಮದುವೆ, ಮಾಜಿ ಪತ್ನಿ ನೆನೆದು ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆ ಪ್ರವೇಶಿಸುವಾಗ ಸೋಮಣ್ಣ ನಾನು ಒಂಟಿ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರ ಪರ್ಸನಲ್ ಲೈಫ್‌ ಬಗ್ಗೆ ಅನೇಕರಿಗೆ ಪ್ರಶ್ನೆ ಇತ್ತು. ಮದ್ವೆ ಆಗಿಲ್ವಾ, ಆಗಿದ್ರೂ ಪತ್ನಿ ಜೊತೆಗಿಲ್ವಾ? ಇಷ್ಟೊಂದು ಸಣ್ಣ ಯಾಕಾಗಿದ್ದಾರೆ? ಸೋಮಣ್ಣ ಅವರ ಚಾರ್ಮ್‌ ಕಡಿಮೆಯಾಗಿದೆ...ಹೀಗೆ ಪ್ರತಿಯೊಬ್ಬರೂ ಕೇಳುತ್ತಿದ್ದ ಒಂದೊಂದು ಪ್ರಶ್ನೆಗೂ ಉತ್ತರಿಸಿದ್ದಾರೆ.

Tap to resize

Latest Videos

ತಾಯಿ ಸಾವಿಗೆ ನೀನೇ ಕಾರಣ; ಕಡ್ಡಿ ಮುರಿಯುವಂತೆ ಉತ್ತರ ಕೊಟ್ಟ Bigg Boss ಸ್ಫೂರ್ತಿ ಗೌಡ!

'ಎಲ್ಲರೂ ಬಂತು ಸಣ್ಣ ಸಣ್ಣ ಅಂತ ಕೇಳ್ತಾನೆ ಇದ್ದೀರಾ..ಯಾಕೆ ಗೊತ್ತ ನಾನು ಊಟನೇ ಮಾಡೋಲ್ಲ. ಊಟ ಸೇರುತ್ತಿರಲಿಲ್ಲ ಅಂತ ಊಟ ಬಿಟ್ಟುಬಿಟ್ಟೆ. ಕಳೆದ ಎರಡು ವರ್ಷಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳಿಂದ ಹೀಗೆ. ದುಡ್ಡಿದ್ದಾಗ ಸಂಜೆ ಯಾವುದಾದರೂ ಲೋಕಲ್ ಬಾರ್‌ಗೆ ಹೋಗೋದು ತಗೋಳೋದು ಬರೋದು' ಎಂದು ಸೋಮಣ್ಣ ಮಾತನಾಡಿದ್ದಾರೆ.

'ಫಸ್ಟ್‌ ಹಾಫ್‌ನಲ್ಲಿ ಈ ಕೋರ್ಟ್‌ ಪ್ರಸೀಜರ್‌ ಎಲ್ಲಾ ಇರುತ್ತೆ ಅಲ್ವಾ ಅದು ಕಾಂಪ್ಲಿಕೆಟೆಡ್‌ ಲೈಫ್‌ನಲ್ಲಿ ಹಾಗೆ ನಂದು. ಫಸ್ಟ್‌ ಹಾಫ್‌ ಕೋರ್ಟ್‌ ಅಂದ್ರೆ ಸೆಕೆಂಡ್ ಹಾಫ್‌ ಇಂಟರ್ವ್ಯೂ..ಇಲ್ಲ ಫಸ್ಟ್‌ ಇಂಟರ್ವ್ಯೂ ಅಂದ್ರೆ ಸೆಕೆಂಡ್ ಹಾಫ್ ಕೋರ್ಟ್‌ ಹೀಗಿತ್ತು ಜೀವನ. ನಾವಿಬ್ಬರೂ ಪರಸ್ಪರ ಒಪ್ಪಿಕೊಂಡು ನಿರ್ಧಾರ ಮಾಡಿ ಒಳ್ಳೆಯ ರೀತಿಯಲ್ಲಿ ದೂರ ಅಗಿರುವುದು, ಕಾರಣಗಳು ಹತ್ತಾರು ಇರಬಹುದು ಅವರವರಿಗೆ ಅವರದೇ ಕಾರಣಗಳು ಇರುತ್ತದೆ ನಂಗೆ ನಂದೇ ಕಾರಣ ಆಕೆಗೆ ಅವರದ್ದೇ ಕಾರಣಗಳಿತ್ತು. ಯಾರಿಗಾದರೂ ಹೇಳಬೇಕು ಅನ್ನೋ ಹಾಗಿಲ್ಲ ಅದಿಕ್ಕೆ ಕಾರಣ ಅವಶ್ಯಕತೆ ಇಲ್ಲ' ಎಂದು ಸೋಮಣ್ಣ ಹೇಳಿದ್ದಾರೆ.

