ಸತ್ಯದ ದಾರಿಯಲ್ಲಿ ಮುಳ್ಳುಗಳೇ ಜಾಸ್ತಿ! ಮಲ್ಲಿಗೆ ನ್ಯಾಯ ಒದಗಿಸಿದ ಭೂಮಿಯ ಬದುಕಲ್ಲೀಗ ಸಂಕಷ್ಟ....

Published : Feb 27, 2024, 01:53 PM IST
ಸತ್ಯದ ದಾರಿಯಲ್ಲಿ ಮುಳ್ಳುಗಳೇ ಜಾಸ್ತಿ! ಮಲ್ಲಿಗೆ ನ್ಯಾಯ ಒದಗಿಸಿದ ಭೂಮಿಯ ಬದುಕಲ್ಲೀಗ ಸಂಕಷ್ಟ....

ಸಾರಾಂಶ

ಮಲ್ಲಿಯ ಜೊತೆ ಜಯದೇವನ ಮದುವೆ ಮಾಡಿಸಿರುವ ಭೂಮಿಕಾಗೆ ಈಗ ಅಗ್ನಿಪರೀಕ್ಷೆ: ಆಕೆಯ ಖುಷಿಯನ್ನು  ಹಾಳು ಮಾಡುವ ಪಣತೊಟ್ಟಿದ್ದಾಳೆ ಅತ್ತೆ ಶಕುಂತಲಾದೇವಿ.  

ಸತ್ಯ ಯಾವತ್ತಿದ್ದರೂ ಕಹಿಯೇ. ಸತ್ಯದ ಹಾದಿಯಲ್ಲಿ ನೂರೆಂಟು ವಿಘ್ನಗಳು ಇರುವುದು ಸಹಜವೇ. ಅದೇ ರೀತಿಯ ಪೇಚಾಟಕ್ಕೆ ಸಿಲುಕಿದ್ದಾಳೆ ಅಮೃತಧಾರೆಯ ಭೂಮಿಕಾ. ಭೂಮಿಕಾ ತಂಗಿ ಅಪೇಕ್ಷಾ ಮದ್ವೆ ಮುರಿದು ಬಿದ್ದಿದೆ.  ಕೆಲಸದ ಹುಡುಗಿ ಮಲ್ಲಿಗೆ ಗರ್ಭಿಣಿ ಮಾಡಿ ಅಪೇಕ್ಷಾ ಜೊತೆ  ರಾಜಾರೋಷವಾಗಿ ಮದುವೆಗೆ ರೆಡಿಯಾಗಿದ್ದ ಜಯದೇವನ ಮುಖವಾಡವನ್ನು ಭೂಮಿಕಾ ಬಯಲು ಮಾಡಿದ್ದಾಳೆ. ಇನ್ನೇನು ಜಯದೇವ ಅರ್ಪಿತಾಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಭೂಮಿಕಾ, ಮಲ್ಲಿಗೆ ಮದುವಣಗಿತ್ತಿಯಂತೆ ಸಿಂಗಾರ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾಳೆ. ಜಯದೇವ  ಕೆಲಸದಾಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವ ವಿಷ್ಯ ಗೊತ್ತಿದ್ದರೂ, ಆಕೆಯನ್ನು ನಾಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಜಯದೇವನ ಅಮ್ಮನಿಗೆ ಮರ್ಮಾಘಾತವಾಗಿದೆ.  ಇಷ್ಟವಿಲ್ಲದ ಮದ್ವೆಗೆ ರೆಡಿಯಾಗಿದ್ದ ಅಪೇಕ್ಷಾ ಮಾತ್ರ ಸಂಪೂರ್ಣ ಖುಷಿಯಾಗಿದ್ದಾರೆ.  ಜಯದೇವನಿಂದ ಕೆಲಸದಾಕೆ ಗರ್ಭಿಣಿಯಾಗಿರುವ ವಿಷಯ ಭೂಮಿಕಾಗೆ ತಿಳಿದರೂ ಏನೂ ಮಾಡದ ಅಸಹಾಯಕಳಾಗಿದ್ದಳು. ಆದರೆ ಕೊನೆಗೂ ಮಲ್ಲಿಯನ್ನು ಹುಡುಕಿ ಬಂದು ಜಯದೇವನ ಜೊತೆ ಮದ್ವೆ ಮಾಡಿಸಿದ್ದಾಳೆ.

ಜಯದೇವನ ವಿಷಯವನ್ನು ಭೂಮಿಕಾ ಮೊದಲೇ ಗೌತಮ್​ಗೆ ತಿಳಿಸಿದ್ದಳು. ಆದರೆ ಮಲ್ಲಿ ಸಿಗದೇ ಇರುವ ಕಾರಣ, ಆತನೂ ನಿಸ್ಸಾಯಕನಾಗಿದ್ದ. ಜಯದೇವನ ತಾಯಿ ಅಂದರೆ ತನ್ನ ಚಿಕ್ಕಮ್ಮನ ವಿರುದ್ಧದ ಯಾವತ್ತೂ ಹೋಗದಿದ್ದ ಗೌತಮ್​, ಇದೀಗ ಪತ್ನಿ ಭೂಮಿಕಾ ಪರ ನಿಂತು ಮಲ್ಲಿಗೆ ನ್ಯಾಯ ಒದಗಿಸಿದ್ದಾನೆ. 

