ಗಂಡಂದಿರಿಗೆ ಒಂದು ವಾರದ ಚಾಲೆಂಜ್​ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್​! ಏನಿದು ವಿಷ್ಯ?

Published : Feb 16, 2024, 01:04 PM ISTUpdated : Feb 16, 2024, 01:07 PM IST
ಗಂಡಂದಿರಿಗೆ ಒಂದು ವಾರದ ಚಾಲೆಂಜ್​ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್​! ಏನಿದು ವಿಷ್ಯ?

ಸಾರಾಂಶ

ಭಾಗ್ಯಲಕ್ಷ್ಮಿ ಮನೆಬಿಟ್ಟು ಹೋಗಿದ್ದಾಳೆ. ತಾಂಡವ್​ಗೆ ಒಂದು ವಾರದ ಟಾಸ್ಕ್​ ಶುರುವಾಗಿದೆ. ಇದನ್ನು ನೋಡಿ ಮಹಿಳಾ ಫ್ಯಾನ್ಸ್​ ಏನಂತಿದ್ದಾರೆ?   

ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್​ ಪತ್ನಿ ಭಾಗ್ಯಳಿಗೆ ಹೇಳಿ ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕುವಲ್ಲಿ ತಾಂಡವ್​ ಯಶಸ್ವಿಯಾಗಿದ್ದಾನೆ.  ಶ್ರೇಷ್ಠಾಳ ಪ್ರೇಮದ ನಶೆಯಲ್ಲಿರೋ ತಾಂಡವ್​ಗೆ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳು ಬೇಡವಾಗಿದೆ. ಆದ್ದರಿಂದ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದ. ಮನೆಬಿಟ್ಟು ಹೋಗಲು ರೆಡಿಯಾಗಿದ್ದ ಭಾಗ್ಯ ಈಗ ಪತಿಗೆ ಚಾಲೆಂಜ್​ ಹಾಕಿದ್ದಳು. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಳು. ಏಳು ದಿನ ತಾನೆ, ಅದೇನು ದೊಡ್ಡ ಮಹಾ? ಅಷ್ಟು ದೊಡ್ಡ ಬಿಸಿನೆಸ್​ ನಡೆಸೋ ತನಗೆ ಏಳು ದಿನ ಮನೆ ನಡೆಸುವುದು ಕಷ್ಟವೇ ಎಂದುಕೊಂಡಿದ್ದ. 

ಇದೀಗ ಆತನ ಟಾಸ್ಕ್​ ಶುರುವಾಗಿದೆ.  ಮೊದಲ ಟಾಸ್ಕ್​ನಲ್ಲಿ ಮಕ್ಕಳನ್ನು ಒಲಿಸಿಕೊಳ್ಳಲು ನೋಡಿದ್ದ ತಾಂಡವ್​ಗೆ ಹಿನ್ನಡೆಯಾಗಿತ್ತು. ದುಡ್ಡಿದ್ದರೆ, ದುಬಾರಿ ಗಿಫ್ಟ್​ ಕೊಟ್ಟರೆ ಮಕ್ಕಳು ಖುಷಿಯಿಂದ ತನ್ನ ಕಡೆ ವಾಲುತ್ತಾರೆ ಎಂದು ಆತ ಅಂದುಕೊಂಡಿದ್ದ.   ದುಬಾರಿ ಗಿಫ್ಟ್‌ ಕೊಟ್ಟು ಮಕ್ಕಳ ಪ್ರೀತಿ ಗಳಿಸಬಹುದು ಎನ್ನುವ ಅವನ ಅನಿಸಿಕೆ ಸುಳ್ಳಾಗಿದೆ. ಮಗ ಗಿಫ್ಟ್‌ ಎಸೆದು ಹೋದರೆ, ಮಗಳು ತನಗೆ ಇದೆಲ್ಲಾ ಬೇಡ ಎಂದು ಅಪ್ಪನ ಮುಖಕ್ಕೆ ಹೊಡೆಯುವಂತೆ ಹೇಳಿದ್ದಾಳೆ.  ದುಡ್ಡೇ ದೊಡ್ಡಪ್ಪ ಎಂಬ ಗಾದೆ ಎಲ್ಲ ಸಂದರ್ಭದಲ್ಲಿಯೂ ಅನ್ವಯ ಆಗುವುದಿಲ್ಲ. ಮಕ್ಕಳ ಪ್ರೀತಿಯನ್ನು ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಮೊದಲ ಅರಿವು ತಾಂಡವ್​ಗೆ ಆಗಿದೆ.

