ಬೃಂದಾವನ ಪುಷ್ಪಾ ರಿಯಲ್​ ಲೈಫ್​ನಲ್ಲಿ ಬ್ರೇಕಪ್​ ಆಗೋಯ್ತಾ? ಇನ್​ಸ್ಟಾ ಪೋಸ್ಟ್​ ನೋಡಿ ಫ್ಯಾನ್ಸ್​ ಶಾಕ್​!

By Suvarna News  |  First Published Mar 31, 2024, 3:54 PM IST

ಬೃಂದಾವನ ಸೀರಿಯಲ್​ ಪುಷ್ಪಾ ಪಾತ್ರಧಾರಿ ಅಮೂಲ್ಯ ಭಾರಧ್ವಾಜ್​ ಅವರು ಸೋಷಿಯಲ್​  ಮೀಡಿಯಾದಲ್ಲಿ ಹಾಕಿರುವ ಪೋಸ್ಟ್​ ಒಂದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏನದು ಪೋಸ್ಟ್​?
 


'ಅವಳು  ಅವರ ಒಡೆದ ಮನಸಿನ ಎಲ್ಲಾ ತುಣುಕುಗಳನ್ನು ಜೋಡಿಸಿಕೊಡುತ್ತಾಳೆ. ಅವರು ತಕ್ಷಣ ಅವಳ ಬದುಕಿನಿಂದ ಹೊರಗೆ ನಡೆಯುತ್ತಾರೆ. ಆ ಒಡೆದ ಮನಸಿನ ತುಣುಕುಗಳನ್ನು ಅವಳಲ್ಲಿ ಬಿಟ್ಟು ಹೋಗುತ್ತಾರೆ. ಆಕೆ ಅನಿವಾರ್ಯವಾಗಿ ಅವುಗಳೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ...ಆಕೆ ಇನ್ನೆಂದೂ ಆಕೆ ಯಾರದ್ದೂ ಆಯ್ಕೆ ಅಲ್ಲ ಎಂದು ಒಪ್ಪಿಕೊಂಡಿದ್ದಾಳೆ. ನೀವು ಇರಿ ಅಥವಾ ಹೋಗಿ. ಅದು ಈ ಸಮಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿಲ್ಲ. ಅವಳಿಗೆ ಶಾಂತಿ ಬೇಕು, ಜಸ್ಟ್ ಖುಷಿಯಾಗಿರಬೇಕು. ನೀವಿದ್ದರೂ ಸರಿ, ಇಲ್ಲದಿದ್ದರೂ ಸರಿ... ಅವಳು ಅದನ್ನು ಈಗಾಗಲೇ ಒಪ್ಪಿಕೊಂಡಿದ್ದಾಳೆ. ಜನರು ಆಕೆಯ ಜೀವನದೊಳಗೆ ಬರುವುದು ಆಕೆಯ ಜೊತೆಗೆ ಇರುವುದಕ್ಕಲ್ಲ ಎನ್ನುವುದನ್ನು ಆಕೆ ಈಗಾಗಲೇ ಒಪ್ಪಿಕೊಂಡಿದ್ದಾಳೆ. ಬದಲಾಗಿ ಆಕೆಯಲ್ಲಿರುವಂತಹ ಸಕಾರಾತ್ಮಕ ಶಕ್ತಿ ಅಥವಾ ಹೀಲಿಂಗ್ ಸ್ಪಿರಿಟ್​ಗಾಗಿ ಜನರು ಆಕೆಯ ಬಳಿ ಬರುತ್ತಾರೆ ಎಂಬ ಅರಿವಾಗಿದೆ...

- ಹೀಗಂತ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ ನಟಿ ಅಮೂಲ್ಯ ಭಾರಧ್ವಾಜ್​. ಅಮೂಲ್ಯ ಭಾರಧ್ವಾಜ್​ ಎಂದರೆ ಹೆಚ್ಚಿನವರಿಗೆ ತಿಳಿಯಲು ಕಷ್ಟವಾದೀತು. ಈಕೆಯೇ ಪುಷ್ಪಾ, ಪ್ರತಿನಿತ್ಯ ಬೃಂದಾವನ ಸೀರಿಯಲ್​ ಮೂಲಕ ನಿಮ್ಮೆಲ್ಲರ ಮನೆಗೆ ಬರುತ್ತಿರುವ ನಾಯಕಿ ಪುಷ್ಪಾ. ಬೃಂದಾವನ ಸೀರಿಯಲ್​ನಲ್ಲಿ ಹಳ್ಳಿ ಹುಡುಗಿ ಪುಷ್ಪ ಆಗಿ ನಟಿಸುತ್ತಿದ್ದಾರೆ. ಆಕಾಶ್​ ಪತ್ನಿಯಾಗಿ ಪುಷ್ಪ ಪಾತ್ರ ಇಂಟ್ರೆಸ್ಟಿಂಗ್ ಆಗಿ ಮೂಡಿಬರುತ್ತಿದೆ. ಫುಲ್​ ಟೈಮ್ ಗೃಹಿಣಿಯಾಗಿ ಕಾಣಿಸಿಕೊಳ್ಳೋ ಪುಷ್ಪ ಅವರ  ನಿಜವಾದ ಹೆಸರು ಅಮೂಲ್ಯಾ ಭಾರಧ್ವಾಜ್​. ಅಷ್ಟಕ್ಕೂ ಈ ಎಲ್ಲಾ ಬರವಣಿಗೆಗಳನ್ನು ನೋಡಿದರೆ ಅಮೂಲ್ಯ ಅವರ ಬ್ರೇಕಪ್​ ಆಗಿದೆ ಎಂದೇ ಹೇಳಲಾಗುತ್ತಿದೆ. ಇವರು ಬರೆದಿರುವ ಪ್ರತಿಯೊಂದು ಶಬ್ದ, ವಾಕ್ಯವೂ ಬ್ರೇಕಪ್​ ಆಗಿರುವ ಸಂಕೇತವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಟಿ ಬೆನ್ನು ಹಾಕಿ ಪೋಸ್​ ನೀಡುವ ಮೂಲಕ ಈ ಎಲ್ಲಾ ಮಾತುಗಳನ್ನು ಬರೆದುಕೊಂಡಿರುವುದು ನೋವಿನಿಂದಲೇ ಬರೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  ಈ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂಟಿಕ್​ ಇಲ್ಲದ ಕಾರಣ, ಇದು ಅಮೂಲ್ಯ ಅವರ ಅಧಿಕೃತ ಸೋಷಿಯಲ್​ ಮೀಡಿಯಾ ಹೌದೋ, ಅಲ್ಲವೋ ಎಂಬ ಸಂದೇಹ ಕೆಲವರನ್ನು ಕಾಡುತ್ತಿದೆ. 