ಗರ್ಭಿಣಿಯರಿಗೆ ಹುರುಳಿ ಕಾಳಿನ ಟೇಸ್ಟಿ ರೆಸಿಪಿ ಜೊತೆ, ಚಿಕ್ಕಪುಟ್ಟ ಸಮಸ್ಯೆಗಳಿಗೆ ನಟಿ ಅದಿತಿ ಪರಿಹಾರ

ಇದು ಚಿಕ್ಕಮ್ಮನ ಕೋಪಕ್ಕೆ ಕಾರಣವಾಗಿದೆ. ಸತ್ಯದ ಹಾದಿ ಕಠಿಣವೇ ಎನ್ನುವ ಮಾತೀಗ ಸತ್ಯವಾಗುತ್ತಿದೆ. ಇದಕ್ಕೆ ಕಾರಣ, ಸತ್ಯವನ್ನು ಬಯಲಿಗೆಳೆದ ಭೂಮಿಕಾ ವಿರುದ್ಧ ಅತ್ತೆ ಶಕುಂತಲಾ ದೇವಿ ಕೆಂಡಾಮಂಡಲವಾಗಿದ್ದಾಳೆ. ಮೊದಲಿನಿಂದಲೂ ಭೂಮಿಕಾಳ ಮೇಲೆ ಕೋಪ ಇದ್ದರೂ, ಸಮಾಧಾನ ಮಾಡಿಕೊಳ್ಳುತ್ತಿದ್ದ ಶಕುಂತಲಾ ದೇವಿಯ ವರಸೆ ಈಗ ಬದಲಾಗಿದೆ. ಆಕೆಯನ್ನು ಹೇಗಾದರೂ ಮಾಡಿ ತುಳಿಯುವ ಪ್ಲ್ಯಾನ್​ ಹಾಕುತ್ತಿದ್ದಾಳೆ.

ಈ ನಡುವೆಯೇ ಭೂಮಿಕಾ ಶಕುಂತಲಾ ದೇವಿಯ ಬಳಿ ಬಂದು ಕ್ಷಮೆ ಕೇಳಿದ್ದಾಳೆ. ತಾನು ನ್ಯಾಯದ ಪರ ಇದ್ದುದಾಗಿ ಹೇಳಿದ್ದಾಳೆ. ಅಷ್ಟಕ್ಕೂ ಆಕೆಗೆ ಈ ಕುತಂತ್ರದ ಹಿಂದೆ ತನ್ನ ಅತ್ತೆ ಶಕುಂತಲಾ ದೇವಿ ಇರುವ ವಿಷಯ ತಿಳಿದಿಲ್ಲ. ಜಯದೇವ ಮಲ್ಲಿಯನ್ನು ಗರ್ಭಿಣಿ ಮಾಡಿರುವ ವಿಷಯ ತಿಳಿದಿದ್ದರೂ, ಆಕೆಯನ್ನು ನಾಪತ್ತೆ ಮಾಡುವಲ್ಲಿ ಶಕುಂತಲಾ ದೇವಿ ಯಶಸ್ವಿಯಾಗಿದ್ದಳು. ಈ ಸತ್ಯ ಭೂಮಿಕಾಗೆ ಗೊತ್ತಿಲ್ಲ. ಈ ಘಟನೆಯಿಂದ ಶಕುಂತಲಾ ದೇವಿಯ ಮನಸ್ಸಿಗೂ ನೋವಾಗಿದೆ ಎನ್ನುವುದು ಅಷ್ಟೇ ಗೊತ್ತು. ಆದ್ದರಿಂದ ಶಕುಂತಲಾ ದೇವಿಯ ಬಳಿ ಕ್ಷಮೆ ಕೇಳಿದ್ದಾಳೆ. ಆದರೆ ಶಕುಂತಲಾ ದೇವಿ ಮಾತ್ರ ಸೊಸೆ ಭೂಮಿಕಾ ಇನ್ನು ಮುಂದೆ ಹೇಗೆ ಈ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಎಂದು ನೋಡುತ್ತೇನೆ. ಗೌತಮ್​ ಜೊತೆ ಹೇಗೆ ಆಕೆ ಸಂಸಾರ ಮಾಡುತ್ತಾಳೆ ಎನ್ನುವುದನ್ನು ನೋಡುತ್ತೇನೆ ಎಂದು ಚಾಲೆಂಜ್​ ಹಾಕಿದ್ದಾಳೆ. ಎಷ್ಟೆಂದರೂ ಸತ್ಯದ ಹಾದಿ ಕಠಿಣವೇ... ಸತ್ಯದ ದಾರಿಯಲ್ಲಿ ಕಲ್ಲು-ಮುಳ್ಳುಗಳೇ ಜಾಸ್ತಿ ಎನ್ನುವುದು ಸಾಬೀತಾಗಿದೆ. 
 ನಿವೇದಿತಾ- ಚಂದನ್​ಶೆಟ್ಟಿ ದಾಂಪತ್ಯಕ್ಕೆ ನಾಲ್ಕು ವರ್ಷ: ಹೊಸ ಚಿತ್ರದ ರೊಮ್ಯಾಂಟಿಕ್​ ಮೂಡ್​ನಲ್ಲಿ ದಂಪತಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!