ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!

Published : Jan 29, 2025, 04:48 PM ISTUpdated : Jan 29, 2025, 04:52 PM IST
ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!

ಸಾರಾಂಶ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದ ನಂತರ ಬಂದ ಸುಬ್ಬಿ ಪಾತ್ರ ವೀಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಟಿಆರ್‌ಪಿ ಕೂಡ ಕುಸಿತ ಕಂಡಿತು. ಈಗ ಸುಬ್ಬಿ ಮತ್ತು ಸಿಹಿ ಒಂದಾಗಿ ಭಾರ್ಗವಿ ಚಿಕ್ಕಿಯ ಅಸಲಿಯತ್ತನ್ನು ಬಯಲು ಮಾಡಬೇಕಿದೆ. ರಿತು ಸಿಂಗ್ ಮೊದಲ ವಿಮಾನ ಯಾನದ ವಿಡಿಯೋ ವೈರಲ್ ಆಗಿದೆ.

ಸಿಹಿ ಈಗ ಸುಬ್ಬಿ ಆಗಿದ್ದಾಳೆ. ಇಲ್ಲಿಯವರೆಗೆ ಸಿಹಿ ಸಿಹಿ ಎಂದು ಎಲ್ಲರ ಬಾಯಲ್ಲಿಯೂ ನಲಿದಾಡುತ್ತಿದ್ದ ಮುದ್ದು ರಿತು ಸಿಂಗ್​ ಈಗ ಸುಬ್ಬಿ ಆಗಿ ವಿಭಿನ್ನ ರೀತಿಯ ಗೆಟಪ್​ ಜೊತೆ, ಹಳ್ಳಿ ಭಾಷೆಯಲ್ಲಿಯೂ ಮಿಂಚುತ್ತಿದ್ದಾಳೆ. ಆದರೆ ಸಿಹಿ ಪಾತ್ರವನ್ನು ಸಾಯಿಸಿದ ಮೇಲೆ ಸೀತಾರಾಮ ಸೀರಿಯಲ್​ ಟಿಆರ್​ಪಿ ದಿಢೀರ್​ ಕುಸಿದಿದೆ ಎನ್ನುವುದಕ್ಕೆ ಬದಲಾಗಿರುವ ಸೀರಿಯಲ್​ ಸಮಯವೇ ಸಾಕ್ಷಿಯಾಗಿದೆ. ಸೀತಾ ಮತ್ತು ರಾಮ ಯಾವಾಗ ಒಂದಾಗ್ತಾರೆ ಎಂದು ಆರಂಭದಿಂದ ಕಾತರದಿಂದ ಕಾಯುತ್ತಲೇ ಈ ಸೀರಿಯಲ್​ ಟಿಆರ್​ಪಿ ಏರಿಸಿಕೊಂಡಿತ್ತು. ವರ್ಷಗಟ್ಟಲೆ ಇದಕ್ಕಾಗಿಯೇ ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ಚಿತ್ರ-ವಿಚಿತ್ರ ತಿರುವು ಪಡೆದುಕೊಂಡು ಸೀತಾ  ಮತ್ತು ರಾಮ ಒಂದಾದರು. ಅದಾದ ಬಳಿಕ ಸಿಹಿಯ ಅಧ್ಯಾಯ ಶುರುವಾಯಿತು. ಸಿಹಿಯ ಅಪ್ಪ ಯಾರು ಎಂಬೆಲ್ಲಾ ಕುತೂಹಲವನ್ನು ಧಾರಾವಾಹಿ ಹಿಡಿದಿಟ್ಟುಕೊಂಡಿತು.

ಯಾರೂ ಊಹಿಸಲಾಗದ ಟ್ವಿಸ್ಟ್​ ಅನ್ನು ಸೀರಿಯಲ್​ಗೆ ಕೊಟ್ಟು, ಸೀತಾ ಸಿಹಿಗೆ ಬಾಡಿಗೆ ತಾಯಿ ಎಂದು ತೋರಿಸಲಾಯಿತು. ಇದೇ ವೇಳೆ, ರಿಯಲ್​ ಅಪ್ಪ-ಅಮ್ಮನ ಎಂಟ್ರಿಯಾಗಿ ಸಿಹಿಗಾಗಿ ಜಟಾಪಟಿ ನಡೆಯಿತು. ದೇವರೇ ಸಿಹಿ ಸೀತಾಳ ಮಗಳು, ಅವಳಿಗೇ ಸಿಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಹರಕೆಯನ್ನೂ ಹೊತ್ತುಬಿಟ್ಟರು. ಸಿಹಿ ಯಾರ ಪಾಲಾಗುತ್ತಾಳೆ ಎಂದು ಕಾತರದಿಂದ ಕಾಯುತ್ತಲೇ ಸೀರಿಯಲ್​ ಮತ್ತಷ್ಟು ಟಿಆರ್​ಪಿ ಹೆಚ್ಚಿಸಿಕೊಂಡಿತು. ಇನ್ನೇನು ಎಲ್ಲವೂ ಸುಗಮವಾಗಿ ವೀಕ್ಷಕರು ಖುಷಿಯಿಂದ ಇದ್ದಾರೆ ಎನ್ನುವಾಗಲೇ ಟಿಆರ್​ಪಿ ರೇಟ್​ ನೋಡಿ ಧಾರಾವಾಹಿಯನ್ನು ಮತ್ತಷ್ಟು ಎಳೆಯಲಾಯಿತು. ಸಿಹಿಯ ಪಾತ್ರವನ್ನೇ ಸಾಯಿಸಿಬಿಟ್ಟರು. ಇದು ವೀಕ್ಷಕರಿಗೆ ನುಂಗುಲಾಗದ ತುತ್ತಾಯಿತು.

ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್‌ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್‌ ಕಿಡಿಯ ನುಡಿ

ಆ ಬಳಿಕ, ಸುಬ್ಬಿ ಪಾತ್ರವನ್ನು ಅನಗತ್ಯವಾಗಿ ತುರುಕಲಾಯಿತು. ಅವಳಿ ಮಕ್ಕಳು ಹುಟ್ಟಿದ್ದರು ಎನ್ನುವ ವಿಷಯವನ್ನು ಅಲ್ಲಿ ಸೇರಿಸಿದ್ದು, ಆ ಬಳಿಕ ಸಿಹಿ ಭೂತಳಾಗಿ ಯಾರಿಗೂ ಕಾಣಿಸದೇ, ಸುಬ್ಬಿಗೆ ಮಾತ್ರ  ಕಾಣಿಸುವುದು... ಇವೆಲ್ಲವೂ ಯಾಕೋ ವೀಕ್ಷಕರಿಗೆ ರುಚಿಸಲೇ ಇಲ್ಲ. ಅಲ್ಲಿಯೇ ಸೀರಿಯಲ್​ ತಳ ಹಿಡಿಯಲು ಶುರುವಾಗಿದ್ದು, ಸಮಯದ ಬದಲಾವಣೆ ಆಗಿದೆ. ಈಗ ಏನಿದ್ದರೂ ಸುಬ್ಬಿ ಮತ್ತು ಸಿಹಿ ಒಂದಾಗಿ ಭಾರ್ಗವಿ ಚಿಕ್ಕಿಯ ಅಸಲಿಯತ್ತನ್ನು ಬಯಲು ಮಾಡಬೇಕಿದೆ ಅಷ್ಟೇ. ಆದರೆ, ಸೀರಿಯಲ್​ ವೀಕ್ಷಕರಿಗೆ ಅಷ್ಟು ಪ್ರಿಯ ಆಗದೇ ಇದ್ದರೂ ಸಿಹಿ ಮತ್ತು ಸುಬ್ಬಿ ಪಾತ್ರಧಾರಿ ರಿತು ಸಿಂಗ್​ ಮಾತ್ರ ಆಪ್ತಳಾಗುತ್ತಲೇ ಇದ್ದಾಳೆ. ಇದೀಗ ಸೀತಾ ಅರ್ಥಾತ್​ ವೈಷ್ಣವಿ ಗೌಡ ಅವರು ರಿತು ಸಿಂಗ್​ ಮತ್ತು ಆಕೆಯ ಅಮ್ಮನ ಜೊತೆ ಬೆಂಗಳೂರಿನಿಂದ ಕಾರ್ಯಕ್ರಮವೊಂದಕ್ಕೆ ಹುಬ್ಬಳ್ಳಿಗೆ ಹೋಗಿದ್ದು, ಅದರ ವಿಡಿಯೋ ಅನ್ನು ವೈಷ್ಣವಿ ಶೇರ್​ ಮಾಡಿಕೊಂಡಿದ್ದಾರೆ.

ಇದು ಸಿಹಿಯ ಮೊದಲ ವಿಮಾನ ಯಾತ್ರೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಸಿಹಿಯ ತುಂಟಾಟ, ವಯಸ್ಸಿಗಿಂತಲೂ ಹೆಚ್ಚಿನ ಮಾತುಕತೆ ಎಲ್ಲವನ್ನೂ ನೋಡಬಹುದಾಗಿದೆ. ಇನ್ನು ರಿತು ಸಿಂಗ್‌ ಕುರಿತು ಹೇಳುವುದಾದರೆ, ಈಕೆ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಈ ಹಿಂದೆ ರಿಯಾಲಿಟಿ ಷೋನಲ್ಲಿ ಇವರ ಅಮ್ಮ ಗೀತಾ, ನಾನು ಇವಳಿಗೆ ಅಮ್ಮ ಅಲ್ಲ, ಇವಳೇ ನನ್ನ ಅಮ್ಮ ಎಂದುಹೇಳಿದ್ದು. ನಾನು ಊಟ ಮಾಡಿಲ್ಲ ಅಂದ್ರೆ ರಿತು ಯಾಕೆ ಊಟ ಮಾಡಿಲ್ಲ ಅಂತ ಕೇಳ್ತಾಳೆ. ಮಕ್ಕಳನ್ನು ತಾಯಿ ಕೇರ್ ಮಾಡಬೇಕು, ಆದರೆ ನನ್ನ ಮಗಳು ನನ್ನನ್ನು ಕೇರ್ ಮಾಡ್ತಾಳೆ, ನನಗೆ ಕನ್ನಡ ಬರೋದಿಲ್ಲ. ನೇಪಾಳದಲ್ಲಿ ಕೂಡ ಜೀ ಕನ್ನಡ ವಾಹಿನಿ ನೋಡ್ತಾರೆ. ಅವರು ರಿತು ನೋಡಿ ಹೊಗಳ್ತಾರೆ. ರಿತು ತಂದೆಗೂ ಕೂಡ ಮಗಳು ಏನು ಅಂತ ಗೊತ್ತಾಗಬೇಕು ಅಂತ ಜನರು ಹೇಳ್ತಾರೆ  ಗೀತಾ ಹೇಳಿದ್ದರು.

ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್‌ ಮಾತಲ್ಲಿ ಕೇಳಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!