ಚನ್ನಪಟ್ಟಣದ ಗೊಂಬೆಯಲ್ಲ ಈ ಅಮ್ಮ... ಭಾಗ್ಯಲಕ್ಷ್ಮಿ ಡೈಲಾಗ್​ ಮೇಲೆ ಡೈಲಾಗ್​ಗೆ ತಾಂಡವ್​ ಸುಸ್ತು; ಫ್ಯಾನ್ಸ್​ ಖುಷ್​!

Published : Apr 05, 2024, 12:41 PM IST
ಚನ್ನಪಟ್ಟಣದ ಗೊಂಬೆಯಲ್ಲ ಈ ಅಮ್ಮ... ಭಾಗ್ಯಲಕ್ಷ್ಮಿ ಡೈಲಾಗ್​ ಮೇಲೆ ಡೈಲಾಗ್​ಗೆ ತಾಂಡವ್​ ಸುಸ್ತು; ಫ್ಯಾನ್ಸ್​ ಖುಷ್​!

ಸಾರಾಂಶ

ಇಲ್ಲಿಯವರೆಗೆ ಇದ್ದ ಭಾಗ್ಯಳೇ ಬೇರೆ, ಈಗ ಬೇರೆ ಎನ್ನುತ್ತಲೇ ಗಂಡನನ್ನು ಸುಸ್ತು ಹೊಡೆಸುವ ರೀತಿಯಲ್ಲಿ ಅಮ್ಮನಾಗಿ ತನ್ನ ಜವಾಬ್ದಾರಿ ಹೇಳಿದ್ದಾಳೆ ಭಾಗ್ಯ. ಪಂಚಿಂಗ್​ ಡೈಲಾಗ್​ಗಳು ಹೇಗಿವೆ ನೋಡಿ...  

ಭಾಗ್ಯ ಸಿಡಿದೆದ್ದಿದ್ದಾಳೆ. ಡಿವೋರ್ಸ್​ ಕೊಡುತ್ತೇನೆ. ಮನೆ ಬಿಟ್ಟು ಹೋಗು ಎಂದಿರೋ ತಾಂಡವ್​ಗೆ ತನ್ನ ಕಾಳಿ ಅವತಾರ ತೊರುತ್ತಿದ್ದಾಳೆ. ಇಷ್ಟು ದಿನ ಗಂಡ ಎದುರು ಮಾತನಾಡಬಾರದು, ಹಾಗೆ ಹೀಗೆ ಎಂದುಕೊಂಡು ಸುಮ್ಮನಿದ್ದೆ. ಈಗ ಮಿತಿಮೀರಿದೆ ಎನ್ನುತ್ತಲೇ ತಾಂಡವ್​ನನ್ನು ಮಾತಿನಿಂದಲೇ ತಿವಿದಿದ್ದಾಳೆ. ನೀನು ಮನೆ ಬಿಟ್ಟು ಹೋಗುವವರೆಗೂ ಮಕ್ಕಳು ಹೊರಗೆ ಬರುವಂತಿಲ್ಲ ಎಂದು ಮಕ್ಕಳನ್ನು ಕೂಡಿ ಹಾಕಿದ್ದ ತಾಂಡವ್​. ಮಕ್ಕಳನ್ನು ಹೊರಗೆ ತಂದಿರುವ ಭಾಗ್ಯ, ಅಮ್ಮ ಎಂದರೆ ಯಾರು, ತನ್ನ ಮಕ್ಕಳ ವಿಷಯದಲ್ಲಿ ಅಪ್ಪನಿಗಿಂತಲೂ ತಾನು ಒಂದು ಕೈ ಮೇಲೆ ಹೇಗೆ ಎನ್ನುವ ಬಗ್ಗೆ ತಾಂಡವ್​ಗೆ ಹೇಳಿದ್ದಾಳೆ. ಇಲ್ಲಿಲಯವರೆಗೆ ಚನ್ನಪಟ್ಟಣದ ಗೊಂಬೆಯಂತೆ ತಲೆಯಲ್ಲಾಡಿಸುತ್ತಾ ಇದ್ದೆ. ನಾನು ಈಗ ಆ ಭಾಗ್ಯ ಅಲ್ಲ ಎನ್ನುತ್ತಲೇ ತಾನು ಈ ಮನೆಯಲ್ಲಿ ಏಕೆ ಇರಬೇಕು, ತನ್ನ ಅಧಿಕಾರ ಏನು, ಮಕ್ಕಳ ಮೇಲೆ ತನಗೆ ಎಷ್ಟು ಹಕ್ಕಿದೆ ಎಂಬುದನ್ನು ತಿಳಿಸಿದ್ದಾಳೆ.

