ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಮದ್ವೆ ಯಾವಾಗ? ಹುಡುಗ ಯಾರು? ಟ್ಯಾರೋ ಕಾರ್ಡ್ ರೀಡಿಂಗ್ ಮೂಲಕ ಸಂಪೂರ್ಣ ಡಿಟೇಲ್ಸ್ ಕೊಟ್ಟ ನಟಿ
ಸೀತಾರಾಮ ಸೀರಿಯಲ್ನಲ್ಲಿ ಸೀತಾ ಮತ್ತು ರಾಮನ ಮದುವೆಯಾಗಿದ್ದು, ಮದುವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೊಂದು ಮಗುವಿಗಾಗಿ ಮನೆಯಲ್ಲಿ ಬಹಳ ಮಾತುಕತೆ ನಡೆಯುತ್ತಿದೆ. ಅದೇ ಇನ್ನೊಂದೆಡೆ ಮಗಳು ಸಿಹಿ ಬೋರ್ಡಿಂಗ್ ಸ್ಕೂಲ್ ಸೇರಿದ್ದು, ಅಲ್ಲಿ ಡಾ.ಮೇಘಶ್ಯಾಮ್ ಹತ್ತಿರ ಆಗಿದ್ದಾಳೆ. ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ ಇರಬಹುದಾ ಎನ್ನುವ ಕುತೂಹಲವಿದೆ. ಇದು ಸೀರಿಯಲ್ ಕಥೆಯಾದ್ರೆ, ನಿಜ ಜೀವನದಲ್ಲಿ ಸೀತಾಳ ಮದ್ವೆ ಯಾವಾಗ? ಹುಡುಗ ಯಾರು ಎಂಬುದು ಹಲವರ ಪ್ರಶ್ನೆ. ಸೀತಾ ಮತ್ತು ರಾಮ್ ಅಂದ್ರೆ ವೈಷ್ಣವಿ ಗೌಡ ಮತ್ತು ಗಗನ್ ಅವರ ಕೆಮೆಸ್ಟ್ರಿ ಮೆಚ್ಚಿಕೊಂಡಿರೋ ಅಭಿಮಾನಿಗಳು ನೀವಿಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಿ ಅನ್ನುತ್ತಿದ್ದಾರೆ. ಆದರೆ ನಿಜ ಜೀವನ ಹಾಗಲ್ವಲ್ಲಾ? ಸೀರಿಯಲ್ಗಳಲ್ಲಿ ಇವತ್ತು ಒಬ್ಬರು, ಮತ್ತೊಂದು ಸೀರಿಯಲ್ನಲ್ಲಿ ಮತ್ತೊಬ್ಬರು. ಫ್ಯಾನ್ಸ್ಗೇನು? ಏನೇನೋ ಹೇಳ್ತಾರೆ. ಆದ್ರೆ ರಿಯಲ್ ಲೈಫ್ನಲ್ಲಿ ಸೀತಾ ಭವಿಷ್ಯ ಏನು?
ಇದೀಗ ವೈಷ್ಣವಿ ಅವರು ಟ್ಯಾರೋ ಕಾರ್ಡ್ ಓದುವಿಕೆ ಮೂಲಕ ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಟ್ಯಾರೋ ಕಾರ್ಡ್ ರೀಡಿಂಗ್ ಕಾರ್ಟೊಮ್ಯಾನ್ಸಿಯ ಒಂದು ರೂಪವಾಗಿದೆ, ಅದರ ಮೂಲಕ ಹಿಂದಿನ, ವರ್ತಮಾನ ಅಥವಾ ಭವಿಷ್ಯದ ಬಗ್ಗೆ ಒಳನೋಟವನ್ನು ಪಡೆಯಬಹುದಾಗಿದೆ. ಇದು ಬಹಳ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಅದರ ಮೂಲಕ ವೈಷ್ಣವಿ ಈ ಮಾಹಿತಿ ನೀಡಿದ್ದಾರೆ. ಟ್ಯಾರೋ ಕಾರ್ಡ್ ತಜ್ಞರಾದ ಜಯಶ್ರೀ ಅವರು ಇವರಿಗೆ ಮಾಹಿತಿ ನೀಡಿದ್ದಾರೆ.
undefined
ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?
