ಎಷ್ಟೋ ಜನರಿಗೆ ಕಾಫೀ, ಟೀ ಕುಡಿದು ಗೊತ್ತು ಅಷ್ಟೇ, ಮಾಡುವುದು ಹೇಗೆ, ಏನೇನು ಎಷ್ಟೆಷ್ಟು ಬೇಕು ಅಂತ ಗೊತ್ತಿಲ್ಲ. ಊಟ ಮಾಡಿ ಗೊತ್ತು, ಅಕ್ಕಿ ಮರದಲ್ಲಿ ಬೆಳೆಯುತ್ತೆ ಅಂದರೂ ನಂಬುವಂಥ ಪರಿಸ್ಥಿತಿ ಅವರದ್ದು. ಹೀಗಿರುವಾಗ ಸಿಟಿಯಲ್ಲಿ ಬೆಳೆದಿರುವ ಅಪ್ಪ-ಅಮ್ಮಂದಿರ ಅದೆಷ್ಟೋ ಮುದ್ದುಕಂದಮ್ಮಗಳಿಗೆ ದಿನನಿತ್ಯದ ಅದೆಷ್ಟೋ ಸಂಗತಿಗಳ ಜ್ಞಾನ ಇಲ್ಲವೇ ಇಲ್ಲ ಎನ್ನಬಹುದು.
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ನಡೆದ ಅವಾಂತರಗಳು, ಶಾಕಿಂಗ್ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ. 'Unseen Episodes'ಗಳು ಹಾಗೂ ಬಿಗ್ ಬಾಸ್ ಮನೆಯಲ್ಲಿನ ಕೆಲವು ಚಿಕ್ಕಪುಟ್ಟ ಘಟನೆಗಳು ಹೊರಬಂದು ಇದು ಟ್ರೋಲ್ ಪೇಜ್ ಗೆ ಸಖತ್ ಫುಡ್ ಎಂಬಂತಾಗಿದೆ. ಕೆಲವೊಂದು ಮಾತುಕತೆಗಳನ್ನು ನೋಡಿದರೆ, ನಗು ತಡೆದುಕೊಳ್ಳುವುದು ತುಂಬಾ ಕಷ್ಟ. ಸ್ನೇಹಿತ್ ಹಾಗು ನಮ್ರತಾ ಗೌಡ ನಡುವೆ ನಡೆದ ಮಾತುಕತೆಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ವಾಕ್ ಮಾಡಿಕೊಂಡು ನಮ್ರತಾ ಪಕ್ಕ ಪಾಸ್ ಆಗುತ್ತಿದ್ದಾನೆ. ಅಷ್ಟರಲ್ಲಿ ನಮ್ರತಾ ತಲೆಯಲ್ಲೊಂದು ಯೋಚನೆ ಬಂದಿದೆ. ಅಲ್ಲೇ ಕಂಡ ಸ್ನೇಹಿತ್‌ಗೆ "ನಿಂಗೆ ಕಾಫೀ ಮಾಡೋಕೆ ಬರುತ್ತಾ?" ಎಂದು ಕೇಳಿದ್ದಾಳೆ. ತಕ್ಷಣ ನಿಂತ ಸ್ನೇಹಿತ್ "ಟ್ರೈ ಮಾಡೋಣ" ಎಂದಿದ್ದಾನೆ. ಅದಕ್ಕೆ ನಮ್ರತಾ "ಸಕ್ಕರೆ, ಕಾಫೀ ಪುಡಿ ಮತ್ತು ಹಾಲು ಅಷ್ಟೇ ತಾನೇ ಬೇಕಾಗಿರೋದು" ಎಂದು ಹೇಳಿದ್ದಾಳೆ. ತಕ್ಷಣ ಸ್ನೇಹಿತ್ ಮತ್ತೆ ಹೇಳಿದ್ದನ್ನೇ ರಿಪೀಟ್ ಮಾಡುತ್ತ "ಟ್ರೈ ಮಾಡೋಣ' ಎಂದಿದ್ದಾನೆ. ಆಗ ನಮ್ರತಾಗೆ ಯೋಚನೆ ಬಂದಿದೆ, ಸಕ್ಕರೆ ಅಲ್ಲಿ ಇಲ್ಲ.. ಅಂತ.
