ಶ್ರೀರಸ್ತು ಶುಭಮಸ್ತು ಸೀರಿಯಲ್ ಕುತೂಹಲ ಘಟ್ಟ ತಲುಪಿದ್ದು, ಪೂರ್ಣಿಯ ಅಸಲಿ ಅಪ್ಪ-ಅಮ್ಮ ಬಯಲಾಗುವ ಕಾಲ ಬಂದೇ ಬಿಟ್ಟಿದೆ.
ಶ್ರೀರಸ್ತು ಶುಭಮಸ್ತುವಿನ ಅತಿ ಮುಗ್ಧೆ ಹಾಗೂ ಒಳ್ಳೆಯ ಸೊಸೆ ಎಂದ್ರೆ ಆಕೆ ಪೂರ್ಣಿ. ಈಕೆಯನ್ನು ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.
ಆದರೆ ಈ ಹಿಂದೆ ಆಸ್ತಿಯ ಸಲುವಾಗಿ ದೀಪಿಕಾಳ ಅಪ್ಪ ಪೂರ್ಣಿಯನ್ನೇ ತಮ್ಮ ಮಗಳು ಎಂದು ಪ್ಲ್ಯಾನ್ ಮಾಡಿ ಕರೆದುಕೊಂಡು ಬಂದಿದ್ದ. ಇದಕ್ಕೆ ದೀಪಿಕಾ ಕೈಜೋಡಿಸಿದ್ದಳು. ಪೂರ್ಣಿ ಕೂಡ ತನ್ನ ಹೆತ್ತ ಅಪ್ಪ-ಅಮ್ಮ ಸಿಕ್ಕ ಖುಷಿಗೆ ನಲಿದಾಡಿದ್ದಳು. ಆದರೆ ಕೊನೆಗೆ ಅಸಲಿಯತ್ತು ಗೊತ್ತಾಗಿತ್ತು. ಆದರೆ ಇದೀಗ ಮತ್ತೆ ಟ್ವಿಸ್ಟ್ ಬಂದಿದೆ. ಅದೇನೆಂದರೆ, ನಿಜಕ್ಕೂ ಪೂರ್ಣಿಗೆ ದೀಪಿಕಾನೇ ಸಹೋದರಿ. ಅಂದರೆ ದೀಪಿಕಾ ಅಪ್ಪ-ಅಮ್ಮನೇ ಪೂರ್ಣಿಯ ಅಪ್ಪ-ಅಮ್ಮ ಎನ್ನುವುದು. ತುಳಸಿಗೆ ಈ ವಿಷಯ ಈಗ ತಿಳಿದಿದೆ. ಪೂರ್ಣಿಯನ್ನು ಅನಾಥಾಶ್ರಮದಲ್ಲಿ ಇಟ್ಟ ಸಂದರ್ಭದಲ್ಲಿ ಅವಳ ಅಮ್ಮ ವನಜಾ ಕುತ್ತಿಗೆಗೆ ಒಂದು ಸರ ಹಾಕಿದ್ದಳು. ತುಳಸಿ ದೀಪಿಕಾಳ ತವರು ಮನೆಗೆ ಹೋದಾಗ ಅಲ್ಲಿ ಪೂರ್ಣಿಯ ಬಾಲ್ಯದ ಫೋಟೋ ನೋಡುತ್ತಾಳೆ. ಅದರಲ್ಲಿ ಸರ ನೋಡುತ್ತಾಳೆ. ಆಗ ಅವಳಿಗೆ ಮಾತುಕತೆಯಲ್ಲಿ ಪೂರ್ಣಿಯೇ ಇವರ ಮಗಳು ಎಂದು ಗೊತ್ತಾಗುತ್ತದೆ.
