ವರ್ಷದೊಳಗೆ ಮುರಿದು ಬಿತ್ತು ಕಿರುತೆರೆ ನಟಿಯ ದಾಂಪತ್ಯ!

Published : Dec 10, 2019, 04:58 PM ISTUpdated : Dec 10, 2019, 05:35 PM IST
ವರ್ಷದೊಳಗೆ ಮುರಿದು ಬಿತ್ತು ಕಿರುತೆರೆ ನಟಿಯ ದಾಂಪತ್ಯ!

ಸಾರಾಂಶ

ಮದುವೆಯಾಗಿ ಒಂದು ವರ್ಷದೊಳಗೆ ನಟಿಯೊಬ್ಬರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇಬ್ಬರೂ ಬೇರೆ ಬೇರೆಯಾಗಿರುವುದರ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಯಾರು ಆ ನಟಿ? ಇಲ್ಲಿದೆ ನೋಡಿ. 

ನ್ಯಾಷನಲ್ ಅವಾರ್ಡ್ ವಿಜೇತೆ ನಟಿ ಶ್ವೇತಾ ಬಸು- ರೋಹಿತ್ ಮಿತ್ತಲ್ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಮದುವೆಯಾಗಿ ಒಂದು ವರ್ಷದೊಳಗೆ ಇಬ್ಬರೂ ಬೇರೆ ಬೇರೆಯಾಗಿರುವುದರ ಬಗ್ಗೆ ಶ್ವೇತಾ ಬಸು ಅಧಿಕೃತಗೊಳಿಸಿದ್ದಾರೆ. 

 

'ನಾನು, ರೋಹಿತ್ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ಕೆಲವು ಸಮಯ ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ ಯಾಕೋ ಇಬ್ಬರಿಗೂ ಆಗಿ ಬರುತ್ತಿಲ್ಲ ಎನಿಸಿತು. ಪುಸ್ತಕದ ಪ್ರತಿಯೊಂದು ಪುಟವನ್ನೂ ಓದಬೇಕು ಎನಿಸುವುದಿಲ್ಲ.  ಹಾಗಂತ ಆ ಪುಸ್ತಕ ಬೋರ್ ಹೊಡೆಸುತ್ತಿದೆ ಎಂದರ್ಥವಲ್ಲ. ಕೆಲವೊಂದನ್ನು ಬಿಟ್ಟು ಬಿಡಬೇಕಷ್ಟೇ ಎಂದು ಮಾರ್ಮಿಕವಾಗಿ ಬರೆದಿದ್ದಾರೆ. 

'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ಇಷ್ಟು ದಿನ ಒಳ್ಳೆಯ ನೆನಪುಗಳನ್ನು ಕೊಟ್ಟಿದ್ದಕ್ಕೆ  ಥ್ಯಾಂಕ್ಸ್. ಮುಂದಿನ ಜೀವನ ಚೆನ್ನಾಗಿರಲಿ ಎಂದು ಹೇಳುವುದನ್ನು ಮರೆತಿಲ್ಲ! 

ಶ್ವೇತಾ ಬಸು ಬಾಲ ಕಲಾವಿದೆಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದವರು. 'ಇಕ್ಬಾಲ್', ಮಕ್ದೇ ಸಿನಿಮಾ ನಟನೆಗಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಇತ್ತೀಚಿಗೆ ವರುಣ್ ಧವನ್, ಅಲಿಯಾ ಭಟ್ ಜೊತೆ 'ಬದ್ರಿನಾಥ್‌ ಕಿ ದುಲ್ಹನಿಯಾ' ಸಿನಿಮಾದಲ್ಲಿ ನಟಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​
Amruthadhaare Serial: ಅಷ್ಟು ಸುಳಿವು ಸಿಕ್ಕರೂ ಭೂಮಿಕಾ ಸುಮ್ನಿರೋದ್ಯಾಕೆ? ಸಿಡಿದೆದ್ದ ವೀಕ್ಷಕರು