ನಿರೂಪಣೆ, ಗಾಯನಕ್ಕಾಗಿ ಗಂಡನಿಗೆ ಡಿವೋರ್ಸ್! ಕೊನೆಗೂ ಸತ್ಯ ಬಿಚ್ಚಿಟ್ಟ ಗಾಯಕಿ ಅಖಿಲಾ ಪಜಿಮಣ್ಣು

Published : Feb 25, 2026, 06:11 PM IST
AKHILA PAJIMANNU

ಸಾರಾಂಶ

Akhila Pajimannu: ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು ಇದೀಗ ಮೊದಲ ಬಾರಿಗೆ ತಾವು ಧನಂಜಯ್ ಶರ್ಮಾ ಅವರಿಂದ ಯಾಕೆ ವಿಚ್ಚೇದನ ಪಡೆದುಕೊಂಡಿದ್ದು ಎನ್ನುವ ಕುರಿತು ಸತ್ಯ ರಿವೀಲ್ ಮಾಡಿದ್ದಾರೆ. ಆ ಮೂಲಕ ತಮ್ಮ ವಿರುದ್ಧ ಬಂದಿದ್ದ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. 

ಕೊನೆಗೂ ಡಿವೋರ್ಸ್ ಸತ್ಯ ಬಿಚ್ಚಿಟ್ಟ ಗಾಯಕಿ ಅಖಿಲಾ ಪಜಿಮಣ್ಣು

ಕನ್ನಡ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಅಖಿಲಾ ಪಜಿಮಣ್ಣು. ಇತ್ತೀಚಿನ ತಮ್ಮ ಡಿವೋರ್ಸ್ ವಿಷಯದ ಮೂಲಕ ಸುದ್ದಿಯಲ್ಲಿದ್ದರು. ಗಾಯಕಿ ವಿವಿಧ ಶೋಗಳಲ್ಲಿ, ನಿರೂಪಣೆಗಳಲ್ಲಿ ಅವಕಾಶ ಪಡೆಯುವುದಕ್ಕಾಗಿಯೇ ಡಿವೋರ್ಸ್ ತೆಗೆದುಕೊಂಡರು ಎನ್ನುವ ಗಾಳಿ ಸುದ್ದಿ ಜೋರಾಗಿಯೇ ಹರಡಿತ್ತು. ಇದೀಗ ಮೊದಲ ಬಾರಿ ಗಾಯಕಿ ತಮ್ಮ ವಿಚ್ಚೇದನದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನು?

ಗಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು (Akhila Pajimannu) ಕನ್ನಡ ಕೋಗಿಲೆ (Kannada Kogile) ಸೀಸನ್​ 1 ಹಾಗೂ ಸೀಸನ್​ 2 ರನ್ನರ್​ ಅಪ್​ ಆಗಿದ್ದರು. ಇವರ ಮಧುರ ಕಂಠಕ್ಕೆ ಸಾವಿರಾರು ಅಭಿಮಾನಿಗಳು ಸಹ ಇದ್ದಾರೆ. ಅಖಿಲಾ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಜೊತೆಗೆ 021ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2025ರ ಜೂನ್ ತಿಂಗಳಲ್ಲಿ ಪುತ್ತೂರು ಕೋರ್ಟ್‌ನಲ್ಲಿ ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಬಳಿಕ ಡಿವೋರ್ಸ್ ಪಡೆದಿದ್ದರು. ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಆ ಸಮಯದಲ್ಲಿ ತಿಳಿಸಿದ್ದರು. ಆದರೆ ಮದುವೆಯಾಗಿ ಕೇವಲ ಮೂರೇ ವರ್ಷಕ್ಕೆ ಯಾಕೆ ಡಿವೋರ್ಸ್ ಪಡೆದರು ಎನ್ನುವ ಮಾಹಿತಿಯನ್ನು ಬಿಟ್ಟು ಕೊಟ್ಟಿರಲಿಲ್ಲ.