Tap to resize

Latest Videos

ಮಲೈಕಾ ಅರೋರಾ ತಾಯಿ- ಮಾಜಿ ಪತಿಯ ಅಪ್ಪ ಒಂದೇ ಕಾರಲ್ಲಿ: ಎಲ್ಲೋ ಮಿಸ್​ ಹೊಡಿತಿದೆ ಎಂದ ನೆಟ್ಟಿಗರು!

ಒಟ್ಟಿನಲ್ಲಿ ಬೃಂದಾವನ ನಟಿಗೆ ಏನಾಯಿತು ಎಂದು ಹಲವಾರು ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಏನಾಯಿತು ಎಂದು ನಟಿಗೆ ಕೇಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ, ಆಕೆ, ಕಮೆಂಟ್​ ಸೆಕ್ಷನ್​ನನ್ನು ಆಫ್​ ಇಟ್ಟುಕೊಂಡಿದ್ದಾರೆ. ಯಾರೂ ಕಮೆಂಟ್​ ಮಾಡಲು ಸಾಧ್ಯವಾಗುತ್ತಿಲ್ಲ. 

ಇನ್ನು ಅಮೂಲ್ಯ ಅವರ ಕುರಿತು ಹೇಳುವುದಾದರೆ,  ಅವರು ಈ ಹಿಂದೆ ‘ದಾಸ ಪುರಂದರ’ ಧಾರಾವಾಹಿಯಲ್ಲಿ ನಟಸಿದ್ದರು ಅಮೂಲ್ಯಾ. ಅಂದು ಪೌರಾಣಿಕ ಧಾರಾವಾಹಿಯಲ್ಲಿ ನಟಿಸಿದ್ದ ನಟಿ, ಬೃಂದಾವನ ಮೂಲಕ ಗೃಹಿಣಿಯಾಗಿ  ಸಾಮಾಜಿಕ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಕತ್​ ಸದ್ದು ಮಾಡುತ್ತಿದ್ದಾರೆ. ದಾಸ ಪುರಂದರಲ್ಲಿ  ಸರಸ್ವತಿಯಾಗಿ, ಈಗ ಪುಷ್ಪ ಆಗಿರುವ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಎರಡನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅಷ್ಟಕ್ಕೂ ಇವರು ರಿಯಲ್​ ಲೈಫ್​ನಲ್ಲಿ ಇನ್ನೂ ಬೇರೆನೇ ಆಗಿದ್ದಾರೆ. ಸಕತ್​  ಮಾಡರ್ನ್ ಆಗಿದ್ದಾರೆ. ಸೀರಿಯಲ್‌ನಲ್ಲಿ ಅವರು ಟ್ರೆಡಿಷನಲ್ ಪಾತ್ರಗಳನ್ನು ಮಾಡುತ್ತಿರುವ ಅವರು ಚಾಲೆಂಜಿಂಗ್ ಪಾತ್ರಗಳನ್ನು ಮಾಡಲು ಬಯಸುತ್ತಾರೆ. ಅಂದಹಾಗೆ, 23 ವರ್ಷದ ಅಮೂಲ್ಯ ಅವರು ಮೈಸೂರಿನ ಬೆಡಗಿ. 

ಗುಲಾಬಿ ನೀಡಲು ಅಲ್ಲಿ ಗೌತಮ್​ ಪ್ರಾಕ್ಟೀಸ್​ ಮಾಡ್ತಿದ್ರೆ ಇಲ್ಲಿ ಇವರೊಟ್ಟಿಗೆ ರೊಮ್ಯಾನ್ಸ್​ ಮಾಡೋದಾ? ನಟಿಯ ಕಾಲೆಳೆದ ಫ್ಯಾನ್ಸ್​

click me!