ಈಗಲೂ ನಿಧಿಗೆ ಕರೆ ಮಾಡಿ, ಅಳುವ ಶುಭಾ ಪೂಂಜಾ; ಮದುವೆ ಪ್ಲಾನ್ ಚಿನ್ನಿ ಬಾಂಬ್‌ ಕೈಯಲ್ಲಿದೆ!

Suvarna News   | Asianet News
Published : May 21, 2021, 12:07 PM ISTUpdated : May 21, 2021, 12:32 PM IST
ಈಗಲೂ ನಿಧಿಗೆ ಕರೆ ಮಾಡಿ, ಅಳುವ ಶುಭಾ ಪೂಂಜಾ; ಮದುವೆ ಪ್ಲಾನ್ ಚಿನ್ನಿ ಬಾಂಬ್‌ ಕೈಯಲ್ಲಿದೆ!

ಸಾರಾಂಶ

ಶುಭಾ ಪೂಂಜಾ ಇಷ್ಟು ಒಳ್ಳೇ ಹುಡುಗಿ ನಾ? ಬಿಗ್‌ಬಾಸ್‌ ರಿಯಾಲಿಟಿ ಶೋ ನಂತರ ಅಭಿಮಾನಿಗಳು ಅಭಿಪ್ರಾಯ ಬದಲು. ಮದುವೆ ಯಾವಾಗ ಅನ್ನೋದೇ ಪ್ರಶ್ನೆ....  

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಶುಭಾ ಪೂಂಜಾ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರ ಇಡೀ ಕರ್ನಾಟಕ ಜನತೆಗೆ ಅವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿದೆ. ಸದಾ ತುಂಟ ಹುಡುಗಿ, ಬಿಗ್ ಬಾಸ್‌ಗೇ ರಗಳೆ ಕೊಡುತ್ತಾ, ವೀಕ್ಷಕರನ್ನು ಮನೋರಂಜಿಸುತ್ತಿದ್ದರು. 

ಮನೆಯಲ್ಲಿರುವ ಎಲ್ಲಾ ಸದಸ್ಯರ ಜೊತೆ ಉತ್ತಮ ಸ್ನೇಹ ಕಾಪಾಡಿಕೊಂಡು ಬಂದಿದ್ದ ಶುಭಾ ಇದೀಗ ಸಿನಿಮಾ ಮೇಕಿಂಗ್ ಕಡೆಯೂ ಮುಖ ಮಾಡಬೇಕು ಎಂಬ ಮನಸ್ಸಿನಲ್ಲಿದ್ದಾರೆ. ಅದರಲ್ಲೂ ತಮ್ಮ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಎಂಬುವುದು ಮತ್ತೊಂದು ವಿಶೇಷ. ಶುಭಾಗೆ ಮನೆಯಲ್ಲಿ ಅತಿ ಹೆಚ್ಚು ಆತ್ಮೀಯರಾಗಿದ್ದಿದ್ದು ನಿಧಿ ಸುಬ್ಬಯ್ಯ, ರಾಜೀವ್ ಮತ್ತು ಲ್ಯಾಗ್ ಮಂಜು. 

ನಿಧಿ ಜೊತೆ ಎಷ್ಟು ಕಿತ್ತಾಡಿದರೂ, ಕೋಪ ಮಾಡಿಕೊಂಡರೂ, ಇಬ್ಬರೂ ಕೊನೆಗೆ ಒಟ್ಟಿಗೆ ಮಲಗುತ್ತಿದ್ದರು. ದಿನವಿಡೀ ಒಟ್ಟಿಗೆ ಇಲ್ಲದಿದ್ದರೂ ಏನೇ ಕಷ್ಟ ಎದುರಾದೂ, ದುಃಖದಲ್ಲಿದ್ದರೂ ಒಟ್ಟಿಗೆ ಇದ್ದು ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಮನೆಯಿಂದ ಹೊರ ಬಂದ ನಂತರವೂ ಏನೇ ವಿಚಾರ ಇದ್ದರೂ ಶುಭಾ ನಿಧಿ ಜೊತೆ ಹಂಚಿಕೊಳ್ಳುತ್ತಾರೆ, ಇಬ್ಬರೂ ಕರೆ ಮಾಡಿ ಬಿಗ್‌ಬಾಸ್ ಮನೆಯನ್ನು ನೆನಪಿಸಿಕೊಂಡು ಅಳುತ್ತಿರಾಂತೆ. 

ಕಟ್ಟಡ ಕಾರ್ಮಿಕರಿಗೆ ದಿನಸಿ ನೀಡಿದ ನಟಿ ಶುಭಾ ಪೂಂಜಾ! 

ಇನ್ನು ಶುಭಾ ಪೂಂಜಾ ಮದುವೆ ಯಾವಾಗ? ಈಗಾಗಲೇ ಒಂದು ಸಲ ಪೋಸ್ಟ್‌ಪೋನ್ ಮಾಡಿದ್ದಾರೆ, ಈ ಸಲವೂ ಹೀಗೆ ಆಗುತ್ತಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಶುಭಾ ಮದುವೆಯಾಗುವ ಹುಡುಗನ ಹೆಸರು ಸುಮಂತ್. ಶುಭಾ ಪ್ರೀತಿಯಿಂದ ಚಿನ್ನಿ ಬಾಂಬ್ ಎಂದು ಕರೆಯುತ್ತಾರಂತೆ. ಶೋನಲ್ಲಿ ಪದೇ ಪದೇ ಚಿನ್ನಿ ಬಾಂಬ್ ಹೆಸರನ್ನು ಬಳಸಿರುವುದು ನಮಗೆ ಗೊತ್ತಿದೆ ಹಾಗೂ ಈ ಪದ ವೈರಲ್ ಅಗಿದೆ. 'ಕೊರೋನಾ ಪ್ಯಾಂಡಮಿಕ್ ಕಡಿಮೆ ಆದ ಮೇಲೆ ಮದುವೆ ಬಗ್ಗೆ ಚರ್ಚೆ ಮಾಡುತ್ತೇನೆ. ಈಗಾಗಲೇ ಒಂದು ಸಲ ಮದುವೆಯನ್ನು ಮುಂದೂಡಲಾಗಿದೆ. ಈ ಸಲ ಅವರೇ ನಿರ್ಧಾರ ತೆಗೆದುಕೊಳ್ಳಲು ಬಿಡುವೆ. ಸಿಂಪಲ್ ಆಗಿ ಮನೆಯಾದರೂ ಓಕೆ, ನಾನೂ ಓಕೆ ಎನ್ನುವೆ. ಬಟ್ ನನ್ನ ಸ್ನೇಹಿತರು ಈ ಕ್ಷಣದಲ್ಲಿ ಜೊತೆಗಿರಬೇಕು ಎಂಬ ಆಸೆ ನನಗಿದೆ,' ಎಂದಿದ್ದಾರೆ ಶುಭಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!