ಮಹಾಭಾರತದ 'ಕೃಷ್ಣ' ಪಾತ್ರಧಾರಿಗೆ ಪತ್ನಿಯಿಂದ ಟಾರ್ಚರ್​? ಲೇಡಿ ಎಸಿಪಿ ಎಂಟ್ರಿ- ಪೊಲೀಸರು ಹೇಳಿದ್ದೇನು?
  
ಈಗ ಅಡುಗೆ ಮಾಡುವ ಸರದಿ. ಆತ ಏನೇ ಸಹಾಯ ಕೇಳಿದರೂ ಕುಸುಮಾ ಆಗಲೀ, ಅಪ್ಪ ಆಗಲೀ ಆತನಿಗೆ ಸಹಕರಿಸುತ್ತಿಲ್ಲ. ಏಕೆಂದರೆ ಯಾರ ಸಹಾಯವೂ ಇಲ್ಲದೇ ಮನೆ ನಿಭಾಯಿಸುವುದು ಸುಲಭ ಎಂದಿದ್ದಾನಲ್ಲಾ ಆಸಾಮಿ. ಆದರೆ ಈಗ ಪೇಚಿಗೆ ಸಿಲುಕಿದ್ದಾನೆ ತಾಂಡವ್​. ಅನ್ನಕ್ಕೆ ಎಷ್ಟು ನೀರು ಹಾಕಬೇಕು ಎಂದು ಕೇಳಿದಾಗ ಕುಸುಮಾ ಹೇಳಲಿಲ್ಲ. ನೀನು ಹೇಳದಿದ್ರೆ ಏನು ನನಗೆ ಗೊತ್ತಾಗಲ್ವಾ ಎಂದು ತಾನೇ ಒಂದಿಷ್ಟು ನೀರು ಹಾಕಿ ಅನ್ನ ಮಾಡಿದ್ದಾನೆ. ಬಹುಶಃ ಆ ಅನ್ನ ಪಾಯಸದ ರೀತಿಯಾಗುವ ಲಕ್ಷಣಗಳು ಕಾಣುತ್ತಿವೆ. ಅದೇ ಇನ್ನೊಂದೆಡೆ ಮೈಕ್ರೋವೋವನ್​ನಲ್ಲಿ ಪಲ್ಯ ಬಿಸಿ ಮಾಡಲು ಹೋಗಿ ಸಾಮಾನ್ಯ ಪ್ಲಾಸ್ಟಿಕ್​ ಪಾತ್ರೆ ಇಟ್ಟಿದ್ದಾನೆ. ಅದು ಸುಟ್ಟು ಹೋಗಿದೆ.