ಭೂತಕಾಲದಲ್ಲಿ ವೈಷ್ಣವಿ ಅವರು ತುಂಬಾ ತೊಂದರೆ ಪಟ್ಟಿದ್ದರು. ಅವರಿಗೆ ಹಿಂದಿನ ಬಗ್ಗೆ ತುಂಬಾ ಬೇಜಾರು ಇದೆ. ಯಾವುದೇ ಬೆಳವಣಿಗೆ ಆಗುತ್ತಿರಲಿಲ್ಲ. ಅಂದುಕೊಂಡದ್ದು ಏನೂ ಆಗ್ತಿರಲಿಲ್ಲ. ಎಷ್ಟೇ ಶ್ರಮ ವಹಿಸಿದರೂ ಅಂದುಕೊಂಡಿದ್ದು ಸಾಧಿಸಲು ಆಗ್ತಿರಲಿಲ್ಲ. ಆದರೆ ವರ್ತಮಾನದಲ್ಲಿ ಎಲ್ಲವೂ ಚೆನ್ನಾಗಿದೆ. ಅಂದುಕೊಂಡದ್ದೆಲ್ಲಾ ಆಗ್ತಿದೆ. ಹೊಸ ಹೊಸ ಉಡುಗೊರೆಗಳು ಅಂದರೆ ಸೌಕರ್ಯಗಳು ಸಿಕ್ತಿವೆ. ಹಣಕಾಸು ಸ್ಥಿತಿ ಚೆನ್ನಾಗಿದೆ. ಆದರೆ ವೈಷ್ಣವಿ ಅವರು ಮಾನಸಿಕವಾಗಿ ಸ್ಥಿರತೆ ಹೊಂದುವುದು ಅವರ ವರ್ತಮಾನ ಮತ್ತು ಭವಿಷ್ಯಕ್ಕೆ ತುಂಬಾ ಮುಖ್ಯ ಎಂದಿದ್ದಾರೆ ಜಯಶ್ರೀ. ಎಮೋಷನರಿ ಸ್ಟೇಬಲ್ ಆದರೆ ಮಾತ್ರ ಎಲ್ಲವೂ ಸಾಧ್ಯ. ತುಂಬಾ ಅಸಮತೋಲನ ಆಗ್ತಿದೆ, ಮಾನಸಿಕ ತೊಳಲಾಟ ಇದೆ ಎಂದಿದ್ದಾರೆ. ಹಳೆಯ ಸಂಬಂಧದಿಂದ ನಿಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಅದರಿಂದ ಹೊರಕ್ಕೆ ಬಂದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ವೈಷ್ಣವಿ ಅವರಿಗೆ ಮದುವೆ ನಿಶ್ಚಯವಾಗಿತ್ತು. ಅದು ಕೆಲ ಕಾರಣಗಳಿಂದ ನಿಂತು ಹೋಗಿತ್ತು. ಅದನ್ನೇ ಜಯಶ್ರೀ ಅವರು ಹೇಳಿದ್ದಾರೆ.
ಇನ್ನು ವೈಷ್ಣವಿ ಅವರು, ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡಲಿಲ್ಲ. ಭವಿಷ್ಯದಲ್ಲಿ ಯಾರಿಗಾದ್ರೂ ಏನಾದರೂ ಸಹಾಯ ಮಾಡುವುದಿದ್ದರೆ ಯೋಚನೆ ಮಾಡಿ ಮಾಡಬೇಕು. ನಿಮಗೆ ಕಾಲೆಳೆಯುವವರೇ ಜಾಸ್ತಿ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಏನಾದ್ರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದಾರೆ. ರಿಲೇಷನ್ಷಿಪ್ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್ ಮಾಡಬೇಕು. ಆಮೇಲೆ ಮುಂದುವರೆಯಬೇಕು ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಮದುವೆ, ರಿಲೇಷನ್ಷಿಪ್ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದಾರೆ. ಈ ಮೂಲಕ ಸಂಬಂಧ, ಮದುವೆಯ ಕುರಿತು ವೈಷ್ಣವಿ ಅವರಿಗೆ ಇದರಿಂದ ಸ್ಪಷ್ಟವಾದ ಉತ್ತರ ಸಿಗಲಿಲ್ಲ. ಅಭಿಮಾನಿಗಳೂ ನಿರಾಶರಾಗಿದ್ದಾರೆ.
ಯಾವ ಪೇನ್ ಕಿಲ್ಲರೂ ವರ್ಕ್ ಆಗ್ಲಿಲ್ಲ, ನಾನ್ಯಾರು ಅಂತ ಕೇಳಿದೆ... ಅಪರ್ಣಾರ ಕರಾಳ ರಾತ್ರಿ ನೆನಪಿಸಿದ ನಾಗರಾಜ್