ಕೊನೆಗೂ ಬಯಲಾಯ್ತು ಖರ್ಜೂರ ರಹಸ್ಯ! ಸತ್ಯ ಬಾಯ್ಬಿಟ್ಟ ಶಾರ್ವರಿ- ಮನೆಯಾಗತ್ತಾ ಸ್ಮಶಾನ?

Published : Apr 23, 2024, 01:02 PM IST
ಕೊನೆಗೂ ಬಯಲಾಯ್ತು ಖರ್ಜೂರ ರಹಸ್ಯ! ಸತ್ಯ ಬಾಯ್ಬಿಟ್ಟ ಶಾರ್ವರಿ- ಮನೆಯಾಗತ್ತಾ ಸ್ಮಶಾನ?

ಸಾರಾಂಶ

ಕೊನೆಗೂ ಬಯಲಾಗಿದೆ ಖರ್ಜೂರ ರಹಸ್ಯ. ಆ್ಯಕ್ಸಿಡೆಂಟ್​ ನಾನೇ ಮಾಡಿಸಿದ್ದು ಎಂದು ಶಾರ್ವರಿ ಒಪ್ಪಿಕೊಂಡಿದ್ದಾಳೆ. ಮುಂದೆ?  

ಕೊನೆಗೂ ಶಾರ್ವರಿ ಅಪಘಾತ ಮಾಡಿಸಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ. ಇಲ್ಲಿಯವರೆಗೆ ಮಹೇಶ್​ಗೆ ಇದ್ದ ಸಂದೇಹ ನಿಜವಾಗಿದೆ. ಇಡೀ ಮನೆ ಸ್ಮಶಾನ ಮಾಡುವುದೇ ನನ್ನ ಗುರಿ ಎಂದಿದ್ದಾಳೆ ಶಾರ್ವರಿ. ಇಷ್ಟು ದಿನಗಳಿಂದ ಮಹೇಶ್​ಗೆ ಕಾಡುತ್ತಿದ್ದ ಖರ್ಜೂರ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಅಪಘಾತಕ್ಕೂ, ಮಹೇಶ್​ ಹಾಸಿಗೆ ಮೇಲಿದ್ದಾಗ ಖರ್ಜೂರ ಖರ್ಜೂರ ಎಂದು ಕನವರಿಸುತ್ತಿದ್ದುದಕ್ಕೂ ಸಂಬಂಧ ಏನು ಎಂದು ತಿಳಿದಿದೆ. ಅಷ್ಟಕ್ಕೂ ಈಗ  ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್​ನಿಂದಲೇ. ಮಹೇಶ್​ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು.

ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್​.

ಕಾಂಗ್ರೆಸ್​ನಿಂದ ಹೆಸರು ದುರುಪಯೋಗ: ಆಮೀರ್​, ರಣವೀರ್​ ಬಳಿಕ ಅಲ್ಲು ಅರ್ಜುನ್ ಗರಂ-ತಪ್ಪಿತಸ್ಥರಿಗೆ ಶಿಕ್ಷೆ ಏನು?

ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದಾನೆ. ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್​ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದಾನೆ ಮಹೇಶ್​. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಾಳೆ. ಆದರೆ ಈಗ ಖರ್ಜೂರ ರಹಸ್ಯ ಬಯಲಾಗಿದೆ. ಅದೇನೆಂದರೆ, ಒಂದೊಂದೇ ಖರ್ಜೂರ ಬಾಯಿಗೆ ಹಾಕಿಕೊಳ್ಳುತ್ತಲೇ ಶಾರ್ವರಿ, ಇದು ಮಾಧವ, ಇನ್ನೊಂದು ಮಾಧವನ ಪತ್ನಿ ಸುಮತಿ... ಎಂದಿದ್ದಾಳೆ. ಸಂಪೂರ್ಣ ಕುಟುಂಬ ನಾಶ ಮಾಡುತ್ತೇನೆ ಎಂದಿದ್ದನ್ನು ಮಹೇಶ್​ ಕೇಳಿಸಿಕೊಂಡಿದ್ದ. ಅದನ್ನೀಗ ಪತ್ನಿಗೆ ಹೇಳಿದಾಗ, ಈಗ ಶಾರ್ವರಿ ತಾನೇ ಮಾಡಿಸಿದ್ದು ಆ್ಯಕ್ಸಿಡೆಂಟ್​ ಎಂದು ಒಪ್ಪಿಕೊಂಡಿದ್ದಾಳೆ.
 

ನಿಜ ಜೀವನದ ಪ್ರತಿಬಿಂಬವಾಗ್ತಿವೆ ಧಾರಾವಾಹಿಗಳು: ಸೀರಿಯಲ್​ಗಳಲ್ಲೂ ಕೆಲಸ ಕಳೆದುಕೊಳ್ತಿರೋ ಪಾತ್ರಧಾರಿಗಳು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?