ಮದುವೆಯಾದ ಮೇಲೆ ಹಳೆಯ ಪ್ರೇಮಿ ಕಾಡತೊಡಗಿದಾಗ, ಪತಿ ಅಥವಾ ಪತ್ನಿಯ ಕರ್ತವ್ಯವೇನು? ಸುಂದರವಾಗಿ ವಿವರಿಸಿದ ಅಮೃತಧಾರೆಗೆ ಅಭಿಮಾನಿಗಳ ಶ್ಲಾಘನೆ.
ಕೆಲವರ ಬದುಕಲ್ಲಿ, ಹದಿಹರೆಯದಲ್ಲಿ ಅದ್ಯಾವುದೋ ಗಳಿಗೆಯಲ್ಲಿ ಪ್ರೀತಿ-ಪ್ರೇಮ ಆಗಿ ಬಿಡುತ್ತದೆ. ಅದು ಆ ವಯಸ್ಸಿನ ಆಕರ್ಷಣೆಯಷ್ಟೇ. ಆದರೆ ಮುಂದೆ ಅದೇ ಬಹುದೊಡ್ಡ ಗಂಡಾಂತರಕ್ಕೂ ಕಾರಣವಾಗಬಹುದು. ಮದುವೆಯಾಗಿಲ್ಲ ಎನ್ನುವ ಸಿಟ್ಟಿನಿಂದ ಹುಡುಗಿ ಅಥವಾ ಹುಡುಗ ಒಬ್ಬರನ್ನೊಬ್ಬರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಬಹುದು. ಇದು ಒಂದೆಡೆಯಾದರೆ ಹಲವು ಸಂದರ್ಭದಲ್ಲಿ ಅದು ಒನ್ವೇ ಲವ್ ಆಗಿರುತ್ತದೆ. ಇಂಥವರು ತಮಗೆ ಸಿಗದ ಪ್ರೀತಿ ಇನ್ಯಾರಿಗೂ ಸಿಗಲೇಬಾರದು ಎಂದುಕೊಂಡು ಹುಡುಗಿ ಮದುವೆಯಾದಾಗ ಬ್ಲ್ಯಾಕ್ಮೇಲ್ ಮಾಡಲು ಶುರುಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಹಿಂದಿನ ಪ್ರೀತಿಯ ಬಗ್ಗೆ ಪತಿ ಅಥವಾ ಪತ್ನಿಗೆ ತಿಳಿದಾಗ ಸಂಸಾರದಲ್ಲಿ ಬಿರುಗಾಳಿ ಏಳುತ್ತದೆ. ಇದರಿಂದ ಎಷ್ಟೋ ಸಂಸಾರಗಳು ಮುರಿದು ಬೀಳುವುದೂ ಇದೆ.
ಆದರೆ ಹಿಂದೆ ಆಗಿದ್ದು ಆಯ್ತು, ಈಗ ಮದ್ವೆಯಾಗಿದೆ, ಈಗ ಏನಿದ್ದರೂ ನಾವಿಬ್ಬರೂ ಪತಿ-ಪತ್ನಿ. ಹಿಂದಿದ್ದನ್ನೆಲ್ಲಾ ಕೆದಕಿ ಪ್ರಯೋಜನ ಇಲ್ಲ ಎನ್ನುವ ಮನಸ್ಥಿತಿಯ ಹೆಣ್ಣು ಅಥವಾ ಗಂಡುಗಳು ನಿಜ ಜೀವನದಲ್ಲಿ ನೋಡಲು ಸಾಧ್ಯವೆ? ಇದ್ದರೂ ಬೆರಳೆಣಿಕೆಯಷ್ಟು ಮಂದಿ ಇರಬಹುದೇನೋ. ಆದರೆ ಇದೇ ಮನಸ್ಥಿತಿ ಇದ್ದರೆ ಜೀವನ ಎಷ್ಟು ಚೆಂದ ಎಂದು ತೋರಿಸಿಕೊಟ್ಟಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್.
ಚನ್ನಪಟ್ಟಣದ ಗೊಂಬೆಯಲ್ಲ ಈ ಅಮ್ಮ... ಭಾಗ್ಯಲಕ್ಷ್ಮಿ ಡೈಲಾಗ್ ಮೇಲೆ ಡೈಲಾಗ್ಗೆ ತಾಂಡವ್ ಸುಸ್ತು; ಫ್ಯಾನ್ಸ್ ಖುಷ್!