8 ಸ್ಪರ್ಧಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ...ಸೋನು ಗೌಡ ಹೊರ ಹೋಗ್ಲಿ ಅಂತಿದ್ದಾರೆ ಒತ್ತಿ...ಒತ್ತಿ

'ಲೈಫಲ್ಲಿ ನನಗೆ ಅವರನ್ನು ಮರೆತು ಬದುಕುವುದಕ್ಕೆ ಆಗುತ್ತಿಲ್ಲ ಅದು ಸಾಧ್ಯವೂ ಇಲ್ಲ. ಆಕೆನೇ ಫಸ್ಟ್‌ ಆಕೆನೇ ಲಾಸ್ಟ್‌. ಹೆಂಡ್ತಿನೇ ಲಾಸ್ಟ್‌ ನನ್ನ ಜೀವನದಲ್ಲಿ. ಅವಳ ರೀತಿ ನನಗೆ ಜೀವನದಲ್ಲಿ ಯಾರೂ ಸಿಗುವುದಿಲ್ಲ. ಜೀವನದಲ್ಲಿ ಆಕೆನ ತುಂಬಾನೇ ನೋವಿಸಿಬಿಟ್ಟೆ ಅನಿಸುತ್ತದೆ. ಕೆಲಸ ಕೆಲಸ ಕೆಲಸ ಅನ್ಕೊಂಡು ಅವಳನ್ನ ದೂರ ಮಾಡಿದೆ. ನನ್ನ ತಂದೆ Armyನಲ್ಲಿ ಕೆಲಸ ಮಾಡುತ್ತಿದ್ದರು, ನಾನು ಅಲ್ಲಿದ್ದರೆ ನೀನು ಒಬ್ಬಳೆ ಇರಬೇಕಾಗುತ್ತದೆ. ನನಗೆ ಮೀಡಿಯಾ ಮುಖ್ಯ ನನ್ನ ಕೆಲಸ ನನಗೆ ಮುಖ್ಯ ಜೀವನ ಚೆನ್ನಾಗಿರಬೇಕು ಅಂತ ಕಷ್ಟ ಪಟ್ಟು ಬಂದೆ ಅದರೆ ಆಕೆ ಜೊತೆಗಿಲ್ಲ' ಎಂದಿದ್ದಾರೆ ಸೋಮಣ್ಣ.

'ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನ ಫೋನ್ ಮಾಡಿದೆ ಈ ರೀತಿ ಸೆಲೆಕ್ಟ್‌ ಆಗಿರುವ ಹೋಗ್ತಿದ್ದೀನಿ ಅಂತ ಅವಳಿಗೆ ಹೇಳಿದ ಮೇಲೆ ನನಗೆ ಸಮಾಧಾನ. ಆಯ್ತು ಹೋಗಿ ಬಾ ನನ್ನ ಆಶೀರ್ವಾದ ಇರುತ್ತೆ ನೀನು ಹೋಗಿ ಬಾ ಚೆನ್ನಾಗಿ ಆಡು ನೀನು ಒಳ್ಳೆಯವನು ನನಗೆ ಗೊತ್ತು ಅಂತ ಆಕೆ ಹೇಳಿ ಕಳುಹಿಸಿದ್ದಳು ಆದರೆ ಇವತ್ತಿಗೂ ನನಗೆ ಆ ಒಂದು ಕೊರಗು ಇದೆ ಇದೆಲ್ಲಾ ಆದ್ಮೇಲೆ ಸ್ನೇಹಿತರು ನನ್ನನ್ನು ದೂರ ಮಾಡುತ್ತಾರೆ ಕುಟುಂಬಸ್ಥರು ದೂರ ಮಾಡುತ್ತಾರೆ ಈ ಸಮಯದಲ್ಲಿ ನನಗೆ ಉಳಿದಿದ್ದು ಕೆಲಸ ಮಾತ್ರ. ಬೆಂಗಳೂರಿನಲ್ಲಿ ನಾನೊಬ್ಬನೆ ಬದುಕುತ್ತಿರುವುದು. ಬಿಗ್ ಬಾಸ್ ಮನೆಗೆ ಬರಲು ಕಾರಣ ಏನೆಂದರೆ ಎಲ್ಲರ ಜೊತೆ ಬದುಕಬೇಕು ಅಂತ. ಎಲ್ಲಾ ಕಲರ್‌ಫುಲ್‌ ಜೀವನ ನೋಡಬೇಕು ನಾನು. ಚಿಕ್ಕ ವಯಸ್ಸಿನಿಂದಲೂ ನನಗೆ ಹಾಗೆನೇ, ಅಪ್ಪನ ಪ್ರೀತಿ ಸಿಗಲಿಲ್ಲ ಅಮ್ಮನ ಪ್ರೀತಿ ಸಿಗಲಿಲ್ಲ...ನಾವೆಲ್ಲಾ ಒಟ್ಟಿಗೆ ಊಟ ಮಾಡಿದ್ದು ನೆನಪಿಲ್ಲ. 20 ವರ್ಷದ ಜರ್ನಿಗೆ ನಾನು ರಿಸೈನ್ ಮಾಡಿ ಬಂದಿದ್ದು ಯಾಕೆ ಅಂದ್ರೆ ಇಲ್ಲಿ ಒಳ್ಳೆ ಜನ ಸಿಗ್ತಾರೆ ಜೀವನ ಇದೆ' ಎಂದು ಸೋಮಣ್ಣ ಮಾತನಾಡಿದ್ದಾರೆ.

click me!