ಸೀತಮ್ಮಾ, ಅಶೋಕ್​ ಜೊತೆ ಪುಟಾಣಿ ಸಿಹಿ ಭರ್ಜರಿ ರೀಲ್ಸ್​: ಮುದ್ದು ಮುದ್ದು ಕಂದ ಎಂದ ಫ್ಯಾನ್ಸ್​

Published : Apr 05, 2024, 05:19 PM IST
ಸೀತಮ್ಮಾ, ಅಶೋಕ್​ ಜೊತೆ ಪುಟಾಣಿ ಸಿಹಿ ಭರ್ಜರಿ ರೀಲ್ಸ್​: ಮುದ್ದು ಮುದ್ದು ಕಂದ ಎಂದ ಫ್ಯಾನ್ಸ್​

ಸಾರಾಂಶ

ಸೀತಾರಾಮ ಸೀರಿಯಲ್​ ಸೀತಾ, ಅಶೋಕ್​ ಜೊತೆ ಸಿಹಿ ಪಾತ್ರಧಾರಿ ರಿತು ಸಿಂಗ್​ ರೀಲ್ಸ್​ ಮಾಡಿದ್ದು, ಇವರ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.   

ಸೀತಾರಾಮ ಸೀರಿಯಲ್​ ಟಿಆರ್​ಪಿಯಲ್ಲಿ ಉತ್ತಮ ರೇಟಿಂಗ್​ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣ, ಪುಟಾಣಿ ಸಿಹಿಯ ನಟನೆ ಎಂದರೂ ಸುಳ್ಳಲ್ಲ. ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ  ಅರ್ಥಾತ್‌ ರಿತು ಸಿಂಗ್‌. ಸೀತಾರಾಮ ಸೀರಿಯಲ್​ನಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಆತನನ್ನು ನೋಡಲು ಆಗದೇ ಆಕೆ ಪರಿತಪಿಸಿದ್ದ  ಪರಿ ಕಂಡು ವೀಕ್ಷಕರೇ ಕಣ್ಣೀರಾಗಿದ್ದರು.  ಇದು ಸೀರಿಯಲ್‌ ಎಂದು ತಿಳಿದರೂ ನಿನ್ನ ಪಾತ್ರ ನೋಡಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟ್​ ಹಾಕಿದ್ದರು, ಅಷ್ಟು ನೈಜ ಅಭಿನಯ ಈಕೆಯದ್ದು.

ಇದೀಗ ರಿತು ಸಿಂಗ್​, ಸೀತಾರಾಮ ಸೀರಿಯಲ್​ನ ಸೀತಮ್ಮ ಮತ್ತು ಅಶೋಕ್​ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದಾಳೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಆಗಾಗ್ಗೆ ವಿಡಿಯೋ, ರೀಲ್ಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ರಾಮ್​ ಜೊತೆ ಡ್ಯಾನ್ಸ್​ ಮಾಡಿ ರೀಲ್ಸ್​ ಶೇರ್​ ಮಾಡಿಕೊಂಡಿದ್ದರು. ಇವರಿಬ್ಬರೂ ಒಂದು ತಮಾಷೆಯ ರೀಲ್ಸ್ ಮಾಡಿದ್ದರು. ಅದರಲ್ಲಿ 20,60 ಟೇಕ್ ಎಂದು ಹೇಳಲಾಗಿದೆ. ಅಷ್ಟಾದರೂ ರಾಮ್​ಗೆ ಸೀತಾಳ ಜೊತೆ ಡ್ಯಾನ್ಸ್​ ಮಾಡಲು ಸಾಧ್ಯವಾಗಲೇ ಪರದಾಡಿದ್ದರು. ಇದು ತಮಾಷೆಗಾಗಿ ಮಾಡಿದ ವಿಡಿಯೋ ಆದರೂ ಇದನ್ನು ನೋಡಿದ ವೀಕ್ಷಕರು ನಕ್ಕೂ ನಕ್ಕು ಸುಸ್ತಾಗಿದ್ದರು.

ಆರ್​ವಿಜಿ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್​ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಹೀಗೊಂದು ಪಾಠ!

ಇದೀಗ ಅಶೋಕ್​ ಮತ್ತು ಸಿಹಿಯ ಜೊತೆ ರೀಲ್ಸ್​ ಮಾಡಿರುವ ವಿಡಿಯೋ ಅನ್ನು ಸಾನ್ಯಾ ಸಿದ್ದೇಶ್​ ಎನ್ನುವವರು ಶೇರ್​ ಮಾಡಿದ್ದಾರೆ. ಚಿಕ್ಕ ಮಕ್ಕಳು ಹೇಗೆ ಡ್ಯಾನ್ಸ್​ ಮಾಡಿದರೂ ಚೆಂದನೇ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಸಿಹಿಯ ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನೆಮಗಳಾಗಿರುವ ಪುಟಾಣಿ ಎಂದ ಮೇಲೆ ಕೇಳಬೇಕೆ? ಈಕೆಯ ಮುದ್ದಾದ ರೀಲ್ಸ್​ಗೆ ನೆಟ್ಟಿಗರು ಮನ ಸೋತಿದ್ದು ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್​. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 
ಆಗ ಗೌತಮ್​, ಈಗ ಜೀವ... ನಿಜ ಜೀವನದಲ್ಲೂ ಇಂಥವರು ಇದ್ರೆ ದಾಂಪತ್ಯ ಸೊಗಸು ಅಂತಿದ್ದಾರೆ ನೆಟ್ಟಿಗರು..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!