ಕಲರ್ಸ್ ಕನ್ನಡ ವಾಹಿನಿ ಬಿಗ್ಬಾಸ್ ಸ್ಪರ್ಧಿಯೊಬ್ಬರು ಹೇಳಿದ ಹಳೆದ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದು, ಇದು ಯಾರ ಧ್ವನಿ ಎಂದು ಪ್ರಶ್ನಿಸಿದೆ. ಧ್ವನಿ ಯಾರದ್ದು ಹೇಳಬಲ್ಲಿರಾ?
ಕೆಸಿಸಿ ಪಂದ್ಯ ಇದ್ದ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಬಿಬಾಸ್ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಇಂಟರೆಸ್ಟಿಂಗ್ ಎನ್ನುವಂತೆ ನಿನ್ನೆ ಅಂದರೆ ಶನಿವಾರದ ಎಪಿಸೋಡ್‌ನಲ್ಲಿ ಬಿಗ್ಬಾಸ್ನ ಮಾಜಿ ಸ್ಪರ್ಧಿ, ನಟಿ ಶ್ರುತಿ ಅವರು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಹಲವು ವಿಚಾರಗಳಿಗೆ ನ್ಯಾಯಧೀಶರಾಗಿ ತೀರ್ಪು ನೀಡಿದ್ದರು. ಎಲ್ಲಾ ಸ್ಪರ್ಧಿಗಳ ಜೊತೆ ಮಾತನಾಡಿದ್ದ ಅವರು ಕೆಲವು ಸಲಹೆಗಳನ್ನೂ ನೀಡಿದ್ದರು. ಈಗ ಇದರ ಬೆನ್ನಲ್ಲೇ, ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಮತ್ತು ನಟಿ ಶುಭಾ ಪೂಂಜಾ ಎಂಟ್ರಿ ಕೊಟ್ಟು ಬಿಗ್ಬಾಸ್ ಅನ್ನು ಮತ್ತಷ್ಟು ರಂಗೇರಿಸುತ್ತಿದ್ದಾರೆ. ಇದರ ನಡುವೆಯೇ ಇರುವ ಸ್ಪರ್ಧಿಗಳ ನಡುವೆ ಟಾಸ್ಕ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಕಾದಾಟ, ಹಾರಾಟ, ಕಿತ್ತಾಟ, ಕೂಗಾಟ ಎಲ್ಲವೂ ಬಿಗ್ಬಾಸ್ ವಿನ್ನರ್ ದಿನ ಹತ್ತಿರವಾಗುತ್ತಿದ್ದಂತೆಯೇ ಬಲು ಜೋರಾಗಿದೆ.
ಇದೀಗ ಇದರ ನಡುವೆಯೇ ಕಲರ್ಸ್ ಕನ್ನಡ ವಾಹಿನಿ, ಆಗ್ಗಾಗ್ಗೆ ಕೆಲವು ಪ್ರೊಮೋಗಳನ್ನು ರಿಲೀಸ್ ಮಾಡುತ್ತಾ ಬಿಗ್ಬಾಸ್ ಫ್ಯಾನ್ಸ್ ತಲೆಗೆ ಹುಳು ಬಿಡುವುದು ಉಂಟು. ಇದೀಗ ಅಂಥದ್ದೇ ಒಂದು ಪ್ರೊಮೋ ರಿಲೀಸ್ ಮಾಡಿದ್ದು, ಇದು ಯಾರ ದನಿ ಎಂದು ಹೇಳಬಲ್ಲಿರಾ ಎಂದು ಕೇಳಿದೆ. ಅವಿನಾಶ್ ಮತ್ತು ಪ್ರತಾಪ್ ಫೋಟೋ ಇದ್ದು, ಈ ದನಿ ಕೇಳಿದ ನೆನಪು ಇದ್ಯಾ ಎಂದು ಹೇಳುವ ಮೂಲಕ ಆಡಿಯೋ ಪ್ಲೇ ಮಾಡಿದೆ. ಅದರಲ್ಲಿ ಮಾತನಾಡುವ ಸ್ಪರ್ಧಿ, ಮೊದಲಿಗೆ ಒಂದು ಅಥವಾ ಎರಡು ವಾರ ಆಡಬೇಕು ಅನಿಸಿತ್ತು. ಆದರೆ ಈ ಥರ ಆದ್ಮೇಲೆ ಏನೇ ಆದರೂ ಸರಿ.... ನಾನು ಆಡ್ಲೇ ಬೇಕು... ಕಡೆಯವರೆಗೂ ಆಟ ಆಡ್ಲೇಬೇಕು... ಎಂದಿದ್ದಾರೆ. ಈ ದನಿಯನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದ್ದು, ಈ ದನಿ ಯಾರದ್ದು ಎಂದು ಗುರುತಿಸುವ ಚಾಲೆಂಜ್ ಅನ್ನು ನಿಮಗೆ ಬಿಟ್ಟಿದೆ. ಅದರ ದನಿ ಈ ಕೆಳಗೆ ಶೇರ್ ಆಗಿದೆ.
ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...
ಸಹಜವಾಗಿ ಬಿಗ್ಬಾಸ್ನ ಈ ಎಪಿಸೋಡ್ ನೋಡಿದವರು ಹಾಗೂ ಆಗ್ಗಾಗ್ಗೆ ನೋಡುವವರೂ ಸುಲಭದಲ್ಲಿ ದನಿಯನ್ನು ಗುರುತಿಸಬಹುದು. ಅಷ್ಟಕ್ಕೂ ಈ ಫೋಟೋದಲ್ಲಿ ಕಾಣಿಸುತ್ತಿರುವ ಡ್ರೋನ್ ಪ್ರತಾಪ್ ಅಥವಾ ಅವಿನಾಶ್ ಯಾರ ದನಿ ಇರಬಹುದು ಅಥವಾ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರದ್ದಾದರೂ ದನಿ ಇರಬಹುದು ಎಂದು ನಿಮಗೆ ಅನ್ನಿಸುತ್ತಿದೆಯೆ?
ನಿಮಗೆ ಇದಾಗಲೇ ತಿಳಿದಿರಬಹುದು. ಅದೇನೆಂದರೆ, ಈ ದನಿ ಡ್ರೋನ್ ಪ್ರತಾಪ್ದು ಎನ್ನುವುದು. ತಮ್ಮ ಕಂಪನಿಗೆ ಪ್ರಚಾರ ಸಿಗಬೇಕು ಎಂಬ ಉದ್ದೇಶದಿಂದ ಡ್ರೋನ್ ಪ್ರತಾಪ್ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟರು. ಆರಂಭದಲ್ಲಿ ‘ಒಂದೆರಡು ವಾರ ಮಾತ್ರ ‘ಬಿಗ್ ಬಾಸ್’ ಮನೆಯಲ್ಲಿ ಇರ್ತೀನಿ ಎಂದಿದ್ದರು. ಇದೇ ಕಾರಣಕ್ಕೆ ಅನೇಕರು ಡ್ರೋನ್ ಪ್ರತಾಪ್‌ನ ನಾಮಿನೇಟ್ ಕೂಡ ಮಾಡಿದ್ದರು. ಇದಾದ ಬಳಿಕ ರೊಚ್ಚಿಗೆದ್ದಿದ್ದ ಡ್ರೋನ್ ಪ್ರತಾಪ್, 15 ಜನರಲ್ಲಿ 11 ಜನ ನಾಮಿನೇಟ್ ಮಾಡಿದ್ದಾರೆ. ಇದನ್ನು ನೋಡಿದ ಮೇಲೆ ಎಲ್ಲರೂ ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎನಿಸಿದೆ. ಅದಕ್ಕೆ ನನಗೆ ಇರಬೇಕು ಅಂತ ಅನಿಸಿದೆ. ಈಗ ಈ ತರಹ ಆದ್ಮೇಲೆ ನಾನು ಆಡಬೇಕು. ಕೊನೆಯವರೆಗೂ ನಾನು ಆಡಲೇಬೇಕು. ಅದು ಏನಾದರೂ ಪರ್ವಾಗಿಲ್ಲ. ನಾನು ಆಡಲೇಬೇಕು.! ಅದೆಷ್ಟು ದಿವಸ ಆಗುತ್ತೋ, ಅಷ್ಟು ದಿವಸ ನಾನು ಆಡೇ ಆಡ್ತೀನಿ. ಪ್ರತಿ ವಾರ ನಾಮಿನೇಟ್ ಆದರೂ ನಾನು ಫೇಸ್ ಮಾಡೋಕೆ ರೆಡಿ ಇದ್ದೀನಿ ಎಂದೆಲ್ಲಾ ಹೇಳಿದ್ದರು. ಅದೇ ಆಡಿಯೋವನ್ನು ಇದೀಗ ರಿಲೀಸ್ ಮಾಡಲಾಗಿದೆ.
'ಯೇ ಮೆಮೊರಿ ಹೈ, ಕ್ಯಾ ಬೇಕಾಗ್ತಾ ಹೈ?' ಪಂಜಾಬ್ ಗಾಯಕನ ಜೊತೆ ಏನಮ್ಮಾ ಅನುಶ್ರೀ ಇದು?