ಮಗ ಅಭಿಗಾಗಿ ತುಳಸಿ ಬದಲಾಗಲು ನೋಡುತ್ತಿದ್ದಾಳೆ. ಅದೇ ಹೊತ್ತಿನಲ್ಲಿ ಪೂರ್ಣಿ ಬೆಳೆದ ಅನಾಥಾಶ್ರಮಕ್ಕೆ ಭೇಟಿಯನ್ನೂ ಕೊಡುತ್ತಾಳೆ. ಏನು ಪೂರ್ಣಿಯ ಹುಟ್ಟಿನ ರಹಸ್ಯ?
ಮಗ ಅವಿಗಾಗಿ ತುಳಸಿ ಬದಲಾಗುತ್ತಿದ್ದಾಳೆ. ಹೊಸದಾಗಿ ಅಮ್ಮನ ಸ್ಥಾನ ಪಡೆದಿರೋ ತುಳಸಿಯನ್ನು ಕಂಡರೆ ಆಗ ಅವಿ ಮಾತಿನ ಭರದಲ್ಲಿ ನನ್ನ ಅಮ್ಮನ ಜೊತೆ ನಿಮ್ಮನ್ನು ಕಂಪೇರ್ ಮಾಡಿಕೊಳ್ಳಬೇಡಿ. ಅವರು ಡ್ಯಾನ್ಸರ್ ಆಗಿದ್ರು, ಇಂಗ್ಲಿಷ್ ಚೆನ್ನಾಗಿ ಮಾತಾಡ್ತಿದ್ರು... ಎಂದೆಲ್ಲಾ ಹೇಳಿದ್ದಾನೆ. ಅವನಿಗಾಗಿ ಬದಲಾಗಿ ಅವನ ಪ್ರೀತಿ ಗಳಿಸಬೇಕು ಎನ್ನುವ ತಯಾರಿಯಲ್ಲಿ ಇದ್ದಾಳೆ ತುಳಸಿ. ಮುದ್ದಿನ ಸೊಸೆ, ಅವಿಯ ಪತ್ನಿ ಪೂರ್ಣಿಯ ನೆರವು ಪಡೆದು ಯೂಟ್ಯೂಬ್ನಲ್ಲಿ ತಮಗೆ ಬೇಕಾಗಿರುವುದನ್ನು ಸರ್ಚ್ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ. ಇದೀಗ ಡ್ಯಾನ್ಸ್ ಮತ್ತು ಇಂಗ್ಲಿಷ್ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾಳೆ. ಆದರೆ ಇದ್ಯಾಕೋ ಶ್ರೀರಸ್ತು ಶುಭಮಸ್ತು ಸೀರಿಯಲ್ ಅಭಿಮಾನಿಗಳಿಗೆ ಹಿಡಿಸುತ್ತಿಲ್ಲ. ತುಳಸಿಯ ಪಾರ್ಟ್ ಜೋಕ್ ಆದಂತೆ ಆಗುತ್ತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಅವಿಗಾಗಿ ನೀವ್ಯಾಕೆ ಬದಲಾಗಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಅದೇ ವೇಳೆ, ಯೂಟ್ಯೂಬ್ ನೋಡಿ ಎಲ್ಲವನ್ನೂ ಕಲಿಯುವ ಹಾಗಿದ್ದರೆ ದೊಡ್ಡ ದೊಡ್ಡ ಕೋರ್ಸ್ಗಳು, ತರಬೇತಿ ಸಂಸ್ಥೆಗಳು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ತಮಾಷೆ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಯುಟ್ಯೂಬ್ ನೋಡಿ ಸಹನಾ ಕರಾಟೆ ಕಲಿತಂತೆ ತೋರಿಸಿದ್ದಾಳೆ. ಇದೀಗ ಭರತನಾಟ್ಯ, ಇಂಗ್ಲಿಷ್, ಡ್ರೈವಿಂಗ್ ಎಲ್ಲವನ್ನೂ ಮೊಬೈಲ್ನಿಂದಲೇ ಕಲಿಯುವುದು ಹಾಸ್ಯಾಸ್ಪದ ಎನ್ನುತ್ತಿದ್ದಾರೆ. ಇನ್ನು ಕೆಲವರು ತುಳಸಿಯ ಈ ಹೊಸ ಸಾಹಸಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಸಾವಿರ ಸುಳ್ಳು ಹೇಳಿ ಇನ್ನೊಬ್ಬಳ ಹಿಂದೆ ಹೋಗ್ಬೋದು, ಮಗ ಚಿಕ್ಕ ಸುಳ್ಳು ಹೇಳ್ಬಾರ್ದಾ? ತಾಂಡವ್ಗೆ ನೆಟ್ಟಿಗರ ಕ್ಲಾಸ್!