ಇಲ್ಲಿಯವರೆಗೆ ಅಳುಮುಂಜಿಯಂತಿದ್ದ ಭಾಗ್ಯಳ ಬಾಯಲ್ಲಿ ಇಂತಿಂಥ ಡೈಲಾಗ್​ಗಳನ್ನು ಹೇಳಿಸುತ್ತಿರೋ ನಿರ್ದೇಶಕರಿಗೆ ಭಾಗ್ಯ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಸೀರಿಯಲ್​ ಎಂದ್ರೆ ಹೀಗಿರಬೇಕು. ಇಂಥವುಗಳನ್ನು ತೋರಿಸಿದರೆ ಮಾತ್ರ ಹೆಣ್ಣುಮಕ್ಕಳಿಗೂ ನಿಜ ಜೀವನದಲ್ಲಿ ಧೈರ್ಯ ಬರುತ್ತದೆ, ಅದನ್ನು ಬಿಟ್ಟು ಅಳುಮುಂಜಿಯಂತೆ ಎಲ್ಲವನ್ನೂ ಸಹಿಸಿಕೊಂಡು ಇರಮ್ಮಾ ಎನ್ನುವುದು ಸರಿಯಲ್ಲ. ಗಂಡ ತಪ್ಪು ಮಾಡಿದರೆ, ಪತ್ನಿಯಾದವಳು ಹೇಗೆ ಇರಬೇಕು. ಸಹನೆ ಒಂದು ಹಂತ ದಾಟಿದಾಗ ಹಾಗೂ ಮಕ್ಕಳ ವಿಷಯದಲ್ಲಿ ಅಮ್ಮನ ಕರ್ತವ್ಯವೇನು ಎಂಬುದನ್ನು ಭಾಗ್ಯ ಚೆನ್ನಾಗಿ ಹೇಳಿದ್ದಾಳೆ. ಇದು ನಿಜಕ್ಕೂ ಎಲ್ಲರಿಗೂ ಮಾದರಿ ಎನ್ನುತ್ತಿದ್ದಾರೆ.

ಯಶ್ ಚಿತ್ರ ಟಾಕ್ಸಿಕ್‌ಗೆ ನೋ, ಕಾರ್ತಿಕ್ ಆರ್ಯನ್‌ಗೆ ಓಕೆ ಎಂದ 'ನಗ್ನ ಸುಂದರಿ' ತೃಪ್ತಿ ಡಿಮ್ರಿ!

