
ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಕಥೆ ಸಾಕಷ್ಟು ಕುತೂಹಲ ಕೆರಳಿಸುತ್ತಿದ್ದು, ಸೀರಿಯಲ್‌ನಲ್ಲಿ ಸದ್ಯ ತಾಂಡವ್ ಪಾತ್ರ ತುಂಬಾ ಗಮನ ಸೆಳೆಯುತ್ತಿದೆ. ಕಾರಣ, ಮನೆಯವರೆಲ್ಲರಿಗಿಂತ ಹೆಚ್ಚು ಸಮಸ್ಯೆ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವುದು ತಾಂಡವ್. ಇದೀಗ ಸೀದಾ ತಾಂಡವ್ ಮನೆಗೇ ಬಂದು ಶ್ರೇಷ್ಠಾ ಮನೆಯವರೆಲ್ಲರ ಮುಂದೆ ಆತನನ್ನು ತಬ್ಬಿಕೊಂಡಿದ್ದಾಳೆ. ಮನೆಯವರೆಲ್ಲರೂ ಶಾಕ್ ಆಗಿದ್ದಾರೆ.
ತಾಂಡವ್ ಮನೆಯಲ್ಲಿ ಎಲ್ಲರೂ ಖುಷಿಖುಷಿಯಾಗಿದ್ದರು. ಒಳ್ಳೆಯ ಮೂಡ್‌ನಲ್ಲಿ ಮನೆಮಂದಿಯೆಲ್ಲ ಒಟ್ಟಿಗೇ ಊಟಕ್ಕೆ ಕುಳಿತು ಹರಟೆ ಹೊಡೆಯುತ್ತ ಎಂಜಾಯ್ ಮಾಡುತ್ತಿದ್ದರು. ಆದರೆ, ಪೂಜಾ ಸ್ವಲ್ಪ ಕೊಂಕು ನುಡಿ ಎಂಬಂತೆ ಮಾತನಾಡುತ್ತಿದ್ದು, ಮಾತಿನ ಮಧ್ಯೆ ತಾಂಡವ್ ಕಡೆಗೇ ನೋಡುತ್ತಿದ್ದಾಳೆ. ತಾಂಡವ್ ಕೂಡ ಅಷ್ಟೇ, ಪೂಜಾ ಮಾತು ಕೇಳಿ ಕಂಗಾಲಾಗುತ್ತಿದ್ದಾನೆ. ಇದನ್ನೆಲ್ಲ ಮನೆಯವರು ಗಮನಿಸಿ ಅವರೆಲ್ಲರ ಮನಸ್ಸಿನಲ್ಲಿ ಏನೋ ಸಂದೇಹ ಮೂಡಿ ಬರುತ್ತಿದೆ.
ನಾನು ಇನ್ನೂ ಹೆಚ್ಚು ಡ್ರಾಮಾಟಿಕ್ ಆಗಬೇಕು; ಆಕೆ ಇನ್ನೂ ಹೆಚ್ಚು ರೆಸ್ಪೆಕ್ಟ್‌ಫುಲ್ ಆಗಬೇಕು: ಜಯಾ ಬಚ್ಚನ್
ಭಾಗ್ಯ ಮನಸ್ಸಿನಲ್ಲಿ ಕೂಡ 'ಪೂಜಾ ಯಾಕೆ ಮಾತಾಡುತ್ತ ತಾಂಡವ್ ಕಡೆ ನೋಡುತ್ತಾಳೆ, ತಾಂಡವ್ ಯಾಕೆ ಆಕೆ ಮಾತಿನಿಂದ ಹೆದರಿ ನಡುಗುತ್ತಿದ್ದಾನೆ?' ಎಂದು ಅಂದುಕೊಳ್ಳುತ್ತಿರುವಾಗಲೇ ಮನೆಯ ಕರೆಗಂಟೆ ಸದ್ದಾಗುತ್ತದೆ. ಬೆಲ್ ಕೇಳಿ ಬಾಗಿಲು ತೆಗೆದ ಭಾಗ್ಯ, ಬಾಗಿಲಿನ ಮೂಲಕ ಸೀದಾ ಒಳನುಗ್ಗುತ್ತಿರುವ ಶ್ರೇಷ್ಠಾಳನ್ನು ನೋಡಿ ಕಂಗಾಲಾಗಿದ್ದಾಳೆ. ಆದರೆ, ಶ್ರೇಷ್ಠಾ ಭಾಗ್ಯಳ ಕಡೆ ಲಕ್ಷ್ಯ ಹಾಕದೇ ಸೀದಾ ಒಳಬರಲು ಊಟಕ್ಕೆ ಕುಳಿತಿದ್ದ ತಾಂಡವ್ ಎದ್ದು ನಿಲ್ಲುತ್ತಾನೆ. ತಕ್ಷಣ ತಾಂಡವ್ ಬಳಿ ಬಂದು ಶ್ರೇಷ್ಠಾ ಆತನನ್ನು ಬಿಗಿದಪ್ಪಿ ಅಳತೊಡಗುತ್ತಾಳೆ.
ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಸಿಂಗ್ ಜೋಡಿ ಕರೀನಾ ಆಗಬೇಕಿತ್ತು, ದೀಪಿಕಾ ಎಂಟ್ರಿ ಹಿಂದಿನ ಸೀಕ್ರೆಟ್ ರಿವೀಲ್!
ಮನೆಯವರೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಅದೇನು ನಡೆಯುತ್ತಿದೆ? ಸಂಚಿಕೆ ನೋಡಿದರೆ ಇದಕ್ಕೆಲ್ಲ ಉತ್ತರ ಸಿಗಲಿದೆ. ಅಂದಹಾಗೆ, ಸೋಮವಾರದಿಂದ ಶನಿವಾರ ಸಂಜೆ 7/00ಕ್ಕೆ ಕಲರ್ಸ್ ಕನ್ನಡದಲ್ಲಿ "ಭಾಗ್ಯಲಕ್ಷ್ಮೀ' ಪ್ರಸಾರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.