ಬಿಗ್ಬಾಸ್ ಮುಗಿಯಲು ಇನ್ನು 23 ದಿನಗಳು ಇದ್ದು, ಈ ಅವಧಿಯಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ಗೆ ಲವ್ ಆದ್ರೆ ಅಂತ ಶೈನ್ ಶೆಟ್ಟಿಗೆ ಟೆನ್ಷನ್ ಆಗ್ತಿದೆಯಂತೆ! ಅವರು ಹೇಳಿದ್ದೇನು ಕೇಳಿ...
ಬಿಗ್ಬಾಸ್ನ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ನಡುವೆ ಪ್ರೇಮಾಂಕುರವಾಗಿ ಕೊನೆಗೆ ಅದು ಜಗಳದಲ್ಲಿ ಕೊನೆಗೊಂಡಿತ್ತು. ಇದೀಗ ಸಂಗೀತಾ ಮೇಲೆ ವಿನಯ್ಗೆ ಬಹಳ ಪ್ರೀತಿ ಮೂಡಿರುವಂತಿದೆ. ಸದಾ ಒಂದಿಲ್ಲೊಂದು ಕಾರಣಗಳಿಂದ ವಿವಾದಕ್ಕೆ ಸಿಲುಕುತ್ತಿರುವ ವಿನಯ್ ಮತ್ತು ಸಂಗೀತಾ. ಈ ಇಬ್ಬರೂ ಮಾತೆತ್ತಿದರೆ ಜಗಳ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆಗಿದ್ದಾರೆ. ಇವರಿಬ್ಬರು ಏನೆಂದರೂ ಅಲ್ಲಿ ಜಗಳ ಶುರುವಾಗುತ್ತದೆ. ವಿನಯ್ ಅವರು ಸದಾ ಎಲ್ಲರಿಗೂ ಆವಾಜ್ ಹಾಕುವಲ್ಲಿಯೇ ಫೇಮಸ್. ವೀಕೆಂಡ್ನಲ್ಲಿ ಮಾತ್ರ ಅಮಾಯಕನಂತೆ ಸುದೀಪ್ ಎದುರು ವರ್ತಿಸುತ್ತಾರೆ ಎನ್ನುವ ಆರೋಪ ಬಿಗ್ಬಾಸ್ ಪ್ರೇಮಿಗಳದ್ದು. ಅಷ್ಟಕ್ಕೂ ಈ ಇಬ್ಬರು ಕಿರುತೆರೆ ಕಲಾವಿದರು ಕೂಡ ಎನ್ನುವುದು ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಸಂಗೀತಾ ಶೃಂಗೇರಿ ಹಾಗೂ ವಿನಯ್ ಅವರು ಹರ ಹರ ಮಹಾದೇವ ಧಾರಾವಾಹಿಯಲ್ಲಿ ನಟಿಸಿದ್ದರು. ಸಂಗೀತಾ ಶೃಂಗೇರಿ ಸತಿಯಾಗಿ ಹಾಗೂ ವಿನಯ್ ಶಿವನಾಗಿ ಕಾಣಿಸಿಕೊಂಡಿದ್ದರು. ಆದರೆ ಬಿಗ್ಬಾಸ್ ಮನೆಯಲ್ಲಿ ಸದಾ ಇಬ್ಬರ ಕಚ್ಚಾಟ.
ಆದರೆ ಏಕೋ ಇದೀಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆಯೇ ಎಂದೆನಿಸುವ ಪ್ರೊಮೋ ರಿಲೀಸ್ ಆಗಿದೆ. ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಮತ್ತು ನಟಿ ಶುಭಾ ಪೂಂಜಾ ಎಂಟ್ರಿ ಕೊಟ್ಟು ಬಿಗ್ಬಾಸ್ ಅನ್ನು ಮತ್ತಷ್ಟು ರಂಗೇರಿಸುತ್ತಿದ್ದಾರೆ. ಇದರ ನಡುವೆಯೇ ಇರುವ ಸ್ಪರ್ಧಿಗಳ ನಡುವೆ ಟಾಸ್ಕ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಕಾದಾಟ, ಹಾರಾಟ, ಕಿತ್ತಾಟ, ಕೂಗಾಟ ಎಲ್ಲವೂ ಬಿಗ್ಬಾಸ್ ವಿನ್ನರ್ ದಿನ ಹತ್ತಿರವಾಗುತ್ತಿದ್ದಂತೆಯೇ ಬಲು ಜೋರಾಗಿದೆ.
ಈ ಧ್ವನಿ ಯಾರದ್ದು ಹೇಳಬಲ್ಲಿರಾ? ಬಿಗ್ಬಾಸ್ ನೀಡಿದೆ ನಿಮಗೊಂದು ಚಾಲೆಂಜ್- ಆಡಿಯೋ ಕೇಳಿ ಹೆಸರು ಹೇಳಿ!
