ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!

Published : Feb 24, 2026, 09:16 PM IST
annayya serial

ಸಾರಾಂಶ

ಕನ್ನಡದ ಜನಪ್ರಿಯ ಸೀರಿಯಲ್ ಅಣ್ಣಯ್ಯದ (Annayya serial) ನಾಯಕಿ ಪಾರು ಅಂದರೆ ನಿಶಾ ರವಿಕೃಷ್ಣನ್ ಬ್ರೇಕಪ್ ಸ್ಟೇಟಸ್ ಹಾಕ್ಕೊಂಡಿದ್ದಾರೆ. ಇದರ ಹಿಂದಿನ ಕತೆ ಕೇಳಿದ್ರೆ ಕಣ್ಣೀರಾಗ್ತೀರ!

ಅಣ್ಣಯ್ಯ ಸೀರಿಯಲ್ ಅನ್ನು ಟಿವಿ ವೀಕ್ಷಕರು ಒಂದಿಷ್ಟು ಕಾರಣಕ್ಕೆ ನೋಡ್ತಾರೆ. ಅದಕ್ಕೊಂದು ಮುಖ್ಯವಾದ ಕಾರಣ ಇದೆ. ಅದೇನು ಅಂತ ಕೊನೇಲಿ ಹೇಳ್ತೀನಿ. ಆದರೆ ಅದಕ್ಕೂ ಮೊದಲು ಒಂದು ಬ್ರೇಕಪ್ ಕಥೆ ಹೇಳಬೇಕಿದೆ. ಯಾರದ್ದಪ್ಪಾ ಅಂದರೆ, ಇನ್ಯಾರದ್ದು ನಮ್ ಅಣ್ಣಯ್ಯ ಸೀರಿಯಲ್ ಹೀರೋಯಿನ್ದು ಅನ್ನಕ್ಕಾಗುತ್ತಾ, ಆದರೂ ವಿಷಯ ಏನು ಅಂತ ಗೊತ್ತಿಲ್ಲ. ಅವರೇ ಹಾಕ್ಕೊಂಡ ಸ್ಟೇಟಸ್ ಒಂದು ಹಲವರ ತಲೆಗೆ ಹುಳ ಬಿಟ್ಟಿದೆ. ಏನಿರಬಹುದು, ಯಾರ ಜೊತೆಗೆ ಬ್ರೇಕಪ್ ಆಗಿರಬಹುದು, ಪಾರು ರಿಯಲ್ ಲೈಫಲ್ಲಿ ಲವ್ವಲ್ಲಿ ಬಿದ್ದಿದ್ದರಾ, ಅವರು ಅಣ್ಣಯ್ಯ ಸೀರಿಯಲ್ ಹೀರೋ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ವೀಡಿಯೋಗಳು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತವೆ. ಅವರು ಈಗ ಬ್ರೇಕಪ್ ಸ್ಟೇಟಸ್ ಹಾಕಿರೋದಕ್ಕೂ ಇದಕ್ಕೂ ಸಂಬಂಧ ಇದೆಯಾ..

2024ರ ಆಗಸ್ಟ್ನಲ್ಲಿ ಶುರುವಾಗಿರುವ 'ಅಣ್ಣಯ್ಯ' ಸೀರಿಯಲ್ನ ಕಥೆ ನಾಲ್ವರು ತಂಗಿಯರ ಮುದ್ದಿನ ಅಣ್ಣನ ಕಥೆ ಈ ಸೀರಿಯಲ್ನ ಹೈಲೈಟ್. ಆದರೆ ಈಗ ಅಣ್ಣನ ಕಥೆಯೊಂದಿಗೆ ಪಾರುವಿನ ಪ್ರೀತಿಯ ಕತೆಯೂ ಸೇರಿಕೊಂಡು ಸೀರಿಯಲ್ಗೆ ಬೇರೇ ಕಳೆ ಬಂದಿದೆ.

ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರವು ವಿಶೇಷವಾಗಿದ್ದು, ಒಳ್ಳೊಳ್ಳೆ ಕಲಾವಿದರನ್ನ 'ಅಣ್ಣಯ್ಯ'ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ನುರಿತ ತಂಡ 'ಅಣ್ಣಯ್ಯ' ಧಾರಾವಾಹಿ ಇನ್ನೇನು ಕೆಲವೇ ಸಮಯದಲ್ಲಿ ಯಶಸ್ವಿ 500 ರ ಗಡಿ ಮುಟ್ಟುವಂತೆ ಮಾಡಿದೆ. ಟಿಆರ್ಪಿ ರೇಟಿಂಗ್ನಲ್ಲಿ ಟಾಪ್ 2 ಸ್ಥಾನಗಳಲ್ಲಿ ತನ್ನ ಸ್ಥಾನದಲ್ಲಿರುವ ಈ ಸೀರಿಯಲ್ ಅನ್ನು ಬಹಳ ಜನ ಕುತೂಹಲದಿಂದ ನೋಡ್ತಿದ್ದಾರೆ.