ಮೊದಲು ಭೂಮಿಕಾ, ಈಗ ಮಹಿಮಾ. ಹೌದು. ಸೀರಿಯಲ್ ನಾಯಕಿ ಭೂಮಿಕಾ ಹಿಂದೆ ಬಿದ್ದಿದ್ದ ಯುವಕನೊಬ್ಬ ಮದುವೆಯಾದ ಮೇಲೆ ಭೂಮಿಕಾಳನ್ನು ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದ. ಇದರಿಂದ ಭೂಮಿ ನಲುಗಿ ಹೋಗಿದ್ದಳು. ಹೇಳಿ ಕೇಳಿ ಇದು ಸೀರಿಯಲ್. ಮನೆಯ ತುಂಬಾ ಲೇಡಿ ವಿಲನ್ಗಳೇ ಜಾಸ್ತಿ. ಭೂಮಿಕಾ ಇನ್ನೇನು ತನ್ನ ಬಾಳು ಮುಗಿದೇ ಹೋಯ್ತು ಎನ್ನುವಾಗಲೇ ಆಕೆಯ ನೆರವಿಗೆ ಬಂದದ್ದು ಗೌತಮ್. ಭೂಮಿಕಾಳಗೆ ಬ್ಲ್ಯಾಕ್ಮೇಲ್ ಮಾಡಲು ಬಂದಿದ್ದ ಆಕೆಯ ಹಳೆಯ ಸ್ನೇಹಿತನ ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳಿದ್ದ. ಪತ್ನಿಯ ಪರವಾಗಿ ನಿಂತಿಲ್ಲ. ಇದನ್ನು ನೋಡಿ ಸೋ ಸ್ವೀಟ್ ಎಂದಿದ್ದರು ನೆಟ್ಟಿಗರು.
ಇದೀಗ ಮಹಿಮಾಗೂ ಅದೇ ಸ್ಥಿತಿಯಾಗಿದೆ. ಮಾಜಿ ಸ್ನೇಹಿತ ಪ್ರತ್ಯಕ್ಷ ಆಗಿದ್ದಾನೆ. ಇಷ್ಟೇ ಅಲ್ಲದೇ ಮಹಿಮಾ ತನಗೆ ಅಪಘಾತದಿಂದ ಗರ್ಭಪಾತ ಆಗಿದೆ ಎಂದು ಎಲ್ಲರಿಗೂ ಸುಳ್ಳು ಹೇಳಿದ್ದಾಳೆ. ಅಸಲಿಗೆ ಮಗು ಹೆರಲು ಇಷ್ಟವಿಲ್ಲದ ಆಕೆ, ಈ ಮಗು ಬಂದರೆ ತನ್ನ ಕರಿಯರ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಗರ್ಭಪಾತ ಮಾಡಿಸಿಕೊಂಡಿದ್ದಳು. ಇದೀಗ ಆಕೆಯ ಮಾಜಿ ಪ್ರೇಮಿಗೆ ಈ ವಿಷಯ ತಿಳಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ. ಏನು ಮಾಡಬೇಕು ಎಂದು ತಿಳಿಯದ ಅವಳು ಕೊನೆಗೆ ಈ ವಿಷಯವನ್ನು ಭೂಮಿಕಾಗೆ ತಿಳಿಸುತ್ತಾಳೆ. ಭೂಮಿಕಾ ಅದಾಗಲೇ ಲವರ್ ವಿಷಯವನ್ನು ಮಹಿಮಾ ಪತಿ ಅಂದರೆ ತನ್ನ ಸಹೋದರ ಜೀವ ಬಳಿ ಹೇಳಿರುತ್ತಾಳೆ. ಜೀವನನ್ನು ಮಾತನಾಡಬೇಕು ಎಂದು ಮಹಿಮಾ ಕರೆಸಿದಾಗ, ಪತಿ ಜೀವ ಆತನಿಗೆ ಕಪಾಳಮೋಕ್ಷ ಮಾಡುವ ಮೂಲಕ ಪತ್ನಿಯ ಪರವಾಗಿ ನಿಲ್ಲುತ್ತಾನೆ. ಇದಕ್ಕೂ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ನಿಜ ಜೀವನದಲ್ಲಿಯೂ ಪತಿ ಅಥವಾ ಪತ್ನಿ ಇದೇ ರೀತಿ ಮನಸ್ಥಿತಿ ಹೊಂದಿದ್ದರೆ ಬದುಕು ಎಷ್ಟು ಚೆಂದವಲ್ಲವೇ ಎನ್ನುತ್ತಿದ್ದಾರೆ ಅಮೃತಧಾರೆ ಫ್ಯಾನ್ಸ್.
ಆರ್ವಿಜಿ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಹೀಗೊಂದು ಪಾಠ!