
ಒಡಿಶಾ (ಮಾ.29) ಟೆಲಿವಿಶನ್ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಜನಪ್ರಿಯ ನಟ ರಾಹುಲ್ ಬ್ಯಾನರ್ಜಿ ದುರಂತ ಅಂತ್ಯಕಂಡಿದ್ದಾರೆ. ಒಡಿಶಾ ಬೀಚ್‌ನ ನಡುವೆ ಭೋಲೆ ಬಾಬಾ ಪಾರ್ ಕರೆಗಾ ಧಾರಾಹಿ ಶೂಟಿಂಗ್ ನಡೆಯುತ್ತಿತ್ತು. ಬೋಟ್ ಮೇಲೆ ನಿಂತು ಕೆಲ ಸೀನ್‌ಗಳ ಚಿತ್ರೀಕರಣ ನಡೆಯುತ್ತಿತ್ತು. ಇದರ ನಡುವೆ ರಾಹುಲ್ ಬ್ಯಾನರ್ಜಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಕೆಲ ನಿಮಿಷಗಳ ಕಾಲ ರಾಹುಲ್ ಸಮುದ್ರದ ನೀರಿನಲ್ಲಿ ಮುಳುಗಿದ್ದರು. ರಕ್ಷಣಾ ತಂಡ ರಾಹುಲ್ ಬ್ಯಾನರ್ಜಿ ರಕ್ಷಿಸಿ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಒಡಿಶಾದ ತಲ್ಸರಿ ಬೀಚ್‌ನಲ್ಲಿ ಧಾರವಾಹಿ ಶೂಟಿಂಗ್‌ನ ಕೆಲ ಸೀನ್ ತೆಗೆಯುತ್ತಿದ್ದ ಈ ವೇಳೆ ಘಟನೆ ನಡೆದಿದೆ. ಸತತ ಸೀನ್‌ಗಳ ಚಿತ್ರೀಕರಣದ ನಡುವೆ ಸಣ್ಣ ಬ್ರೇಕ್ ನೀಡಲಾಗಿತ್ತು. ಡೈಲಾಗ್ ಡೆಲಿವರಿಗಾಗಿ ಈ ಬ್ರೇಕ್ ನೀಡಲಾಗಿತ್ತು. ಸಿಬ್ಬಂದಿಗಳು, ಕ್ಯಾಮೆರಾಮ್ಯಾನ್, ನಿರ್ದೇಶಕರು ಮುಂದಿನ ಸೀನ್ ಚಿತ್ರೀಕರಣದ ತಯಾರಿಯಲ್ಲಿದ್ದರು. ಇದೇ ವೇಳೆ ರಾಹುಲ್ ಬ್ಯಾನರ್ಜಿ ಬೋಟ್ ಬದಿಯಲ್ಲಿ ಒಂದೆರೆಡು ಹೆಜ್ಜೆ ಹಾಕಿ ಮುಂದಿನ ಸೀನ್‌ಗೆ ತಯಾರಿ ಮಾಡಿದ್ದಾರೆ. ಕೆಲ ನಿಮಿಷಗಳ ಬಳಿಕ ಸೀನ್ ತೆಗೆಯಲು ರಾಹುಲ್ ಬ್ಯಾನರ್ಜಿ ಎಲ್ಲೂ ಕಾಣಲಿಲ್ಲ. ಎಲ್ಲಿ ಎಲ್ಲಿ ಎಂದು ಪ್ರಶ್ನಿಸುತ್ತಿರುವಾಗಲೇ ರಕ್ಷಣಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಜನಪ್ರಿಯ ಬಂಗಾಳಿ ನಟನಾಗಿ ಗುರುತಿಸಿಕೊಂಡಿದ್ದ ರಾಹುಲ್ ಒಂದೆರೆಡು ಹೆಜ್ಜೆ ಹಾಕಿದಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಎಲ್ಲರೂ ತಮ್ಮ ತಮ್ಮ ತಯಾರಿಲ್ಲಿ ಇದ್ದ ಕಾರಣ ಗಮನಿಸಲಿಲ್ಲ. ಇತ್ತ ರಾಹುಲ್ ಕೆಲ ನಿಮಿಷಗಳ ಕಾಲ ಸಮುದ್ರದಲ್ಲಿ ಮುಳುಗಿದ್ದರು. ಅಷ್ಟರಲ್ಲೇ ಮೃತಪಟ್ಟಿದ್ದಾರೆ. ರಕ್ಷಣಾ ತಂಡದ ಸಿಬ್ಬಂದಿಗಳು ಸಮುದ್ರಕ್ಕೆ ಹಾಕಿ ರಾಹುಲ್ ಬ್ಯಾನರ್ಜಿಯನ್ನು ಮೇಲಕ್ಕೆ ಎಳೆದು ತಂದು ಸಿಪಿಆರ್ ಮಾಡಿದ್ದಾರೆ. ಆದರೆ ಯಾವುದೇ ಚಲನೆ ಇರಲಿಲ್ಲ. ತಕ್ಷಣವೆ ಆಸ್ಪತ್ರೆ ದಾಖಲಿಸಾಗಿದೆ. ಆದರೆ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಸದ್ಯ ರಾಹುಲ್ ಬ್ಯಾನರ್ಜಿ ಮೃದೇಹ ದಿಗಾ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಹುಲ್ ಬ್ಯಾನರ್ಜಿ ಕುಟುಂಬಸ್ಥರು ಒಡಿಶಾದತ್ತ ತೆರಳಿದ್ದಾರೆ. ಇತ್ತ ಟೆಲಿವಿಶನ್ ರಂಗವೇ ಆಘಾತಗೊಂಡಿದೆ. ಪ್ರತಿಭಾವಂತ ಹಾಗೂ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ನಟ ರಾಹುಲ್ ಬ್ಯಾನರ್ಜಿ ದುರಂತ ಅಂತ್ಯಕಂಡಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.