ನಿಶಾ ರವಿಕೃಷ್ಣನ್‌ ಬ್ರೇಕಪ್‌ ಸ್ಟೇಟಸ್

ಈಗ ವಿಷಯಕ್ಕೆ ಬರೋಣ. ಈ ಸೀರಿಯಲ್ನ ಟಿಆರ್ಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿರುವ ಪಾರು ಅರ್ಥಾತ್ ನಿಶಾ ರವಿಕೃಷ್ಣ ಅವರ ಬ್ರೇಕಪ್ ಸ್ಟೇಟಸ್ ಒಂದು ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿದೆ. ಪಾರು ಪ್ರೀತೀಲಿ ಬಿದ್ದಿದ್ರಾ, ಅಣ್ಣಯ್ಯ ಸೀರಿಯಲ್ ಹೀರೋ ವಿಕಾಶ್ ಜೊತೆಗಾ ಅಥವಾ ಬೇರೆ ಯಾರನ್ನಾದರೂ ಇಷ್ಟಪಡುತ್ತಿದ್ದರಾ ಅನ್ನೋ ಮಾತು ಕೇಳಿ ಬರ್ತಿದೆ.

ವಿಶೇಷ ಅಂದರೆ ಈ ಬ್ರೇಕಪ್ ಸ್ಟೇಟಸ್ನಲ್ಲಿ ಅವರು ಈ ಸೀರಿಯಲ್ನ ರತ್ನ ಪಾತ್ರಧಾರಿಗೆ ಟ್ಯಾಗ್ ಮಾಡಿದ್ದಾರೆ. ಅಷ್ಟಕ್ಕೂ ಇವರು ಶೇರ್ ಮಾಡಿರೋ ಸ್ಟೇಟಸ್ನಲ್ಲೊಂದು ವೀಡಿಯೋ ಇದೆ. ಅದರಲ್ಲಿ ಬ್ರೇಕಪ್ ಆಗಿರೋ ಹುಡುಗನೊಬ್ಬ ಸಿಕ್ಕಾಪಟ್ಟೆ ಬೇಜಾರಲ್ಲಿ ಹುಚ್ಚನಂತಾಗಿ ಗಿಟಾರ್ ನುಡಿಸೋದಕ್ಕೆ ಹೋಗ್ತಾರೆ ಫನ್ ವಿಷಯ ಅಂದರೆ ಅವನಿಗೆ ಗಿಟಾರ್ನಲ್ಲೂ 'ಐ ಲವ್ ಯೂ' ಅನ್ನೋದನ್ನಷ್ಟೇ ನುಡಿಸೋದಕ್ಕೆ ಬರೋದು. ಹುಡುಗೀನ ಇಂಪ್ರೆಸ್ ಮಾಡೋದಕ್ಕಾಗಿ ಅಷ್ಟನ್ನಷ್ಟೇ ಕಲಿತಿರ್ತಾನೆ. ಬ್ರೇಕಪ್ ಆದ ಬೇಜಾರಲ್ಲಿ ಯಾವ್ದಾದ್ರೂ ಸ್ಯಾಡ್ ಹಾಡು ನುಡಿಸೋಣ ಅಂದ್ರೆ ಅವ್ನಿಗೆ ಬರೋದು ಅದೊಂದು ರಾಗ ಆಗಿರೋ ಕಾರಣ ಐ ಲವ್ ಯೂ ಅನ್ನೋದನ್ನಷ್ಟೇ ನುಡಿಸೋದಕ್ಕಾಗುತ್ತೆ. ಇದರಿಂದ ಅವನ ಹುಚ್ಚು ಇನ್ನೂ ಜಾಸ್ತಿ ಆಗುತ್ತೆ.

ಈಗ ನಮ್ಮ ಮುಂದಿರೋ ಪ್ರಶ್ನೆ ಅಂದರೆ ಇದನ್ನು ನಿಶಾ ಅವರು ಯಾಕೆ ರತ್ನಾ ಅಂದರೆ ನಾಗಶ್ರೀ ಅವರಿಗೆ ಟ್ಯಾಗ್ ಮಾಡಿದ್ರು. ಇದರ ಹಿನ್ನೆಲೆಯಲ್ಲಿ ಅವರ ನಡುವೆ ಏನು ಇಂಟರೆಸ್ಟಿಂಗ್ ಮಾತುಕತೆ ನಡೆದಿರಬಹುದು. ನಿಜವಾಗಿ ಯಾರಿಗಾದರೂ ಬ್ರೇಕಪ್ ಆಗಿರಬಹುದಾ? ಸೀರಿಯಲ್ ಮೂಲಕ ಫ್ರೆಂಡ್ಸ್ ಆಗಿರೋ ಈ ಇಬ್ಬರು ಬ್ರೇಕಪ್ ಬಗ್ಗೆ ಏನಂದುಕೊಂಡಿದ್ದಾರೆ ಹೀಗೆಲ್ಲ ಏನೇನೋ ಪ್ರಶ್ನೆಗಳಿವೆ. ಇದಕ್ಕೆ ಉತ್ತರವನ್ನು ನಿಶಾ ಅವರಂತೂ ಹೇಳಲ್ಲ ಅಂತ ಗೊತ್ತಿದೆ. ಆದರೆ ಅವರು ಶೇರ್ ಮಾಡಿರೋ ವೀಡಿಯೋ ಫನ್ನಿ ಆಗಿತ್ತು. ಅವರು ಇದನ್ನು ಇನ್ಸ್ಟಾ ಸ್ಟೇಟಸ್ ಆಗಷ್ಟೇ ಹಾಕ್ಕೊಂಡರು. ಹೀಗಾಗಿ ಕಾಮೆಂಟ್ಗೆ ಅವಕಾಶ ಇರಲಿಲ್ಲ. ಇದ್ದಿದ್ದರೆ ಜನ ಏನೆಲ್ಲ ಮಾತಾಡ್ತಿದ್ರೋ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್