ಸೀತಾರಾಮ ಧಾರಾವಾಹಿಯಲ್ಲಿ ಡಾ. ಅನಂತಲಕ್ಷ್ಮಿ ಆಗಮನದಿಂದ ಸಿಹಿಯ ಜನ್ಮ ರಹಸ್ಯ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಭಾರ್ಗವಿ ದೇಸಾಯಿ ಸತ್ಯವನ್ನು ಬಹಿರಂಗಪಡಿಸಲು ಯೋಜಿಸಿದ್ದಾರೆ, ಆದರೆ ಡಾ. ಅನಂತಲಕ್ಷ್ಮಿ ಸಿಹಿಯ ತಂದೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.
ಬೆಂಗಳೂರು (ಸೆ.04): ಸೀತಾರಾಮ ಧಾರಾವಾಹಿಯಲ್ಲಿ ರಾಮನ ತಾತ ಸೂರ್ಯಪ್ರಕಾಶ್ ದೇಸಾಯಿ ಅವರ ಜನ್ಮದಿನಕ್ಕೆ ಶುಭ ಕೋರಲು ಆಗಮಿಸಿದ ಡಾ.ಅನಂತಲಕ್ಷ್ಮೀ ಸೀತಾ ಒಡಲ ಸತ್ಯದ ಅನಾವರಣ ಮಾಡಲಿದ್ದಾರೆಯೇ ಎಂಬ ಆತಂಕ ಶುರುವಾಗಿದೆ. ಡಾ. ಅನಂತಲಕ್ಷ್ಮಿಯೇ ಸೀತಾಳ ಮಗಳು ಸಿಹಿ ಡೆಲಿವೆರಿ ಮಾಡಿಸಿದ್ದು ಎಂಬುದು ಭಾರ್ಗವಿ ದೇಸಾಯಿ ತಿಳಿದ ಹಿನ್ನೆಲೆಯಲ್ಲಿ ವೈದ್ಯರನ್ನು ಮನೆಗೆ ಕರೆಸಿದ್ದಾರೆ. ಇದೀಗ ಸಿಹಿ ಕೂಡ ಅನಂತಲಕ್ಷ್ಮಿಯನ್ನು ಗುರುತಿಸಿದ್ದು, ಇದೀಗ ಸತ್ಯ ಹೊರ ಬೀಳುವ ಸಂಗತಿಗೆ ಎಲ್ಲರೂ ಆತುರದಿಂದ ಕಾಯುತ್ತಿದ್ದಾರೆ.
ಸೀತಾರಾಮ ಧಾರಾವಾಹಿಯಲ್ಲಿ ಸೀತಾ, ರಾಮನಿಗೆ ಮದುವೆ ಮಾಡಿದ ರಾಮನ ಚಿಕ್ಕಮ್ಮ ಭಾರ್ಗವಿ ದೇಸಾಯಿ ಅವರಿಬ್ಬರ ಸಂತೋಷ ಕಿತ್ತುಕೊಳ್ಳಲು ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಲು ಕುಮ್ಮಕ್ಕು ಮಾಡಿದ್ದಳು. ಇದೀಗ ಸಿಹಿ ಬೋರ್ಡಿಂಗ್ ಸ್ಕೂಲ್ ಬಿಟ್ಟು ಮನೆಗೆ ಬಂದಿದ್ದಾಳೆ. ಬಂದವಳೇ ನನಗೆ ತಮ್ಮ ಬೇಕು ಎಂದು ಹಠ ಮಾಡಿದದು, ಇದಕ್ಕೆ ಸೀತಾ ಮತ್ತು ರಾಮ ಇಬ್ಬರೂ ಒಪ್ಪಿಕೊಂಡಿದ್ದಾರೆ. ಒಂದು ಕಡೆ, ರಾಮನ ಹೆಸರಲ್ಲಿರುವ ಆಸ್ತಿಯನ್ನು ಹೊಡೆದುಕೊಳ್ಳಲು ಭಾರಿ ಸಂಚು ರೂಪಿಸಿದ್ದರೂ, ಕೊನೇ ಕ್ಷಣದಲ್ಲಿ ರಾಮನ ಇನ್ನೊಬ್ಬ ಚಿಕ್ಕಮ್ಮ ಸಾಧನಾ ವಿಫಲ ಮಾಡಿದ್ದಳು. ಇದೀಗ ಧಾರಾವಾಹಿಯ ದುಷ್ಟಕೂಟವಾದ ರಾಮನ ಚಿಕ್ಕಪ್ಪ ವಿಶ್ವಜೀತ್ ದೇಸಾಯಿ ಕೂಡ ಆಸ್ತಿ ಹೊಡೆಯಲು ಮುಂದಾಗಿದ್ದಾನೆ. ಇನ್ನು ರಾಮನ ಮಾಜಿ ಪ್ರೇಯಸಿ ಚಾಂದಿನಿ ಹಾಗೂ ಸೀತಾಳ ಮಗಳಿ ಸಿಹಿಯ ಜನ್ಮರಹಸ್ಯ ತಿಳಿದುಕೊಳ್ಳು ಹೋಗಿದ್ದರೂ, ಡಾ. ಅನಂತಲಕ್ಷ್ಮಿ ಮುಖಕ್ಕೆ ಮಂಗಳಾರತಿ ಮಾಡಿ ಸತ್ಯ ಹೇಳದೇ ಹೊರಗೆ ಕಳುಹಿಸಿದ್ದರು.
ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!
ಭಾರ್ಗವಿ ದೇಸಾಯಿ ತನ್ನ ಎಲ್ಲ ಕುತಂತ್ರಗಳು ವಿಫಲವಾದ ಕೂಡಲೇ ಅವರ ಮಾವ ಸೂರ್ಯಪ್ರಕಾಶ ದೇಸಾಯಿ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕೆ ಡಾ. ಅನಂತಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿದ್ದಾಳೆ. ಇದೀಗ ಮನೆಗೆ ಬಂದಿರುವ ಡಾಕ್ಟರ್ ನೋಡಿದ ಸೀತಾ ಬೆರಗಾಗಿ ನಿಂತಿದ್ದಾಳೆ. ಇನ್ನೊಂದೆಡೆ ಸೀತಾ ಇದೇನಿದು ಡಾಕ್ಟರ್ ನೀವು ಇಲ್ಲಿ, ನಾನು ನಿಮಗೆ ನೆನಪಿದ್ದೀನಾ ಎಂದು ಕೇಳಿದ್ದಾಳೆ. ನಿನ್ನನ್ನು ಮರೆಯಲಿಕ್ಕೆ ಆಗುತ್ತದೆಯೇ ಸಿಹಿ ಪುಟ್ಟ ಎಂದು ಹೇಳಿದ್ದಾರೆ. ಆದರೆ, ಸಿಹಿ ಮತ್ತು ಡಾ.ಅನಂತಲಕ್ಷ್ಮಿ ಮಾತನ್ನು ಕೇಳಿದ ರಾಮ ಹಾಗೂ ಅವರ ತಾತನಿಗೆ ಆಶ್ಚರ್ಯವಾಗಿದೆ. ಇದೀಗ ಸ್ವತಃ ಭಾರ್ಗವಿ ದೇಸಾಯಿ ಸಿಹಿಯ ಜನ್ಮ ರಹಸ್ಯವನ್ನು ರಿವೀಲ್ ಮಾಡಿಸಿ, ಸೀತಾಳನ್ನು ಮನೆಯಿಂದ ಹೊರಗೆ ಹಾಕಲು ಯೋಜನೆ ರೂಪಿಸಿದ್ದಾಳೆ.
ಸೀತಾಗೆ ರಾಮ್ ಏನ್ ಅಂತ ಹೆಸರಿಡ್ತಾನೆ? ಮುದ್ದು ಜೋಡಿ ರೋಮ್ಯಾನ್ಸ್ ನೋಡಿ ನಾಚಿನೀರಾದ ವೀಕ್ಷಕರು
ತಂದೆಯ ಬಗ್ಗೆ ಸುಳಿವು ಬಿಟ್ಟುಕೊಡುವುದಿಲ್ಲ ಎಂಬ ನಂಬಿಕೆ: ಇನ್ನು ಡಾ.ಅನಂತಲಕ್ಷ್ಮಿಯನ್ನು ಭೇಟಿ ಮಾಡಿ ಸಿಹಿಯ ಅಪ್ಪ ಹಾಗೂ ಸೀತಾಳ ಗಂಡನ ಬಗ್ಗೆ ಮಾಹಿತಿ ಕಲೆಹಾಕಲು ಯತ್ನಿಸಿದ ಚಾಂದಿನಿಗೆ ಮೈಛಳಿ ಬಿಡಿಸಿದ್ದರು. ಇದೀಗ ಭಾರ್ಗವಿ ದೇಸಾಯಿ ಕೂಡ ಸಿಹಿ ಜನ್ಮರಹಸ್ಯವನ್ನು ಬಾಯಿ ಬಿಡಿಸಲು ಯತ್ನಿಸುತ್ತಿದ್ದಾಳೆ. ಒಂದು ವೇಳೆ ಸಿಹಿಯ ಅಪ್ಪ ಯಾರೆಂಬುದನ್ನು ಡಾಕ್ಟರ್ ಹೇಳಿದರೆ ಸೀತಾಳನ್ನು ಮನೆ ಬಿಟ್ಟು ಕಳಿಸಲು ಭಾರ್ಗವಿ ದೇಸಾಯಿ ತುದಿ ಕಾಲಿನಲ್ಲಿ ನಿಂತಿದ್ದಾಳೆ. ಇನ್ನು ಸಿಹಿಯ ಜನ್ಮರಹಸ್ಯವನ್ನು ರಾಮನಿಗೆ ತಿಳಿಸಲು ಸೀತಾ ಎಷ್ಟೇ ಪ್ರಯತ್ನ ಮಾಡಿದರೂ, ಅದನ್ನು ತಿಳಿದುಕೊಳ್ಳಲು ರಾಮ ನಿರಾಸಕ್ತಿ ತೋರಿದ್ದನು. ಇದೀಗ ಡಾಕ್ಟರ್ ಸಿಹಿ ಜನ್ಮರಹಸ್ಯವನ್ನು ತಿಳಿಸಿದರೆ, ರಾಮನೂ ಸೀತಾಳನ್ನು ದೂರ ಮಾಡುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.