ಇದೀಗ ಚಿಲ್ಲಿಂಗ್ ವಿತ್ ಚಿಲಿಂಬಿ ಪಾಡ್ ಕಾಸ್ಟ್ ನಲ್ಲಿ ಅಖಿಲಾ ತಾವು ಡಿವೋರ್ಸ್ ಪಡೆದ ಕಾರಣವನ್ನು ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ. ಡಿವೋರ್ಸ್ ವಿಷಯವಾಗಿ ಶರಣ್ ಚಿಲಿಂಬಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲಾ, ನಾವು ಡಿವೋರ್ಸ್ ವಿಷ್ಯವನ್ನು ಪಬ್ಲಿಕ್ ಮಾಡೋದಕ್ಕೆ ಇಷ್ಟಪಡಲಿಲ್ಲ, ಆದರೆ ಆ ವಿಷಯ ಹೇಗೋ ಲೀಕ್ ಆಯ್ತು. ನಾನು ಕನ್ಸರ್ಟ್ ಗಳಲ್ಲಿ ಭಾಗವಹಿಸಲು ನಿರೂಪಣೆಗೆ ಗಂಡ ಬಿಡದೇ ಇರುವ ಕಾರಣ ಡಿವೋರ್ಸ್ ಪಡೆದಿರುವುದಾಗಿ ಎಲ್ಲೆಡೆ ಸುದ್ದಿ ಹಬ್ಬಿತ್ತು. ಆದರೆ, ನಿಜವಾದ ಕಾರಣ ಅದು ಅಲ್ಲ. ನಾವಿಬ್ಬರು ಒಂದೂವರೆ ವರ್ಷದಿಂದ ಅಡ್ಜಸ್ಟ್ ಮಾಡಿಕೊಂಡು ಹೊಂದಿಕೊಂಡು ಹೋಗಲು ಪ್ರಯತ್ನಿಸಿದೆವು, ಆದರೆ ಅದು ಸಾಧ್ಯ ಆಗಲಿಲ್ಲ. ಅಮೆರಿಕಾದಿಂದ ಮತ್ತೆ ಊರಿಗೆ ಬಂದು ಇಲ್ಲಿ ಮೂರು ತಿಂಗಳು ಮತ್ತೆ ಹೊಂದಾಣಿಕೆಗಾಗಿ ಶ್ರಮಿಸಿದೆವು. ಆದರೆ ಅದು ಕೂಡ ಸಾಧ್ಯವಾಗದೇ ಇದ್ದಾಗ, ಡಿವೋರ್ಸ್ ಪಡೆಯುವ ನಿರ್ಧಾರ ಮಾಡಿದೆವು. ಇಬ್ಬರಿಗೂ ಅವರದ್ದೇ ಆದ ಜೀವನ ಇದೆ. ಇಬ್ಬರಿಗೂ ಮಾನಸಿಕ ಶಾಂತಿ ಮುಖ್ಯ. ನಾವು ಪಟ್ಟ ಕಷ್ಟ ದೊಡ್ಡದು, ಮತ್ತೆಲ್ಲಾ ಸೆಕೆಂಡರಿ. ಹಾಗಾಗಿ ಯೋಚನೆ ಮಾಡಿ ವಿಚ್ಚೇದನ ಪಡೆಯುವ ನಿರ್ಧಾರ ಮಾಡಿರುವುದಾಗಿ ಅಖಿಲಾ ಪಜಿಮಣ್ಣು ತಿಳಿಸಿದ್ದಾರೆ. ಆ ಮೂಲಕ ಎಲ್ಲಾ ರೂಮರ್ಸ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

 

 

ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಲಿಲ್ ಚಾಂಪ್ಸ್‌ನಲ್ಲಿ ಸ್ಪರ್ಧಿಸಿದ್ದರು ಇದರ ವಿಜೇತರಾಗಿದ್ದ ಆಕೆ, 2019 ರಲ್ಲಿ, ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ಭಾಗವಹಿಸಿ, 1 ನೇ ರನ್ನರ್ ಅಪ್ ಆಗಿದ್ದರು. ರಿಯಾಲಿಟಿ ಶೋ ಯಶಸ್ಸಿನ ಬಳಿಕ ಕೆಲ ಕಾಲ ಮಾಯವಾಗಿದ್ದ ಅಖಿಲಾ ಪಜಿಮಣ್ಣು, ಬಳಿಕ ಮುಂಜಾನೆ ರಾಗ, ಸುವರ್ಣ ಸಂಕಲ್ಪ ಅಮೃತ ಗಳಿಗೆ ಕಾಯ್ರಕಮಗಳಲ್ಲಿ ನಿರೂಪಣೆ ಮಾಡಿದ್ದರು. ಇದೀಗ ಹಲವು ಕನ್ಸರ್ಟ್ ನೀಡುತ್ತಿದ್ದಾರೆ ಗಾಯಕಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ರೋಚಕ ಎಪಿಸೋಡ್​: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್​- ಹಾರಿ ಹಾರಿ ಬಿದ್ದ ರೌಡಿಗಳು!
ಮಹಿಳೆ ಜೊತೆ ಫ್ಲರ್ಟ್‌ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು