ಸೀತಾ ಪ್ರೀತಿಗೆ ಹಂಬಲಿಸಿರೋ ರಾಮ್​ಗೆ ಸಿಕ್ರು ಏಳು ಮಂದಿ ಲವರ್ಸ್​! ಆಹಾ... ಏನು ನೋಟ...

Published : Feb 17, 2024, 12:13 PM ISTUpdated : Feb 17, 2024, 12:17 PM IST
ಸೀತಾ ಪ್ರೀತಿಗೆ ಹಂಬಲಿಸಿರೋ  ರಾಮ್​ಗೆ ಸಿಕ್ರು ಏಳು ಮಂದಿ ಲವರ್ಸ್​! ಆಹಾ... ಏನು ನೋಟ...

ಸಾರಾಂಶ

ಪ್ರೇಮಿಗಳ ದಿನದ ವಿಶೇಷವಾಗಿ ಸೀತಾರಾಮ ಸೀರಿಯಲ್​ ರಾಮ್​ಗೆ ಏಳು ಮಂದಿ ಯುವತಿಯರು ಪ್ರಪೋಸ್​ ಮಾಡಿದ್ದಾರೆ. ಹೀಗಿತ್ತು ನೋಡಿ ವಿಶೇಷತೆ...  

ಪ್ರೇಮಿಗಳ ದಿನ ಮುಗಿದಿದೆ. ವಿದೇಶದ ಸಂಸ್ಕೃತಿ ಇದು ಎಂದು ಹೇಳುತ್ತಿದ್ದರೂ ಪ್ರೇಮಿಗಳ ದಿನವನ್ನು ಅಚರಿಸುವ ದೊಡ್ಡ ವರ್ಗವೇ ಇದೆ. ಇನ್ನು ಸೀರಿಯಲ್​ಗಳಲ್ಲಿ ಕೇಳಬೇಕೆ? ಇಂಥ ವಿಶೇಷ ದಿನಕ್ಕೆ ವಿಶೇಷ ಎಪಿಸೋಡ್​ಗಳ ಸುರಿಮಳೆಯೇ ಆಗುತ್ತದೆ. ಒಂದು ವಾರದ ಪ್ರೇಮಿಗಳ ದಿನವನ್ನು ಸೀರಿಯಲ್​ಗಳಲ್ಲಿ ಒಂದು ತಿಂಗಳು ಎಳೆದರೂ ಅಚ್ಚರಿಯೇನಿಲ್ಲ. ಇದೇ ವೇಳೆ ಸೀರಿಯಲ್​ ನಟ-ನಟಿಯರಿಂದ ಬೇರೆ ಬೇರೆ ಕಡೆಗಳಲ್ಲಿ ಭರ್ಜರಿ ಕಾರ್ಯಕ್ರಮಗಳೂ ನಡೆಯುತ್ತವೆ. ಅಲ್ಲಿನ ಪ್ರೇಕ್ಷಕರನ್ನು ತಮ್ಮ ಸೀರಿಯಲ್​ಗಳಿಗೆ ಸೆಳೆದುಕೊಳ್ಳುವ ತಂತ್ರವಿದು. ಇನ್ನು ಜನರಂತೂ ಬಿಡಿ. ಈಗೀಗ ಚಿತ್ರ ತಾರೆಯರಿಗಿಂತಲೂ ಜನರ ಮನಸ್ಸನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಮನಸ್ಸನ್ನು ಕದಿಯುತ್ತಿರುವವರು ಧಾರಾವಾಹಿ ನಟ-ನಟಿಯರೇ ಎಂದರೂ ತಪ್ಪಲ್ಲ. ಇದೇ ಕಾರಣಕ್ಕೆ ಸೀರಿಯಲ್​ಗಳ ಪಾತ್ರಧಾರಿಗಳನ್ನು ತಮ್ಮ ಮನೆಯವರಂತೆಯೇ ಪ್ರೀತಿಸುವ ದೊಡ್ಡ ವರ್ಗವೇ ಇದೆ. 

ಇದೇ ರೀತಿ ಬಹುತೇಕ ಮಂದಿಯ ಮನಗೆದ್ದಿರುವ ಸೀರಿಯಲ್​ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​. ಸೀತೆ ಮತ್ತು ರಾಮ್​ ನಡುವಿನ ಕುತೂಹಲ ಲವ್​ ಸ್ಟೋರಿಯ ಜೊತೆಗೆ ಪುಟಾಣಿ ಸಿಹಿ ಮನೆ ಮಂದಿಗೆ ಅಚ್ಚುಮೆಚ್ಚಾಗಿದ್ದಾರೆ. ಉಳಿದ ಧಾರಾವಾಹಿಗಳಂತೆ ಇಲ್ಲಿಯೂ ನಾಯಕಿ, ಲೇಡಿ ವಿಲನ್​, ಪ್ರೀತಿ-ಪ್ರೇಮ, ಕುತಂತ್ರ ಎಲ್ಲವೂ ಮಾಮೂಲಾಗಿದ್ದರೂ, ಬಹುತೇಕ ಸೀರಿಯಲ್​ಗಳಿಗಿಂತಲೂ ಭಿನ್ನವಾದ ಕಥಾಹಂದರವನ್ನು ಹೊಂದಿರುವ ಈ ಸೀರಿಯಲ್​ ಜನರಿಗೆ ಅಚ್ಚುಮೆಚ್ಚು.