ನಮ್ರತಾ ಸ್ನೇಹಿತ್‌ಗೆ "ಬಟ್ ಅಲ್ಲಿ ಸಕ್ಕರೆ ಇಲ್ಲ.." ಎಂದಿದ್ದಾಳೆ. ತಕ್ಷಣ ಸ್ನೇಹಿತ್ ತಮಗೆ ಪಕ್ಕಾ ಕಾಫೀ ಮಾಡಲು ಬರುತ್ತೆ ಎನ್ನುವವರಂತೆ ಕಾನ್ಫಿಡೆಂಟಾಗಿ "ಕಾಫೀಗೆ ಸಕ್ಕರೆ ಯಾಕೆ ಬೇಕು" ಎಂದಿದ್ದಾನೆ. ಅದನ್ನು ಕೇಳಿದ ನಮ್ರತಾ ಫುಲ್ ಶಾಕ್ ಆಗುತ್ತ "ವಾಟ್..!! " ಎಂದು ಕೇಳಿ ಸ್ನೇಹಿತ್ ನೋಡುವಷ್ಟರಲ್ಲಿ 'ಎಲ್ಲಿ ಫ್ಲೈಟ್ ಲೇಟ್ ಆಗಿಬಿಡುತ್ತೋ' ಎನ್ನುವಂತೆ ಹೆಜ್ಜೆ ಹಾಕುತ್ತಿದ್ದ ಸ್ನೇಹಿತ್, ತಾನೇನು ಹೇಳಿದೆ ಅಂತಾಗಲೀ, ನಮ್ರತಾ ಶಾಕ್ ಆಗಿದ್ದನ್ನಾಗಲೀ ಗಮನಿಸದೇ ಹೊರಟು ಹೋಗಿದ್ದಾನೆ. ಅವರಿಬ್ಬರ ಈ ಸಂಭಾಷಣೆ 'ವಿಡಿಯೋ ಚೂರು' ಇದೀಗ ಭಾರೀ ಟ್ರೊಲ್ ಅಗಿದ್ದು, ಜನರು ಬಿದ್ದುಬಿದ್ದು ನಗುವಂತಾಗಿದೆ.
Jyothi Rai: ನನಗೆ ಕನ್ನಡಿಗರು 'ಹರ್ಟ್ ಮಾಡಿದ್ದಾರೆ, ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ!
ಎಷ್ಟೋ ಜನರಿಗೆ ಕಾಫೀ, ಟೀ ಕುಡಿದು ಗೊತ್ತು ಅಷ್ಟೇ, ಮಾಡುವುದು ಹೇಗೆ, ಏನೇನು ಎಷ್ಟೆಷ್ಟು ಬೇಕು ಅಂತ ಗೊತ್ತಿಲ್ಲ. ಊಟ ಮಾಡಿ ಗೊತ್ತು, ಅಕ್ಕಿ ಮರದಲ್ಲಿ ಬೆಳೆಯುತ್ತೆ ಅಂದರೂ ನಂಬುವಂಥ ಪರಿಸ್ಥಿತಿ ಅವರದ್ದು. ಹೀಗಿರುವಾಗ ಸಿಟಿಯಲ್ಲಿ ಬೆಳೆದಿರುವ ಅಪ್ಪ-ಅಮ್ಮಂದಿರ ಅದೆಷ್ಟೋ ಮುದ್ದುಕಂದಮ್ಮಗಳಿಗೆ ದಿನನಿತ್ಯದ ಅದೆಷ್ಟೋ ಸಂಗತಿಗಳ ಜ್ಞಾನ ಇಲ್ಲವೇ ಇಲ್ಲ ಎನ್ನಬಹುದು. ಇದೂ ಕೂಡ ಅದೇ ಸಾಲಿಗೆ ಸೇರುವ ಕೇಸ್. ಇರಲಿ, ಇನ್ನೂ ಬಿಗ್ ಬಾಸ್ ಮನೆಯವರಿಂದ ಏನೇನು ನೋಡಬೇಕೋ, ದೇವರಿಗೇ ಗೊತ್ತು!
ವೀಕೆಂಡ್‌ನಲ್ಲಿ ಸುದೀಪ್ ಸರ್ ಬಂದ್ರು ನೋಡಿ, ನನ್ನ ಲೈಫ್ ಕಂಪ್ಲೀಟ್ ಬದಲಾಗಿಹೋಯ್ತು: ಡ್ರೋನ್ ಪ್ರತಾಪ್
ಅಂದಹಾಗೆ, ಬಿಗ್ ಬಾಸ್ ಏನಾಗುತ್ತಿದೆ ಎಂದು ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.