ಯಾವ ಪೇನ್ ಕಿಲ್ಲರೂ ವರ್ಕ್ ಆಗ್ಲಿಲ್ಲ, ನಾನ್ಯಾರು ಅಂತ ಕೇಳಿದೆ... ಅಪರ್ಣಾರ ಕರಾಳ ರಾತ್ರಿ ನೆನಪಿಸಿದ ನಾಗರಾಜ್
ಆದರೆ ಮಾಧವ ಈ ವಿಷಯವನ್ನು ಪೂರ್ಣಿಗೆ ಹೇಳಬೇಡಿ ಎಂದು ಪತ್ನಿಗೆ ಹೇಳಿದ್ದಾನೆ. ಹಿಂದೆ ಇದೇ ವಿಷಯದಲ್ಲಿ ಮೋಸ ಹೋಗಿ ನೋವನ್ನುಂಡಿದ್ದಾಳೆ ಪೂರ್ಣಿ. ಮತ್ತೆ ಈ ವಿಷಯ ಹೇಳುವುದು ಬೇಡ ಎನ್ನುವುದು ಅವನ ಮಾತು. ಆದ್ರೆ ಈಗ ಸತ್ಯ ಗೊತ್ತಾಗುವ ಟೈಮ್ ಬಂದಂತೆ ಕಾಣುತ್ತಿದೆ. ವನಜಾ ತುಳಸಿ ಮನೆಗೆ ಬಂದಿದ್ದಾಳೆ. ಈ ಸಮಯದಲ್ಲಿ ಅವಳು ಅದ್ಯಾಕೋ ಪೂರ್ಣಿಯನ್ನು ನೋಡಲು ಹವಣಿಸುತ್ತಿದ್ದಾಳೆ. ಪೂರ್ಣಿಗೂ ವನಜಾ ಕಂಡ್ರೆ ಅದೇನೋ ಅಕ್ಕರೆ. ಕಣ್ಣು ಅರಿದ್ದನ್ನು ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ. ಪೂರ್ಣಿ ಅಮ್ಮ ಕೊಟ್ಟ ಸರವನ್ನು ಧರಿಸಿ ಬಂದಿದ್ದಾಳೆ. ವನಜಾಳನ್ನು ಪೂರ್ಣಿ ತಬ್ಬಿಕೊಳ್ಳುವ ಸಂದರ್ಭದಲ್ಲಿ ವನಜಾಳ ಮಂಗಳಸೂತ್ರಕ್ಕೆ ಪೂರ್ಣಿಯ ಸರ ಸಿಕ್ಕಿಬಿದ್ದಿದೆ. ಅದನ್ನು ನೋಡಿ ವನಜಾಗೆ ಶಾಕ್ ಆಗಿದೆ. ತುಳಸಿ ಕೂಡ ಇದನ್ನು ಗಮನಿಸಿದ್ದಾಳೆ.
ಈಗ ಮತ್ತಷ್ಟು ವಿಳಂಬ ಮಾಡದೇ, ಸೀರಿಯಲ್ ಎಳೆಯದೇ ಅಮ್ಮ ಯಾರು ಎನ್ನುವುದನ್ನು ತೋರಿಸಿ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಮತ್ತೆ ಕೆಲವರು ಊರಿಗೆಲ್ಲಾ ಇರೋದು ಒಂದೇ ಸರನಾ? ಒಂದು ರೀತಿಯದ್ದು, ಇನ್ನೊಂದು ಇರಬಾರದಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಸೀರಿಯಲ್ ಕುತೂಹಲ ಘಟ್ಟ ತಲುಪಿದೆ. ಈ ಮೊದಲೇ ನೆಟ್ಟಿಗರು ಈಕೆ ವಿಲನ್ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದರು. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳಿದ್ದರು. ಆದರೆ ಕೊನೆಗೆ ನಾಟಕೀಯ ತಿರುವಿನಲ್ಲಿ ಇದು ಸತ್ಯ ಎಂದು ತಿಳಿದಿತ್ತು. ಆದರೆ ದೀಪಿಕಾ ಅಪ್ಪ ಸತ್ಯವನ್ನು ಅರಿಯದೇ ಮೋಸದಾಟ ಮಾಡಿದ್ದ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ.
2 ವರ್ಷದಿಂದ ಒಂದೂ ಡ್ರೆಸ್ ರಿಪೀಟ್ ಹಾಕ್ಲಿಲ್ಲ: ರಾಯಭಾರಿ ನಿವೇದಿತಾಗೆ ಕಾರಣ ತಿಳಿಸಿದ 'ಸಾಧನಾ'