ಆದರೆ ಇದೇ ವೇಳೆ, ಧಾರಾವಾಹಿಗೆ ಒಂದು ಟ್ವಿಸ್ಟ್ ಬಂದಿದೆ. ಅದೇನೆಂದರೆ ಪೂರ್ಣಿಯ ಹುಟ್ಟಿನ ರಹಸ್ಯ. ಹೌದು. ಅನಾಥಾಶ್ರಮದಿಂದ ದೇಣಿಗೆ ಬೇಡಿ ಬಂದವರು ನಿಜವಾದ ಅನಾಥಾಶ್ರಮದವರು ಎಂದು ತಿಳಿಯದ ತುಳಸಿ, ಅವರ ವಿರುದ್ಧ ಮಾತನಾಡಿದ್ದಳು. ಅದರ ಹಿಂದೆ ದೀಪಿಕಾ ಕುತಂತ್ರವೂ ಕಾರಣವಾಗಿತ್ತು. ಬಳಿಕ ಅನಾಥಾಶ್ರಮದವರು ಕೋಪ ಮಾಡಿಕೊಂಡು ಹೊರಟು ಹೋಗಿದ್ದರು. ಆದ್ದರಿಂದ ಬೇಸರಗೊಂಡ ತುಳಸಿ ಅನಾಥಾಶ್ರಮವವನ್ನು ಹುಡುಕಿ, ಅವರಲ್ಲಿ ಕ್ಷಮೆ ಕೋರಿ ದೇಣಿಗೆ ಕೊಟ್ಟು ಬರಲು ಹೋದಾಗ ಅಲ್ಲಿ ಪೂರ್ಣಿಯ ಡ್ಯಾನ್ಸ್ ಫೋಟೋ ನೋಡಿದಳು. ಅಷ್ಟಕ್ಕೂ ಪೂರ್ಣಿ ಅನಾಥಾಶ್ರಮದಲ್ಲಿಯೇ ಬೆಳೆದವಳು ಎನ್ನುವುದನ್ನು ಇಲ್ಲಿಯವರೆಗೂ ತೋರಿಸಲಾಗಿದೆ. ಇದೇ ಕಾರಣಕ್ಕೆ ದೀಪಿಕಾ ಆಕೆಯನ್ನು ಇನ್ಸಲ್ಟ್ ಕೂಡ ಮಾಡುತ್ತಿದ್ದಾಳೆ.
ಆದರೆ ಅನಾಥಾಶ್ರಮ ಮತ್ತು ಪೂರ್ಣಿಗೆ ಇರುವ ಸಂಬಂಧ ಏನು ಎಂಬ ಬಗ್ಗೆ ಇದೀಗ ಕುತೂಹಲ ಇರಿಸಲಾಗಿದೆ. ತಾನು ಅನಾಥಾಶ್ರಮಕ್ಕೆ ಹೋಗಿದ್ದನ್ನು ಹಾಗೂ ಅಲ್ಲಿ ಪೂರ್ಣಿಯ ಫೋಟೋ ನೋಡಿದ್ದನ್ನು ತುಳಸಿ ಮಾಧವ್ಗೆ ವಿವರಿಸುತ್ತಾಳೆ. ಆ ಅನಾಥಾಶ್ರಮದ ಹೆಸರು ಎತ್ತಬೇಡಿ ಎಂದು ಮಾಧನ್ ಹೇಳುತ್ತಾನೆ. ಆದರೆ ಈ ಕೋಪಕ್ಕೆ ಕಾರಣ ತಿಳಿಯದ ತುಳಸಿ ನಾನು ಒಳ್ಳೆಯ ಉದ್ದೇಶದಿಂದಲೇ ಹೋಗಿದ್ದೆ. ಅಲ್ಲಿಯೇ ನಮ್ಮ ಪೂರ್ಣಿ ಇದ್ದದ್ದಂತೆ. ಫೋಟೋ ನೋಡಿ ಖುಷಿಯಾಯ್ತು ಎನ್ನುತ್ತಾಳೆ.
ಆದರೆ ಅದಾಗಲೇ ಅನಾಥಾಶ್ರಮ ಮತ್ತು ಪೂರ್ಣಿಯ ಹೆಸರು ಕೇಳುತ್ತಿದ್ದಂತೆಯೇ ಮಾಧವ್ ಕೋಪ ನೆತ್ತಿಗೇರುತ್ತದೆ. ಎಷ್ಟು ಸಲ ಹೇಳುವುದು ಇದರ ಹೆಸರು ಎತ್ತಬೇಡ ಎಂದು ಎನ್ನುತ್ತಾನೆ. ಈ ಕೋಪ ನೋಡಿ ತುಳಸಿ ಕೂಡ ಶಾಕ್ ಆಗುತ್ತಾಳೆ. ಹಾಗಿದ್ದರೆ ಪೂರ್ಣಿಯ ಹುಟ್ಟಿನ ರಹಸ್ಯವೇನು? ಆ ಅನಾಥಾಶ್ರಮದಲ್ಲಿಯೇ ಪೂರ್ಣಿ ಬೆಳೆದದ್ದು ನಿಜವಾದರೆ, ಮಾಧವ್ಗೆ ಏಕೆ ಅಷ್ಟು ಕೋಪ ಎಂಬೆಲ್ಲಾ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿವೆ. ಇದೇ ವೇಳೆ ಪೂರ್ಣಿಯ ಡ್ಯಾನ್ಸ್ ಫೋಟೋ ತುಳಸಿ ನೋಡಿರುವ ಕಾರಣ, ಇನ್ನು ತುಳಸಿಗೆ ಪೂರ್ಣಿಯೇ ಡ್ಯಾನ್ಸ್ ಹೇಳಿಕೊಡುವುದು ಗ್ಯಾರೆಂಟಿ, ಅತ್ತೆ-ಸೊಸೆಯ ನೃತ್ಯ ನೋಡಲು ಕಾತರರಾಗಿರುತ್ತೇವೆ ಎಂದಿದ್ದಾರೆ.
'ಟಾಕ್ಸಿಕ್' ಬಿಗ್ ಟ್ವಿಸ್ಟ್: ತಂಗಿಯಾಗಿ ಕರೀನಾ, ಯಶ್ಗೆ ಜೋಡಿಯಾಗಲಿರೋ ಬಾಲಿವುಡ್ ಬೆಡಗಿ ಇವರೇ ನೋಡಿ?