ಪ್ರೇಮಿಗಳ ದಿನದಂದು ರಾಮ್‌ನಿಗೆ ಸೀತಾ ಪ್ರಪೋಸ್‌: ಅರೆರೆ... ಪ್ರಾರ್ಥನಾ ಕಥೆ ಏನು ಕೇಳಿದ ಫ್ಯಾನ್ಸ್!

 ಇದೀಗ ಸೀತಾ-ರಾಮ ಸೀರಿಯಲ್ ಒಂದು ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ.  ತನ್ನ ಪ್ರೀತಿಯನ್ನು ಇನ್ನೂ ಹೇಳಿಕೊಳ್ಳಲಾಗದೇ ರಾಮ್​ ಚಡಪಡಿಸುತ್ತಿದ್ದರೆ, ಸೀತಾಳಿಗೆ ಇದರ ಅರಿವೇ ಇಲ್ಲ. ಆಕೆ ರಾಮ್​ ಕೇವಲ ತನ್ನ ಬೆಸ್ಟ್​ ಫ್ರೆಂಡ್​ ಅಂದಷ್ಟೇ ಅಂದುಕೊಂಡಿದ್ದಾಳೆ. ಶ್ರೀಮಂತನಾದರೂ ಇಷ್ಟು ದಿನ ತನ್ನದೇ ಕಚೇರಿಯಲ್ಲಿ ನೌಕರನಂತೆ ದುಡಿಯುತ್ತಿದ್ದಾಗ ಆತನನ್ನು ಫ್ರೆಂಡ್ ಮಾಡಿಕೊಂಡಿದ್ದ ಸೀತಾಳಿಗೆ ನಿಜ ವಿಷಯ ಗೊತ್ತಾಗಿ ಸಿಟ್ಟು ನೆತ್ತಿಗೇರಿತ್ತು. ತನ್ನ ಕಂಪೆನಿಯ ಯಜಮಾನನ ಜೊತೆ ತನ್ನಂಥ ಸಾಮಾನ್ಯ ವರ್ಗದವಳು ಫ್ರೆಂಡ್​ ಆಗಲು ಸಾಧ್ಯವೇ ಇಲ್ಲ ಎಂದು ಮಾತು ಬಿಟ್ಟಿದ್ದಳು. ಇವರಿಬ್ಬರ ನಡುವೆ ಸಿಹಿ ಸೇತುವೆಯಾಗಿ ಕೊನೆಗೂ ಸೀತಾಳ ಕೋಪ ಕರಗಿದೆ. ಆದರೂ ರಾಮ್​ಗೆ ಸೀತಾಳ ಎದುರು ಪ್ರೀತಿಯನ್ನು ಹೇಳಿಕೊಳ್ಳುವುದು ಹೇಗೆ ಎಂಬ ಚಡಪಡಿಕೆ.

ಆದರೆ ಒಬ್ಬಳಿಗಾಗಿ ಹಂಬಲಿಸ್ತಿರೋ ರಾಮ್​ಗೆ ಏಳು ಮಂದಿ ಪಟ್ಟಿಗೇ ಲವ್​ ಪ್ರಪೋಸ್​ ಮಾಡಿದ್ದಾರೆ! ಹೌದು. ಇಂಥದ್ದೊಂದು ನಡೆದಿದ್ದು ಕಾರಟಗಿಯಲ್ಲಿ. ಕಾರಟಗಿಯಲ್ಲಿ ನಡೆದ ಪ್ರೇಮ ಸಂಗಮ ಕಾರ್ಯಕ್ರಮದಲ್ಲಿ ಸೀತಾರಾಮ್​ ಪಾತ್ರಧಾರಿಗಳಾದ ವೈಷ್ಣವಿ ಗೌಡ ಮತ್ತು ಗಗನ್​ ಚಿನ್ನಪ್ಪ ಹಾಜರಿದ್ದರು. ಈ ಸಂದರ್ಭದಲ್ಲಿ, ಏಳು ದಿನ ನಡೆಯುವ ಪ್ರೇಮಿಗಳ ದಿನಗಳ ದ್ಯೋತಕವಾಗಿ ಏಳು ಮಂದಿ ಯುವತಿಯರು ಗಗನ್​ ಅವರಿಗೆ ಪ್ರಪೋಸ್​ ಮಾಡಿದ್ದಾರೆ. ರೋಸ್​ ಡೇ,(ಫೆಬ್ರವರಿ 7), ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12) ಮತ್ತು ಕಿಸ್ ಡೇ (ಫೆಬ್ರವರಿ 13) ಆದ ಮೇಲೆ 14ರಂದು ಪ್ರೇಮಿಗಳ ದಿನ ಎನ್ನಲಾಗುತ್ತದೆ. ರಾಮ್​ಗೆ ಹೇಗಿತ್ತು ನೋಡಿ ಪ್ರಪೋಸ್​... 

ಒಳಗೆ ಸೇರಿತು ಗುಂಡು... ಮತ್ತಿನ ಗತ್ತಲ್ಲಿ ಪತಿಗೆ ಮುತ್ತು ಕೊಟ್ಟ ಭೂಮಿಕಾ! ಗೌತಮ್​ ಸುಸ್ತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?