ಆ್ಯಂಕರ್​ ಅನುಶ್ರೀಗೆ ಈ ಪರಿ ಮೋಸ ಮಾಡೋದಾ ತೀರ್ಪುಗಾರರು? ಒಬ್ಬಂಟಿಯಾದ ನಟಿ ಕಣ್ಣೀರು

By Suchethana D  |  First Published Jun 15, 2024, 3:55 PM IST

'ಮಹಾನಟಿ' ಷೋನಲ್ಲಿ ಆ್ಯಂಕರ್​ ಅನುಶ್ರೀಗೆ ಷೋನ ತೀರ್ಪುಗಾರರು ಮಹಾ ಮೋಸ ಮಾಡಿದ್ದಾರೆ. ಇದರಿಂದ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಆಗಿದ್ದೇನು?
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಅದ್ಭುತ ನಟಿ ಕೂಡ ಹೌದು.  ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಜೀ ಕನ್ನಡದ ಮಹಾನಟಿ  ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿ.ವಿ ಷೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.   ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಇನ್ನು ಅನುಶ್ರೀ ಇದ್ದಲ್ಲಿ ಹಾಸ್ಯ ಇದ್ದದ್ದೇ. ಇವರು ವೇದಿಕೆಗೆ ಹೆಚ್ಚಾಗಿ ಲೇಟಾಗಿ ಬರ್ತಾರೆ ಎನ್ನುವ ಆಪಾದನೆ ಇದೆಯಂತೆ. ಅದಕ್ಕಾಗಿಯೇ ಬೇಗ ಬೇಗ ರೆಡಿಯಾಗಿ ಮಹಾನಟಿ ಷೋಗೆ ಬಂದಾಗ ಅಲ್ಲಿ ಯಾವ ತೀರ್ಪುಗಾರರೂ ಇರಲಿಲ್ಲ. ಅವರ ಖುರ್ಚಿ ಖಾಲಿ ಇತ್ತು. ತಾವೇ ಬೇಗ ಬಂದಿರುವುದಾಗಿ ಅನುಶ್ರೀ ಹೇಳ್ತಿರುವಂತೆಯೇ ಅಶರೀರವಾಣಿಯೊಂದು ಕೇಳಿಬರುತ್ತದೆ. ಮೇಡಂ ಎಲ್ಲಾ ತೀರ್ಪುಗಾರರು ಹೊರಗಡೆ ಆಗಲೇ ಪ್ರಾಕ್ಟೀಸ್​ಗೆ ಹೋಗಿದ್ದಾರೆ ಎಂದು. ತಮ್ಮನ್ನು ಬಿಟ್ಟು ಹೋದುದಕ್ಕೆ ಅಳುತ್ತಾ ಅನುಶ್ರೀ ಹೊರಗಡೆ ಹೋದಾಗ ಅಲ್ಲಿ ಪ್ರೇಮಾ, ರಮೇಶ್​, ನಿಶ್ವಿಕಾ ಎಲ್ಲರೂ ಡಾನ್ಸ್​ ಮಾಡುತ್ತಿರುತ್ತಾರೆ. ಅನುಶ್ರೀ ಅಳುತ್ತಾ ಹೋಗುತ್ತಾರೆ.

Tap to resize

Latest Videos

ಖುಷಿಯಾಗಿದ್ರೆ ಓವರ್​ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್​ ಅಂತೀರಾ: ಆ್ಯಂಕರ್​ ಅನುಶ್ರೀ ಬೇಸರ

ಅಲ್ಲಿ ಸೆಟ್​ಗೆ ಹೋದ ಮೇಲೆ ತಾವೂ ಡಾನ್ಸ್​ ಮಾಡುವುದಾಗಿ ಹೇಳಿದ ಅನುಶ್ರೀ ಅತ್ತ ಡಾನ್ಸ್​ ಮಾಡುವಾಗಲೇ ಇತ್ತ ಎಲ್ಲಾ ತೀರ್ಪುಗಾರರು ಕಾಣೆಯಾಗುತ್ತಾರೆ.  ಈ ಹಾಸ್ಯದ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಆ್ಯಂಕರ್ ಅನುಶ್ರೀನ ಸ್ಟೇಜ್ ಮೇಲೆ ಬಿಟ್ಟು ಜಡ್ಜಸ್ ಎಲ್ಲ ಆಚೆ ಏನ್ ಮಾಡ್ತಾವ್ರೆ ಗೊತ್ತಾ? ಎನ್ನುವ ಶೀರ್ಷಿಕೆಯ ಜೊತೆ ಇದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ರಿಯಲ್​ ಆಗಿಯೂ ತಮಗೆ ಎಲ್ಲರೂ ಬಿಟ್ಟು ಹೋದವರ ರೀತಿಯಲ್ಲಿ ಅನುಶ್ರೀ ಆ್ಯಕ್ಟ್​ ಮಾಡಿರುವುದಕ್ಕೆ ಫ್ಯಾನ್ಸ್​ ಭೇಷ್​ ಎನ್ನುತ್ತಿದ್ದಾರೆ.

ಇನ್ನು ಹೊರಾಂಗಣದಲ್ಲಿ ರಮೇಶ್​, ಪ್ರೇಮಾ  ಮತ್ತು ನಿಶ್ವಿಕಾ ಅವರ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು... ಹಾಡಿಗೆ ನಡೆಯುತ್ತಿರುವ ರಿಹರ್ಸಲ್​ ಎಲ್ಲರ ಗಮನ ಸೆಳೆಯುತ್ತದೆ. ವಯಸ್ಸೇ ಆಗಲ್ಲ ಅಂತಿರೋ ರಮೇಶ್​ ಅವರು 1996ರಲ್ಲಿ ಅಮೃತವರ್ಷಿಣಿ ಚಿತ್ರ ಬಿಡುಗಡೆಯಾದಾಗ ಹೇಗಿದ್ದರೋ ಇಲ್ಲಿಯೂ ಹಾಗೆಯೇ ಕಾಣಿಸುತ್ತಾರೆ. ಈಗ 59 ವರ್ಷವಾದರೂ 29ರ ತರುಣನಂತೆಯೇ ಅವರು ಕಾಣಿಸುತ್ತಾರೆ. ಸೌಂದರ್ಯದಲ್ಲಿ ಯಾರಿಗೂ ಕಮ್ಮಿ ಇಲ್ಲ ಅಂತಿದ್ದರೂ ನಟಿ ಪ್ರೇಮಾ ಅವರಿಗೆ 47 ವರ್ಷ ವಯಸ್ಸಾಗಿರುವುದು ಗೋಚರಿಸುತ್ತದೆ. ಇದನ್ನೇ ಕಮೆಂಟ್​ನಲ್ಲಿಯೂ ಸಾಕಷ್ಟು ಮಂದಿ ಹೇಳುತ್ತಿದ್ದಾರೆ. 

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಅರುಣ್​ ಸಾಗರ್​ ಹೆಸರು ಹೇಳಿದ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!


click me!