ಮಗ ಗುಂಡಣ್ಣ ಮೈಕ್ರೋವೋವನ್​ಗೆ ಅಂತನೇ ಬೇರೆ ಪಾತ್ರೆ ಇರುತ್ತದೆ, ಅಷ್ಟೂ ಗೊತ್ತಿಲ್ವಾ ಅಂತ ಕೇಳಿದ್ದಾನೆ. ತಾಂಡವ್​ಗೆ ಕೆನ್ನೆಯ ಮೇಲೆ ಹೊಡೆದಂಥ ಅನುಭವ ಆಗಿದೆ. ಆದರೂ ತಾನು ಸೋಲಬಾರದು, ಭಾಗ್ಯ ಮನೆಗೆ ಬರಬಾರದು. ಡಿವೋರ್ಸ್ ಪಡೆದು ಶ್ರೇಷ್ಠಾಳ ಜೊತೆ ಹಾಯಾಗಿ ಇರಬಹುದು ಎನ್ನುವ ಮನಸ್ಥಿತಿಯಲ್ಲಿಯೇ ಎಲ್ಲವನ್ನೂ ನಿಭಾಯಿಸುವ ಪಣ ತೊಟ್ಟಿದ್ದಾನೆ. ಆದರೆ ಒಂದರ ಮೇಲೊಂದರಂತೆ ಆತನಿಗೆ ಸೋಲು ಉಂಟಾಗುತ್ತಿದೆ. ಏನೋ ಕಷ್ಟಪಟ್ಟು ಅಡುಗೆ ಮಾಡುತ್ತಿದ್ದೇನೆ. ನೀವೆಲ್ಲಾ ಹೀಗೆ ಹೇಳುತ್ತಿದ್ದೀರಿ ಎಂದು ಬೈದಿದ್ದಾನೆ. ಇಷ್ಟೆಲ್ಲಾ ಹೇಳಿಸಿಕೊಂಡು ಇವನು ಮಾಡಿದ ಅಡುಗೆ ತಿನ್ನಬೇಕೇ ಎಂದು ಅಪ್ಪ ನುಡಿದಿದ್ದಾನೆ. ಎರಡನೆಯ ಹಂತದಲ್ಲಿ ತಾಂಡವ್​ಗೆ ಸೋಲಾಗಿದೆ. ಮುಂದೇನು?

ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಸೂಪರ್​ ಸೂಪರ್​ ಎನ್ನುವ ಕಮೆಂಟ್​ಗಳ ಸುರಿಮಳೆಯಾಗಿದೆ. ಬಹಳಷ್ಟು ಮಹಿಳೆಯರಿಗಂತೂ ಇದು ಖುಷಿಕೊಟ್ಟಿದೆ. ಗೃಹಿಣಿ ಎಂದು ಮೂದಲಿಸುವ ಗಂಡಸರಿಗೆ ಇದು ತಕ್ಕ ಪಾಠವಾಗಿದೆ ಎನ್ನುತ್ತಿರುವ ಮಹಿಳೆಯರು ತಾವೂ ಒಂದು ವಾರ ಮನೆ ಬಿಟ್ಟು ಹೋದರೆ ಗಂಡಸರಿಗೆ ಬುದ್ಧಿ ಬರುತ್ತದೆ ಎನ್ನುತ್ತಿದ್ದಾರೆ. ಹೋಟೆಲ್​ ಊಟ ಮಾಡಬಾರದು, ಪಾರ್ಸೆಲ್​ ತರಿಸಿಕೊಳ್ಳಬಾರದು ಎಂಬ ಚಾಲೆಂಜ್​ ಹಾಕಿ ಇಡೀ ಕುಟುಂಬವನ್ನು ನೋಡಿಕೊಳ್ಳಲು ಹೇಳುವ ಚಾಲೆಂಜ್​ ಶುರುವಾದರೆ ಒಳ್ಳೆಯದು. ಆಗಲಾದ್ರೂ ಮಹಿಳೆಯರನ್ನು ಮೂದಲಿಸುವ ಗುಣ ಕಡಿಮೆಯಾಗಬಹುದು ಎನ್ನುತ್ತಿದ್ದಾರೆ. ಹೀಗಾದರೆ ಏನಾಗಬಹುದು? ಗೃಹಿಣಿಯರನ್ನು ಹೀಗಳೆಯುವ ಗುಣ ಕಮ್ಮಿಯಾಗ್ಬೋದಾ? 

ಪ್ರೀತಿ, ಕಾಮದ ಟಿಪ್ಸ್​ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್​ ವಿಷ್ಯ ಹೇಳಿದ ನಟಿ ಜೀನತ್​ ಅಮಾನ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಏನೋ ಮುಗೀತು, ಆದ್ರೆ ಟಾಪ್ 6 ಸ್ಪರ್ಧಿಗಳಿಂದ ಕಲಿಯಬೇಕಾದ Life Lessons ಏನು ನೋಡಿ
Kannada Serial TRP: ಧಾರಾವಾಹಿಗಳ ಮಧ್ಯೆ ಪೈಪೋಟಿ; ನಂ 1 ಸ್ಥಾನ ಪಡೆದ ಸೀರಿಯಲ್‌ ಯಾವುದು?