ನನ್ನ ಸಕ್ಸಸ್​ಗೆ ಕಾರಣ ಪಲಾವ್​ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್​

Published : Feb 22, 2025, 04:34 PM ISTUpdated : Feb 22, 2025, 06:45 PM IST
ನನ್ನ ಸಕ್ಸಸ್​ಗೆ ಕಾರಣ ಪಲಾವ್​ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್​

ಸಾರಾಂಶ

ನಟಿ ವೈಷ್ಣವಿ ಗೌಡ ಸಾರ್ವಜನಿಕ ಜೀವನದಲ್ಲಿನ ಕೆಟ್ಟ ದೃಷ್ಟಿ ಮತ್ತು ನೆಗೆಟಿವ್ ಎನರ್ಜಿ ಬಗ್ಗೆ ಮಾತನಾಡಿದ್ದಾರೆ. ಲವಂಗ, ಏಲಕ್ಕಿ, ಚಕ್ಕೆಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು, ಬೇ ಲೀಫ್ ಮೇಲೆ ಆಸೆ ಬರೆದು ಸುಡುವುದು, ಉಗುರುಬೆಚ್ಚಗಿನ ಉಪ್ಪುನೀರಿನಲ್ಲಿ ಕಾಲು ಇಡುವುದು ನೆಗೆಟಿವ್ ಎನರ್ಜಿಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಟ್ಯಾರೋ ಕಾರ್ಡ್ ರೀಡರ್ ಜಯಶ್ರೀ ಮದುವೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ವೈಷ್ಣವಿ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದರು.

ಸೀತಾರಾಮ ಸೀರಿಯಲ್​ ಸೀತೆ ಉರ್ಫ್​ ವೈಷ್ಣವಿ ಗೌಡ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಇದೀಗ ತಮ್ಮ ಸಕ್ಸಸ್​ ಕುರಿತು ಮಾತನಾಡಿದ್ದಾರೆ. ಸಾಮಾನ್ಯವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಕೆಟ್ಟ ದೃಷ್ಟಿ ಬೀಳುವುದು ಸಹಜ. ಅಷ್ಟೇ ಅಲ್ಲದೇ ಕೆಲವರಿಗೆ ಇಂಥ ಕೆಟ್ಟ ದೃಷ್ಟಿಗಳು ಬಹುಬೇಗನೇ ತಲಗುತ್ತವೆ. ಇದರಿಂದಾಗಿಯೇ ಕೆಲವೊಮ್ಮೆ ಸಕ್ಸಸ್​ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತವೆ. ಇವೆಲ್ಲವುಗಳ ಬಗ್ಗೆ ನಟಿ ವಿಡಿಯೋದಲ್ಲಿ ಶೇರ್​ ಮಾಡಿದ್ದಾರೆ.  ತಾವು ಎಲ್ಲಿಗೆ ಹೋಗುವುದಾದರೂ ಕೆಟ್ಟ ದೃಷ್ಟಿ, ನೆಗೆಟಿವ್​ ಎನರ್ಜಿ ಬಳಿಗೆ ಸುಳಿಯಬಾರದು ಎನ್ನುವ ಕಾರಣಕ್ಕೆ, ಲವಂಗ, ಏಲಕ್ಕಿ ಹಾಗೂ ಚಕ್ಕೆಯ ಚೂರುಗಳನ್ನು ಚಿಕ್ಕ ಪರ್ಸ್​ನಲ್ಲಿ ಇಟ್ಟುಕೊಂಡು ಹೋಗುವುದಾಗಿ ಹೇಳಿದ್ದಾರೆ. ಇದರ ಮಹತ್ವವನ್ನೂ ಅವರು ತಿಳಿಸಿಕೊಟ್ಟಿದ್ದಾರೆ. 

ಇದರ ಜೊತೆ ವಿಶೇಷವಾದ ಎಲೆಯ ಪರಿಚಯ ಅವರು ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವ ಪಲಾವಿನ ಎಲೆ ಇದು. ಬೇ ಲೀಫ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಅದರ ಮೇಲೆ ತನಗೆ ಏನು ಆಗಬೇಕು ಎನ್ನುವ ವಿಷ್​ಗಳನ್ನು ಬರೆದು, ಒಂದು ಪ್ಲೇಟ್​ನಲ್ಲಿ ಅವುಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿ, ಅದನ್ನು ಗಾಳಿಯಲ್ಲಿ ಬಿಡುವಂತೆ ಹೇಳಿದ್ದಾರೆ. ಇದರಿಂದ ಯಾವುದೋ ರೂಪದಲ್ಲಿ ವಿಷ್​ ನೆರವೇರುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಉಗುರುಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪು ಹಾಕಿಕೊಂಡು ಒಂದು ಬಕೆಟ್​ನಲ್ಲಿ ಸ್ವಲ್ಪ ಸಮಯ ಕಾಲನ್ನು ಹಾಕಿ ಕುಳಿತುಕೊಂಡರೆ ನೆಗೆಟಿವ್​ ಎನರ್ಜಿ ಹೋಗುವುದಾಗಿ ಹೇಳಿದ್ದಾರೆ.  

ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್‌ ಟೂರ್ ವಿಡಿಯೋ ವೈರಲ್

ಈ ಹಿಂದೆ, ಟ್ಯಾರೋ ಕಾರ್ಡ್ ಓದುವಿಕೆ ಮೂಲಕ ರೀಡರ್‍‌ ಜಯಶ್ರೀ ಅವರಿಂದ ತನ್ನ  ಮದುವೆಯ ಬಗ್ಗೆ ಕೇಳಿದ್ದರು ವೈಷ್ಣವಿ.  ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡರಲಿಲ್ಲ. ಭವಿಷ್ಯದಲ್ಲಿ ಯಾರಿಗಾದ್ರೂ ಏನಾದರೂ ಸಹಾಯ ಮಾಡುವುದಿದ್ದರೆ ಯೋಚನೆ ಮಾಡಿ ಮಾಡಬೇಕು. ನಿಮಗೆ ಕಾಲೆಳೆಯುವವರೇ ಜಾಸ್ತಿ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಏನಾದ್ರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದರು. ರಿಲೇಷನ್​ಷಿಪ್​ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್​ ಮಾಡಬೇಕು. ಆಮೇಲೆ ಮುಂದುವರೆಯಬೇಕು ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು. ಮದುವೆ, ರಿಲೇಷನ್​ಷಿಪ್​ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್​ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದರು.  

  
ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಪ್ರಿಯಾ ಮದ್ವೆ ಆಯ್ತು, ಈಗೇನಿದ್ರೂ ಸೀತಾಳದ್ದು! 'ಆ ಹುಡುಗನ' ಬಗ್ಗೆ ಬಾಯ್ಬಿಟ್ಟು ಎಲ್ಲರ ಹುಬ್ಬೇರಿಸಿದ ವೈಷ್ಣವಿ ಗೌಡ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