ಸೀತಾರಾಮ ಸೀರಿಯಲ್ನಲ್ಲಿ ನಡೆದ ಹೋಳಿ ಸಂಭ್ರಮದ ಶೂಟಿಂಗ್ ಸಮಯದಲ್ಲಿ ನಡೆದ ಘಟನೆಗಳ ಸಂಪೂರ್ಣ ವಿಡಿಯೋ ಶೇರ್ ಮಾಡಿದ್ದಾರೆ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ.
ಸೀತಾರಾಮ ಸೀರಿಯಲ್ನಲ್ಲಿ ಹೋಳಿಯ ಸಡಗರ ಭರ್ಜರಿಯಾಗಿಯೇ ನಡೆದಿದೆ. ಆದರೆ ಇದರ ಮೇಕಿಂಗ್ ಹೇಗಿತ್ತು ಎಂಬ ಬಗ್ಗೆ ಸೀರಿಯಲ್ನ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಅವರು ಶೇರ್ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ನಡೆದ ಘಟನೆಗಳು, ಅಲ್ಲಿಯ ಸಂಭ್ರಮ, ನಡೆದ ಆವಾಂತರಗಳನ್ನು ಮೇಘನಾ ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ. ತಮ್ಮ ಯೂಟ್ಯೂಬ್ ಮೂಲಕ ವಿಡಿಯೋ ಮಾಡಿರುವ ಮೇಘನಾ ಇವುಗಳ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಮೇಘನಾ ಅವರು ಕೆಲವೇ ದಿನಗಳ ಹಿಂದೆ ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ಇದರಲ್ಲಿ ಕೆಲವೇ ಕೆಲವು ವಿಡಿಯೋಗಳನ್ನು ಶೇರ್ ಮಾಡಲಾಗಿದ್ದು, ಅದರಲ್ಲಿ ಒಂದು ಶೂಟಿಂಗ್ ವೇಳೆಯದ್ದು. ಇದಾಗಲೇ ಸೀತಾರಾಮ ಸೀರಿಯನ್ ಸೀತಾ ಅಂದರೆ ವೈಷ್ಣವಿ ಗೌಡ ಅವರು ಹಲವಾರು ವಿಡಿಯೋ ಶೇರ್ ಮಾಡುವ ಮೂಲಕ ಸಕತ್ ಫೇಮಸ್ ಆಗಿದ್ದಾರೆ. ಅದೇ ದಾರಿಯಲ್ಲಿ ಈಗ ಪ್ರಿಯಾ ಕೂಡ ನಡೆದಿದ್ದಾರೆ.
14.9 ಸಾವಿರ ಸಬ್ ಸ್ಕ್ರೈಬರ್ಸ್ ಗಳನ್ನು ನಟಿ ಹೊಂದಿದ್ದು, ಈಗ ಖಾತೆ ಓಪನ್ ಮಾಡಿದ್ದಾರೆ. ಈ ಮೊದಲು ಮೇಘನಾ ಫ್ಯಾನ್ಸ್ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಿಕ್ಷಣದ ಬಗ್ಗೆ ವಿವರಿಸಿದ್ದರು. ತಾವು ಬಿಬಿಎ ವ್ಯಾಸಂಗ ಮಾಡಿರುವುದಾಗಿ ತಿಳಿಸಿದ್ದರು. ಇದೀಗ ಹೋಳಿ ಸಂಭ್ರಮ ಶೂಟಿಂಗ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕುತೂಹಲದ ಮಾಹಿತಿಗಳನ್ನು ನೋಡಬಹುದಾಗಿದೆ. ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾ ಕುರಿತು ಹೇಳುವುದಾದರೆ, ಕಂಪೆನಿ ಓನರ್ ಎನ್ನುವ ಕಾರಣಕ್ಕೆ ಅಶೋಕನನ್ನು ಲವ್ಮಾಡಿದ್ಲು. ಆದರೆ ಕೊನೆಗೆ ಆತ ಓನರ್ ಅಲ್ಲ, ಮಾಮೂಲಿ ನೌಕರ ಎಂದು ತಿಳಿದರೂ ಇವರಿಬ್ಬರ ಲವ್ ಸ್ಟೋರಿ ಮುಂದುವರೆದಿದೆ. ಅಷ್ಟಕ್ಕೂ ಪ್ರಿಯಾ ಪಾತ್ರಧಾರಿ ಇಷ್ಟವಾಗುವುದು ಚಟ್ಪಟ್ ಮಾತಿನಿಂದ. ನಿಜ ಜೀವನದಲ್ಲಿಯೂ ತಾವು ಹೀಗೆಯೇ ಎಂದಿದ್ದಾರೆ ಮೇಘನಾ.
ಪ್ರಚಾರ ಪ್ರಿಯರ ನಡುವೆ ಅಭಿಮಾನಿಗಳ ಮನಗೆದ್ದ ನಟಿ ಸಾರಾ ಅಲಿ: ವಿಡಿಯೋ ಮಾಡುವವರ ಮೇಲೆ ಕಿಡಿ
ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಅಂದಹಾಗೆ ಈಚೆಗೆ ಮೇಘನಾ ಅವರು, ಹೊಸ ಮನೆಗೆ ಕಾಲಿಟ್ಟಿದ್ದಾರೆ. ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ನೂತನ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಗೃಹ ಪ್ರವೇಶಕ್ಕೆ ‘ಸೀತಾ ರಾಮ’ ಧಾರಾವಾಹಿ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಅಶೋಕ ಮುಂತಾದವರು ಆಗಮಿಸಿದ್ದರು.
ಬೃಂದಾವನ ಪುಷ್ಪಾ ರಿಯಲ್ ಲೈಫ್ನಲ್ಲಿ ಬ್ರೇಕಪ್ ಆಗೋಯ್ತಾ? ಇನ್ಸ್ಟಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!