ಇವರಿಬ್ಬರೂ ಸದಾ ಕಚ್ಚಾಡುತ್ತಿರುವ ಕಾರಣ, ಬಿಗ್ಬಾಸ್ಗೆ ಎಂಟ್ರಿಕೊಟ್ಟಿರುವ ಶುಭಾ ಪೂಂಜಾ ಮತ್ತು ಶೈನ್ ಶೆಟ್ಟಿ ಇವರಿಗೆ ಒಂದು ಟಾಸ್ಕ್ ನೀಡಿದ್ದಾರೆ. ಶೈನ್ ಶೆಟ್ಟಿಯವರು ವಿನಯ್ ಮತ್ತು ಸಂಗೀತಾರನ್ನು ಕರೆದು, ನೀವಿಬ್ಬರೂ ಒಬ್ಬರನ್ನೊಬ್ಬರು ಹೊಗಳಿ ಮಾತನಾಡಬೇಕು ಎನ್ನುತ್ತಾರೆ. ಆಗ ವಿನಯ್, ಸಂಗೀತಾಗೆ ಇರುವಷ್ಟು ಪೇಷೆನ್ಸ್ ಈ ಮನೆಯಲ್ಲಿ ಯಾರಿಗೂ ಇಲ್ಲ ಎನ್ನುತ್ತಾರೆ. ನಂತರ ಸಂಗೀತಾ, ವಿನಯ್ ಆ್ಯಕ್ಟಿಂಗ್ ಅನ್ನು ಬೀಟ್ ಮಾಡೋಕೆ ಯಾರಿಂದಲೂ ಆಗಲ್ಲ ಎಂದಾಗ ಇದಕ್ಕೆ ಉತ್ತರವಾಗಿ ವಿನಯ್, ಇದನ್ನು ಬೀಟ್ ಮಾಡಿದ್ದು ಸಂಗೀತಾ ಒಬ್ಬಳೇ ಎನ್ನುತ್ತಾರೆ. ನಂತರ ವಿನಯ್, ಸಂಗೀತಾ ಈಸ್ ನಾಟ್ ಎ ನೆಗೆಟಿವ್ ಪರ್ಸನ್ ಎಂದಾಗ ಖುದ್ದು ಸಂಗೀತಾಗೂ ಅಚ್ಚರಿಯಾಗುತ್ತದೆ. ಬಳಿಕ ಅವರು, ವಿನಯ್ ತುಂಬಾ ಸ್ವೀಟ್ ಪರ್ಸನ್, ಅವರ ಜೊತೆ ಜಾಸ್ತಿ ಕಾಲ ಸ್ಪೆಂಡ್ ಮಾಡಬೇಕು ಎಂದಾಗ, ವಿನಯ್ ಇನ್ನೂ 23 ದಿನ ಇದೆ ಎನ್ನುತ್ತಾರೆ. ಆಗ ಮಧ್ಯೆ ಬಾಯಿ ಹಾಕಿದ ಶೈನ್ ಶೆಟ್ಟಿ ಅವರು, ಈ ಸಮಯದಲ್ಲಿ ನಿಮಗಿಬ್ಬರಿಗೂ ಲವ್ ಆಗಿ ಬಿಟ್ರೆ ಅಂತ ನಮಗೆ ಟೆನ್ಷನ್ ಆಗ್ತಿದೆ ಎನ್ನುತ್ತಾರೆ. ಆಗ ಮನೆಯ ಸದಸ್ಯರೆಲ್ಲರೂ ಬಿದ್ದೂ ಬಿದ್ದೂ ನಕ್ಕರೆ, ಸಂಗೀತಾ ಮತ್ತು ವಿಜಯ್ ಒಬ್ಬರನೊಬ್ಬರು ತಬ್ಬಿಕೊಳ್ಳುತ್ತಾರೆ.
ಇದರ ಪ್ರೊಮೋಗೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗಿದೆ. ಕೊನೆಗೆ ಗೆಲ್ಲುವುದು ಸಂಗೀತಾನೇ ಎಂದು ಹಲವರು ಹೇಳಿದ್ದರೆ, ಇನ್ನು ಕೆಲವರು ವಿನಯ್ ಮಾತನ್ನು ಕೇಳಬೇಡಿ. ನೀವು ಅವರ ಪ್ರೀತಿಗೆ ಬೀಳ್ಬೇಡಿ ಎಂದು ಸಂಗೀತಾಗೆ ಇನ್ನು ಕೆಲವರು ಬುದ್ಧಿಮಾತು ಹೇಳಿದ್ದಾರೆ. ಸಂಗೀತ ಒಬ್ಬರೇ ಎಲ್ಲೂ ಕೂಡ ವಿನಯ್ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ, ಆದ್ರೆ ವಿನಯ್ day ಒನ್ನಿಂದ ಇವತ್ತಿನ ಎಪಿಸೋಡ್ ವರೆಗೂ ಸಂಗೀತ ಬಗ್ಗೆ ಮಾತನಾಡಿದ್ದಾರೆ. ಇಲ್ಲೇ ಅರ್ಥ ಆಗುತ್ತೆ ಯಾರ ವ್ಯಕ್ತಿತ್ವ ಹೇಗೆ ಅಂತ ಎಂದು ಕಮೆಂಟಿಗರೊಬ್ಬರು ಹೇಳಿದ್ದಾರೆ. ಇದು ಫ್ರೆಂಡ್ಷಿಪ್ ಅಲ್ಲ, ಬಕೆಟ್ ಎಂದು ಇನ್ನು ಕೆಲವರು ವಿನಯ್ಗೆ ಕಾಲೆಳೆಯುತ್ತಿದ್ದಾರೆ.
ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...