ಅಷ್ಟಕ್ಕೂ ಆಗಿದ್ದೇನೆಂದರೆ,  ಮಕ್ಕಳೆದುರೇ ತಾಂಡವ್​ ಭಾಗ್ಯಳಿಗೆ ಡಿವೋರ್ಸ್​ ಕೊಡುವ ವಿಷಯ ಹೇಳಿದ್ದಾನೆ. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದಾಗಲೇ ಅವಳಿಗೆ ಡಿವೋರ್ಸ್​ ನೋಟಿಸ್​ ಕೊಟ್ಟಿದ್ದೆ. ಮಕ್ಕಳಿಗಾಗಿ ಸುಮ್ಮನೇ ಇದ್ದೆ. ಆದರೆ ಇದೀಗ ಮಕ್ಕಳೇ ಅಮ್ಮನ ಪರವಾಗಿ ನಿಂತಿದ್ದಾರೆ. ಹಾಗಿದ್ದ ಮೇಲೆ ಸತ್ಯ ಹೇಳದೇ ವಿಧಿಯಿಲ್ಲ ಎಂದಿರುವ ತಾಂಡವ್​, ಭಾಗ್ಯಳಿಗೆ ಡಿವೋರ್ಸ್​ ಕೊಡುತ್ತಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೇ ಈ ಕೂಡಲೇ ಭಾಗ್ಯ ಮನೆ ಬಿಟ್ಟು ಹೋಗಬೇಕು, ಮಕ್ಕಳು ನನ್ನ ಜೊತೆ ಇರುತ್ತಾರೆ ಎಂದು ಹೇಳಿದ್ದಾನೆ. ಭಾಗ್ಯಳ ಬ್ಯಾಗ್​ ತೆಗೆದು ಹೊರಕ್ಕೆ ಎಸೆದಿದ್ದಾನೆ. ಇದೀಗ ಮೌನ ಮುರಿದಿರುವ ಭಾಗ್ಯ, ಡಿವೋರ್ಸ್​ ಪೇಪರ್​ಗೆ ಸಹಿ ಹಾಕಲ್ಲ ಅಂದ್ರೆ ಏನು ಮಾಡ್ತೀರಿ ಕೇಳಿದ್ದಾಳೆ. ಕೋರ್ಟ್​ಗೆ ಹೋಗ್ತೇನೆ ಎಂದಿದ್ದಾನೆ ತಾಂಡವ್​. ನಾನೂ ಕೋರ್ಟ್​ಗೆ ಹೋಗ್ತೇನೆ. ಏನು ಹೇಳಬೇಕೋ ಹೇಳ್ತೇನೆ. ಜಪ್ಪಯ್ಯ ಎಂದ್ರೂ ಈ ಮನೆ ಬಿಟ್ಟು ಹೋಗಲ್ಲ ಎಂದಿದ್ದಾಳೆ.

ಹೀಗೆ ಹೇಳುತ್ತಲೇ ಗಂಡ ಎಸೆದ ಬ್ಯಾಗ್​ ಒಳಗೆ ತಂದಿರುವ ಭಾಗ್ಯಳನ್ನು ನೋಡಿ ಅತ್ತೆ ಕುಸುಮಾಗೆ ಖುಷಿಯೋ ಖುಷಿ. ನಾನು ಮನೆ ಬಿಟ್ಟು ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ ಎಂದಾಗ, ಕುಸುಮಾ ನಾವೂ ನಿನ್ನನ್ನು ಹೋಗಲು ಬಿಡುವುದಿಲ್ಲಮ್ಮಾ ಎಂದಿದ್ದಾಳೆ. ತಾಂಡವ್​ ಭಾಗ್ಯಂಗೆ ಬಯ್ಯಲು ಮುಂದಾದಾಗ ಕಾಳಿ ರೂಪ ತಾಳಿರೋ ಭಾಗ್ಯ ದೊಡ್ಡ ಕಣ್ಣು ಬಿಡುತ್ತಾ ಪತಿಯ ಸಮೀಪ ಬಂದಾಗ, ಪತ್ನಿಯ ಹೊಸ ರೂಪಕ್ಕೆ ತಾಂಡವ್​ ಬೆಚ್ಚಿ ಬಿದ್ದಿದ್ದಾನೆ. ಮುಂದೇನು? ಕೋರ್ಟ್​ ಸೀನ್​ ಬರುತ್ತದೆಯೆ? ಡಿವೋರ್ಸ್​ ವಿಷ್ಯ ಏನಾಗುತ್ತೆ? ಶ್ರೇಷ್ಠಾಳ ಕಥೆ?

ಮೊಬೈಲ್​ಗೆ ಬಂದ ಮೆಸೇಜ್​ ನೋಡಿ ಮೂರ್ಛೆ ಹೋದ ಸೀತಾ! ಅದರಲ್ಲಿದೆ ಹಿಂದಿನ ಜೀವನದ ಗುಟ್ಟು..!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!